![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Mar 9, 2022, 7:20 AM IST
ಕೀವ್/ಮಾಸ್ಕೋ: ಒಂದೆಡೆ ಬಿರುಸಿನ ಬಾಂಬ್ ದಾಳಿ; ಮತ್ತೊಂದೆಡೆ ಹೆಪ್ಪುಗಟ್ಟುವ ವಾತಾವರಣ. ಅದರ ಜತೆಗೆ ಜೀವ ಭಯದಿಂದ ಪರಾರಿಯಾಗುತ್ತಿರುವ ಉಕ್ರೇನಿಗರು. ಇದು ಮಂಗಳವಾರ ದಾಳಿಗೆ ಒಳಗಾಗಿರುವ ಉಕ್ರೇನ್‌ನ ಸೂಕ್ಷ್ಮ ಪರಿಸ್ಥಿತಿಯ ನೋಟ.
ನಗರಗಳಾಗಿರುವ ಸುಮಿ, ಇರ್ಪಿನ್, ಕೀವ್, ಚರ್ನಿಹಿವ್, ಮರಿಯುಪೋಲ್‌ಗಳಲ್ಲಿ ಸ್ಥಳೀಯರು ಮತ್ತು ವಿದೇಶಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ರಷ್ಯಾ ಸೇನೆ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಅದರ ನಡುವೆಯೇ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಿಕ್ಕ ವಾಹನಗಳಲ್ಲಿ ಪರಾರಿಯಾಗುತ್ತಿದ್ದಾರೆ.
ಸುಮಿಯಲ್ಲಿ ಜನರು ಬಸ್ ಮತ್ತು ಇತರ ವಾಹನಗಳನ್ನು ಏರಿ ಕೊಂಡು ಸಂಚರಿಸುತ್ತಿರುವಂತೆಯೇ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದಾಗಿ ಇಬ್ಬರು ಮಕ್ಕಳ ಸಹಿತ 21 ಮಂದಿ ನಾಗರಿ ಕರು ಅಸುನೀಗಿದ್ದಾರೆ. ಇರ್ಪಿನ್ ನಗರದಿಂದಲೂ ಕೂಡ ಜನರು ಕಾಲ್ನಡಿಗೆಯಲ್ಲಿಯೋ ವಾಹನಗಳಲ್ಲಿಯೋ ಎದ್ದು ಬಿದ್ದು ಪರಾರಿ ಯಾಗುತ್ತಿದ್ದಾರೆ. “ರಷ್ಯಾ ಸೇನೆಯ ದಾಳಿಯಿಂದಾಗಿ ಈಗ ಇರ್ಪಿನ್ ನಗರದಲ್ಲಿ ಯಾರೂ ಎಲ್ಲ. ಕೇವಲ ಧ್ವಂಸಗೊಂಡಿರುವ ಕಟ್ಟಡಗಳು ಮಾತ್ರ ಇವೆ’ ಎಂದು ನಾಗರಿಕರು ಹೇಳಿಕೊಂಡಿದ್ದಾರೆ. ಮರಿಯು ಪೋಲ್‌ನಲ್ಲಿ ಜನರನ್ನು ಸ್ಥಳಾಂತರಗೊಳಿಸುವ ಸಂದರ್ಭ ದಲ್ಲಿ ರಷ್ಯಾ ಸೇನೆ ಗುಂಡು ಹಾರಿಸಿದೆ ಎಂದು ಆರೋಪಿಸಲಾಗಿದೆ.
ಹೋರಾಟ ಬಿರುಸು: ಉಕ್ರೇನ್ ರಾಜಧಾನಿ ಕೀವ್‌ನ ಹೊರ ಭಾಗದಲ್ಲಿ ರಷ್ಯಾದ ವಿಶೇಷ ಪಡೆಗಳು ಮತ್ತು ಉಕ್ರೇನ್ ಸೈನಿಕರ ನಡುವೆ ಬಿರುಸಿನ ಹೋರಾಟವೇ ನಡೆದಿದೆ. ಒಂದು ಹಂತದಲ್ಲಿ ಎರಡೂ ದೇಶದ ಯೋಧರು ಮುಷ್ಟಿ ಯುದ್ಧವನ್ನೂ ಮಾಡಿದ್ದಾರೆ. ಫೆ.24ರ ಬಳಿಕ ಇದುವರೆಗಿನ ಕಾಳಗದಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ರಷ್ಯಾ ಯೋಧರು ಅಸುನೀಗಿದ್ದಾರೆ ಎಂದು ಉಕ್ರೇನ್ ಸರಕಾರ ಮಂಗಳವಾರ ಹೇಳಿಕೊಂಡಿದೆ.
