ಜಗತ್ತಿನ ಅತೀ ಪ್ರಾಚೀನ ಅರಣ್ಯ ಪತ್ತೆ!
ಅಮೆರಿಕದ ನ್ಯೂಯಾರ್ಕ್‌ನ ಕ್ಯಾಟ್‌ಸ್ಕಿಲ್ ಪರ್ವತಗಳ ತಪ್ಪಲಿನಲ್ಲಿ ಅರಣ್ಯ ಪತ್ತೆ! ಸುಮಾರು 386 ಮಿಲಿಯನ್ ವರ್ಷಗಳ ಅತೀ ಪ್ರಾಚೀನವಾದ ಅರಣ್ಯ
Team Udayavani, Jun 2, 2020, 6:30 PM IST
ಇತಿಹಾಸ ಎಂಬುವುದು ಹಾಗೆಯೇ ಅದು ಮಣ್ಣಿನಲ್ಲಿ ಮುಚ್ಚಿಹೋಗಿದೆ. ಉತ್ಖನನ ಮಾಡಿದಾಗಲೇ ತಿಳಿಯುವುದು ನಮಗೆ ಅಲ್ಲಿನ ಸ್ಥಳದ ಮಹಿಮೆ ಮತ್ತು ಐತಿಹಾಸಿಕ ಕುರುಹು. ಜಗತ್ತಿನ ಸೃಷ್ಟಿಯ ಬಗ್ಗೆ ನಾನಾ ರೀತಿಯ ಸಂಶೋಧನೆಗಳು ನಡೆದಿವೆ. ಹೇಗೆ ಹುಟ್ಟಿತು, ಕಾರಣವೇನು ಎಂಬ ಅಂಶಗಳನ್ನು ಅಧ್ಯಯನ ಮಾಡಿ ಜಗತ್ತಿಗೆ ತಿಳಿಸುವ ಕಾರ್ಯವಾಗುತ್ತಿದೆ.
ಜಗತ್ತಿನ ಅತೀ ಪ್ರಾಚೀನ ಅರಣ್ಯವೊಂದು ಈಗ ಪತ್ತೆಯಾಗಿದೆ! ನ್ಯೂಯಾರ್ಕ್ ಕ್ಯಾಟ್‌ಸ್ಕಿಲ್ ಪರ್ವತಗಳ ತಪ್ಪಲಿನಲ್ಲಿ ಜಗತ್ತಿನ ಅತೀ ಪ್ರಾಚೀನ ಅರಣ್ಯವನ್ನು ವಿಜ್ಞಾನಿಗಳು ಶೋಧಿಸಿದ್ದಾರೆ. ಇದು ಸುಮಾರು 386 ಮಿಲಿಯನ್ ವರ್ಷಗಳಷ್ಟು ಹಳೆಯ ಅರಣ್ಯವಾಗಿದ್ದು ಈ ಕಾಡು ಕಲ್ಲು, ಮಣ್ಣಿನ ಗಣಿಗಳಿಂದ ಕೂಡಿದೆ.
ಈ ಅತೀ ಪ್ರಾಚೀನ ಅರಣ್ಯವು ನ್ಯೂಯಾರ್ಕ್‌ನಿಂದ ಪೆನ್ಸಿಲ್ವೇನಿಯಾ ಅದರಾಚೆಗೂ ಹರಡಿಕೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಅರಣ್ಯದಲ್ಲಿ ಕ್ಲಾಡಾಕ್ಸಿಲೋಪ್ಸಿಡ್ ಮತ್ತು ಅರ್ಕಿಯೋಪ್ಟಿರಿಸ್ ಎಂಬ ಎರಡು ಜಾತಿಯ ಮರಗಳಿರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಇದರಲ್ಲಿ ಕ್ಲಾಡಾಕ್ಸಿಲೋಪ್ಸಿಡ್ ಮರವು ಜರಿಗಿಡದ ಸಸಿಯಾಗಿದ್ದು, ಯಾವುದೇ ಹಸುರು ಎಲೆಗಳನ್ನು ಹೊಂದಿಲ್ಲ ಮತ್ತು ಅರ್ಕಿಯೋಪ್ಟಿರಿಸ್ ಮರವು ಹಸುರು ಎಲೆ, 11 ಮೀ. ಹೆಚ್ಚು ಉದ್ದಗಳಷ್ಟು ವ್ಯಾಪಕವಾಗಿ ಬೇರಿನ ಜಾಲ ಹರಡಿಕೊಂಡಿರುವುದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ಈ ಪ್ರಾಚೀನ ಅರಣ್ಯದಲ್ಲಿ ಯಾವುದೇ ಹಕ್ಕಿಗಳು ಮತ್ತು ಪ್ರಾಣಿಗಳಿರುವುದು ಕಂಡು ಬಂದಿಲ್ಲ. ಇನ್ನು ಡೈನೋಸಾರ್‌ಗಳಂತ ಪ್ರಾಣಿಗಳು ಇರುವುದು ದೂರದ ಮಾತು. ಆದರೆ ಈ ಅರಣ್ಯದಲ್ಲಿ ಕೀಟಗಳ ವಾಸ ಸ್ಥಾನವಾಗಿದೆ. ಇನ್ನು ಈ ಅರಣ್ಯದ ವಾತಾವರಣವೂ ಭೂಮಿಯ ಹವಾಮಾನದ ಇತಿಹಾಸವನ್ನೇ ಸೂಚಿಸುವಂತಿದೆ. ಇಲ್ಲಿನ ಮರಗಳು ದಪ್ಪವಾಗಿದ್ದು, ಇಂಗಾಲದ ಡೈ ಆಕ್ಸೈಡ್‌ನ್ನು ಹೊರ ತಗೆಯುವಂತಿವೆ.
ಆದರೆ ಈ ಕಾಡಿನ ನಾಶ ಹೇಗಾಯಿತು ಎಂಬ ಕುತೂಹಲ ಪ್ರಶ್ನೆಗೆ ವಿಜ್ಞಾನಿಗಳು ಉತ್ತರಿಸುವಂತೆ; ಈ ಕಾಡು ಭಯಂಕರವಾದ ಪ್ರವಾಹಕ್ಕೆ ಸಿಲುಕಿ ನಾಶವಾಗಿರಬಹುದು ಎನ್ನುತ್ತಾರೆ. ಇಲ್ಲಿನ ಕಲ್ಲಿನ ಕ್ವಾರೆಯಲ್ಲಿರುವ ದೊಡ್ಡ ಪಳೆಯುವಳಿಕೆ ನೋಡಿದಾಗ ಈ ಅರಣ್ಯ ಪ್ರವಾಹಕ್ಕೇ ನಾಶವಾಗಿದೆ ಎಂಬ ಸತ್ಯ ಮೇಲ್ನೋಟಕ್ಕೆ ತಿಳಿಯಬಹುದಾಗಿದೆ ಎಂದು ಅಭಿಪ್ರಾಯಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.