Passport ಪ್ರಕ್ರಿಯೆಗೆ ಡಿಜಿಲಾಕರ್ : ಸರಕಾರದಿಂದ ಮಹತ್ವದ ಬದಲಾವಣೆ ಜಾರಿ
Team Udayavani, Aug 21, 2023, 7:35 AM IST
ಭಾರತ ಡಿಜಿಟಲ್ ಇಂಡಿಯಾ ಪರಿಕಲ್ಪನೆಯಡಿಯಲ್ಲಿ ಪ್ರತೀ ಸೇವೆಯಲ್ಲೂ ಡಿಜಿಟಲ್
ಸ್ಪರ್ಶವನ್ನು ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಹೊಸಹೊಸ ನಿಯಮಗಳನ್ನು, ಯೋಜನೆಗಳನ್ನು ಜಾರಿಗೆ ತಂದಿದೆ. ಡಿಜಿಟಲ್ ಕರೆನ್ಸಿಯಿಂದ ಹಿಡಿದು, ಯುಪಿಐ ಪೇಮೆಂಟ್‌ವರೆಗೂ ಬಂದಿದ್ದೇವೆ. ಇದೀಗ ಪಾಸ್‌ಪೋರ್ಟ್ ವ್ಯವಸ್ಥೆಯಲ್ಲಿ ಭಾರತ ಸರಕಾರ ಹೊಸ ಬದಲಾವಣೆಯನ್ನು ತಂದಿದೆ. ಏನಿದು ಹೊಸ ನಿಯಮ ? ಇದು ಹೇಗೆ ಕಾರ್ಯ ನಿರ್ವಹಿಸಲಿದೆ ? ಎಂಬುದರ ಮಾಹಿತಿ ಇಲ್ಲಿದೆ.
ಏನು ಬದಲಾವಣೆ ?
ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭ ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವವರು ಇನ್ನು ಮುಂದೆ ತಮ್ಮ ಮಾಹಿತಿಗಳನ್ನು ಸರಕಾರದ ಡಿಜಿಲಾಕರ್ ವ್ಯವಸ್ಥೆಯ ಅಡಿಯಲ್ಲಿ ಸಲ್ಲಿಸಬಹುದಾಗಿದೆ. ಆ.5ರಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಡಿಜಿಲಾಕರ್‌ನಲ್ಲಿ ಮಾಹಿತಿಗಳನ್ನು ಅಪ್‌ಲೋಡ್ ಮಾಡಿದ ಅನಂತರ ಪಾಸ್‌ಪೋರ್ಟ್‌ಗೆ ಅರ್ಜಿ ಯನ್ನು ಸಹ ಆನ್‌ಲೈನ್ ಮೂಲಕವೇ ಸಲ್ಲಿಸಬಹುದಾಗಿದೆ. ಡಿಜಿಲಾಕರ್ ಖಾತೆಯಲ್ಲಿ ಪಾಸ್ ಪೋರ್ಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು scan ಮಾಡಿ ಸಂಗ್ರಹಿಸಿ ಇಡಬೇಕು. ಅನಂತರ ಆನ್‌ಲೈನ್ ಮೂಲಕ www.passportindia.gov.in ನಲ್ಲಿ ಅರ್ಜಿ ಸಲ್ಲಿಸಬಹುದು.
ಯಾಕಾಗಿ ನಿಯಮ ?
ಪಾಸ್‌ಪೋರ್ಟ್ ಕೇಂದ್ರಗಳು ಹಾಗೂ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿ ದಾಖಲಾತಿಯ ಭೌತಿಕ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ಆದರೆ ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ, ವ್ಯವಸ್ಥೆಯನ್ನು ಸರಳೀಕರಣಗೊಳಿಸುವಂತೆ ಜನಸಾಮಾನ್ಯರು ವಿದೇಶಾಂಗ ಸಚಿವಾಲಯಕ್ಕೆ ಮನವಿ ನೀಡಿದ್ದರು. ಹಾಗಾಗಿ ಈ ಹೊಸ ವಿಧಾನವನ್ನು ಜಾರಿಗೊಳಿಸಲಾಗಿದೆ.