ಹಿರಿಯ ಸೇನಾಧಿಕಾರಿ ಸಾವು: ರಷ್ಯಾಕ್ಕೆ ಆಘಾತಕಾರಿ ಅಂಶ ಎಂಬಂತೆ ಪುತಿನ್ ಸೇನೆಯ ಹಿರಿಯ ಅಧಿಕಾರಿ ಖಾರ್ಕಿವ್‌ನಲ್ಲಿ ನಡೆದ ಹೋರಾಟದಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಉಕ್ರೇನ್ ಪ್ರಕಟಿಸಿದೆ. ಅವರ ಜತೆಗೆ ಇನ್ನೂ ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅದು ತಿಳಿಸಿದೆ.
ರಷ್ಯಾದೊಂದಿಗೆ ಎಲ್ಲ ಸಂಬಂಧ ಕಡಿದುಕೊಂಡ ಶೆಲ್!
ಬಹುರಾಷ್ಟ್ರೀಯ ತೈಲ ಕಂಪೆನಿ ಶೆಲ್ ರಷ್ಯಾದಿಂದ ಕಚ್ಚಾತೈಲ, ತರಿಸಿಕೊಳ್ಳುವುದಿಲ್ಲ. ಆ ದೇಶದೊಂದಿಗಿನ ಎಲ್ಲ ವ್ಯಾವಹಾರಿಕ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ತಿಳಿಸಿದೆ. ರಷ್ಯಾದ ಕಚ್ಚಾತೈಲ, ಪೆಟ್ರೋಲಿಯಂ ಉತ್ಪನ್ನಗಳು, ಜೈವಿಕ ಅನಿಲ,ಎಲ್‌ಎನ್‌ಜಿ ಸೇರಿದಂತೆ ಯಾವುದೇ ವಸ್ತುಗಳನ್ನು ಅಲ್ಲಿಂದ ತರಿಸಿಕೊಳ್ಳುವುದಿಲ್ಲ. ಅದರ ಜತೆಗೆ ಹಂತಹಂತವಾಗಿ ಎಲ್ಲ ರೀತಿಯ ಸಂಬಂಧವನ್ನು ಕಡಿದುಕೊಳ್ಳುತ್ತೇವೆ ಎಂದು ಶೆಲ್ ಹೇಳಿದೆ. ಅಷ್ಟು ಮಾತ್ರವಲ್ಲ ಹಿಂದಿನ ವಾರ ಸರಕು ಸಾಗಣೆ ಹಡಗಿನ ಮೂಲಕ ರಷ್ಯಾದಿಂದ ಪೆಟ್ರೋಲ್ ಉತ್ಪನ್ನಗಳನ್ನು ತರಿಸಿಕೊಂಡಿರುವುದಕ್ಕೆ ಕ್ಷಮೆಯನ್ನು ಕೇಳಿದೆ. ಇದರ ಪರಿಣಾಮ ರಷ್ಯಾದಲ್ಲಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಹಾಗೆಯೇ ತೈಲ ರಫ್ತುದಾರರಿಗೆ ಭಾರೀ ನಷ್ಟ ಎದುರಾಗುತ್ತದೆ.
