Digital fraud: 70 ಲಕ್ಷ ನಂಬರ್ ನಿಷ್ಕ್ರಿಯ
Team Udayavani, Nov 29, 2023, 12:50 AM IST
ನವದೆಹಲಿ: ಡಿಜಿಟಲ್ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಕ್ರಮ ಹಣವರ್ಗಾವಣೆ ನಡೆಸಿರುವ ಶಂಕೆ ಇರುವಂಥ 70 ಲಕ್ಷ ಮೊಬೈಲ್ ನಂಬರ್‌ಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ತಿಳಿಸಿದ್ದಾರೆ.
ಡಿಜಿಟಲ್ ಹಣಕಾಸು ವ್ಯವಹಾರಗಳಲ್ಲಿ, ಡಿಜಿಟಲ್ ಪಾವತಿ ಗಳಲ್ಲಿ ವರದಿಯಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿ ನಲ್ಲಿ ಸ»ುನ್ನು ಆಯೋಜಿಸಲಾಗಿತ್ತು. ಆ ಬಳಿಕ ಮಾತನಾಡಿರುವ ವಿವೇಕ್, ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಬಲಪಡಿಸಲು ಬ್ಯಾಂಕ್‌ಗಳನ್ನು ಕೇಳಲಾಗಿದೆ. ಆಧಾರ್ ಆಧರಿತ ಪಾವತಿ ವ್ಯವಸ್ಥೆಗಳಲ್ಲೂ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ಗಮನಹರಿಸಲು ರಾಜ್ಯಗಳಿಗೆ ನಿರ್ದೇಶಿಸಿದ್ದೇವೆ. ಈಗಾಗಲೇ 70 ಲಕ್ಷ ಶಂಕಿತ ನಂಬರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು ಜನವರಿ ಯಲ್ಲಿ ಈ ಕುರಿತಾದ ಮತ್ತೂಂದು ಸಭೆ ನಡೆಯಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.