ಸಮಯ ಉಳಿಕೆ, ಗುಣಮಟ್ಟ ಏರಿಕೆ
ಒಮ್ಮೆ ಡಿಜಿಲಾಕರ್‌ನಲ್ಲಿ ಮಾಹಿತಿಗಳನ್ನು ಸಲ್ಲಿಸಿದ ಅನಂತರ ಅರ್ಜಿದಾರರು ಮಾಹಿತಿಯ ಮುದ್ರಿತ ಪ್ರತಿಗಳನ್ನು ಸಲ್ಲಿಸಬೇಕಾದ ಅಗತ್ಯವಿರುವುದಿಲ್ಲ. ಹಾಗಾಗಿ ಅರ್ಜಿದಾರರಿಗೆ ಮಾಹಿತಿಯ ಪ್ರತಿಗಳನ್ನು ಹಿಡಿದು ಅಲೆಯುವ ಹೊರೆ ತಗ್ಗಲಿದೆ. ಜತೆಗೆ ಎಲ್ಲವೂ ಆನ್‌ಲೈನ್ ಮೂಲಕವೇ ಆಗುವುದರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಒಟ್ಟಾರೆ ಸಮಯವನ್ನು ಇದು ಕಡಿತಗೊಳಿಸಲಿದ್ದು, ಗುಣಮಟ್ಟವೂ ಏರಿಕೆಯಾಗಲಿದೆ.
ಏನಿದು ಡಿಜಿಲಾಕರ್ ?
ಭಾರತ ಸರಕಾರದ ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಜಾರಿಗೆ ತಂದಿರುವ ಡಿಜಿಟಲ್ ಸೇವೆ. ಈ ಡಿಜಿಲಾಕರ್‌ನಲ್ಲಿ ಸರಕಾರದಿಂದ ನೀಡುವ ಅಗತ್ಯ ದಾಖಲೆಗಳನ್ನು ಸುರಕ್ಷಿತವಾಗಿ ಶೇಖರಿಸಬಹುದಾಗಿದೆ. ಅಲ್ಲದೇ ಯಾವ ಸಮಯದಲ್ಲಿ ಬೇಕಾದರೂ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು.
ಡಿಜಿಲಾಕರ್ ಬಳಕೆ ಹೇಗೆ ?
ಡಿಜಿಲಾಕರ್ ಖಾತೆಯನ್ನು ತೆರೆಯಲು https://digitallocker.gov.in/ ಭೇಟಿ ನೀಡಿ ನಮ್ಮ ಆಧಾರ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮೂಲಕ ರಿಜಿಸ್ಟ್‌ರ್ ಮಾಡಿಕೊಳ್ಳಬೇಕು. ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರುವ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಅನ್ನು ಡಿಜಿಲಾಕರ್ ಖಾತೆಯನ್ನು ತೆರೆಯುವಾಗ ನಮೂದಿಸಿ ಲಾಗ್‌ಇನ್ ಆಗಬೇಕು.
ಏನೆಲ್ಲ ಸಂಗ್ರಹಿಸಬಹುದು ?
ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ, ರೇಶನ್ ಕಾರ್ಡ್, ಆರ್‌ಸಿ, ಡಿಎಲ್, ಜನನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್, ಆದಾಯ ತೆರಿಗೆ ಮೌಲ್ಯಮಾಪನ ಆದೇಶ, ಬಾಡಿಗೆ ಒಪ್ಪಂದ, ಅಂಕಪಟ್ಟಿ, ಇತರ ದಾಖಲಾತಿಯನ್ನು ಮೊದಲು ಸ್ಕ್ಯಾನ್ ಮಾಡಿ ಡಿಜಿಲಾಕರ್ ಖಾತೆಯಲ್ಲಿ ಸಂಗ್ರಹ ಮಾಡಬಹುದು.
ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.