ತೈಲ, ಅನಿಲ ಪೂರೈಕೆ ಸ್ಥಗಿತಗೊಳಿಸುವೆವು
“ನಮ್ಮ ಇಂಧನ ಉತ್ಪನ್ನಗಳ ಮೇಲೆ ನಿಷೇಧ ಹೇರುತ್ತೀರಾ? ನಿಮ್ಮಿಷ್ಟ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 300 ಡಾಲರ್ ಆಗಲಿದೆ. ಜತೆಗೆ ತೈಲ ಮತ್ತು ಅನಿಲ ಪೂರೈಕೆ ಸ್ಥಗಿತಗೊಳಿಸುತ್ತೇವೆ’ಹೀಗೆಂದು ಐರೋಪ್ಯ ಮತ್ತು ಪಾಶ್ಚಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದು ರಷ್ಯಾ ಉಪಪ್ರಧಾನಮಂತ್ರಿ ಅಲೆಕ್ಸಾಂಡರ್ ನೊವಾಕ್. ಇದರ ಜತೆಗೆ ಐರೋಪ್ಯ ಒಕ್ಕೂಟಕ್ಕೆ ಪೂರೈಕೆಯಾಗುವ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲ ಪೂರೈಕೆಯನ್ನೂ ಸ್ಥಗಿತಗೊಳಿಸುತ್ತೇವೆ ಎಂದು ಕಠೊರ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಜಗತ್ತಿನಲ್ಲಿ ಮಂಗಳವಾರ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 124 ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. ಐರೋಪ್ಯ ಒಕ್ಕೂಟ ಇಂಧನ ಮತ್ತು ತೈಲ ಆಮದು ಸ್ಥಗಿತಗೊಳಿಸಲಿದೆ ಎಂಬ ವರದಿಗಳ ಬಗ್ಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. “ರಷ್ಯಾದ ತೈಲೋತ್ಪನ್ನಗಳ ಮೇಲೆ ನಿಷೇಧ ಹೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರತಿಕೂಲ ಪರಿಣಾಮ ಬೀರಲಿದೆ ಮತ್ತು ಪ್ರತೀ ಬ್ಯಾರೆಲ್ ಕಚ್ಚಾ ತೈಲಕ್ಕೆ 300 ಅಮೆರಿಕನ್ ಡಾಲರ್ ವರೆಗೆ ಏರಿಕೆಯಾಗಲಿದೆ. ಸಾಧ್ಯವಿದ್ದರೆ ರಷ್ಯಾದಿಂದ ಜರ್ಮನಿಗೆ ಇರುವ ನಾರ್ಡ್ ಸ್ಟ್ರೀಮ್ ಅನಿಲ ಕೊಳವೆ ಸಂಪರ್ಕವನ್ನೂ ಕಡಿದುಕೊಳ್ಳಿ. ನಮ್ಮ ತೈಲೋತ್ಪನ್ನಗಳಿಗೆ ಬೇರೆ ಮಾರುಕಟ್ಟೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಖಡಕ್ ಆಗಿ ಹೇಳಿದ್ದಾರೆ. ಇದುವರೆಗೆ ತೈಲ ಮತ್ತು ಅನಿಲ ಸಂಪರ್ಕ ಕಡಿತಗೊಳಿಸುವ ಬಗ್ಗೆ ನಾವು ನಿರ್ಧಾರ ಮಾಡಿಲ್ಲ. ಆದರೆ, ಐರೋಪ್ಯ ಒಕ್ಕೂಟದ ಮುಖಂಡರು ರಷ್ಯಾ ಸಂಪರ್ಕ ಕಡಿತಗೊಳಿಸಲಿ ಎಂಬ ಧೋರಣೆಯಿಂದಲೇ ಮಾತನಾಡುತ್ತಿ ದ್ದಾರೆ ಎಂದು ನೊವಾಕ್ ಎಚ್ಚರಿಕೆ ನೀಡಿದ್ದಾರೆ. ಐರೋಪ್ಯ ಒಕ್ಕೂಟಕ್ಕೆ ರಷ್ಯಾದಿಂದಲೇ ಪ್ರಧಾನವಾಗಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯಾಗುತ್ತಿದೆ. ಒಂದು ವೇಳೆ ರಷ್ಯಾ ಪೂರೈಕೆ ಸ್ಥಗಿತಗೊಳಿಸಿದರೆ ತೈಲೋತ್ಪನ್ನಗಳಿಗೆ ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.