Karnataka: ನಿಗಮ, ಮಂಡಳಿ ನೇಮಕ ಬೆನ್ನಲ್ಲೇ ಅಸಮಾಧಾನ ಸ್ಫೋಟ
Team Udayavani, Jan 28, 2024, 12:17 AM IST
ಬೆಂಗಳೂರು: ನಿಗಮ, ಮಂಡಳಿ ನೇಮಕಾತಿ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ ಗೊಂಡಿದೆ. ಕೆಲವರು ತಮಗೆ ಕೊಟ್ಟಿರುವ ಸ್ಥಾನಮಾನವನ್ನು ನಿರಾಕರಿಸಿ ದ್ದಾರೆ. ಶಾಸಕರಿಗೆ ಮಾತ್ರ ಅವಕಾಶ ಕಲ್ಪಿಸಿರುವುದಕ್ಕೆ ಪರಿಷತ್ ಸದಸ್ಯರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ಸರಕಾರ ರಚನೆಯಾಗಿ ಎಂಟು ತಿಂಗಳ ಬಳಿಕ ಅಳೆದು-ತೂಗಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ದ್ದರೂ ಜಟಾಪಟಿ ಮುಂದುವರಿದಿದೆ. ಸಾಲದ್ದಕ್ಕೆ ನೇಮಕಾತಿಯಲ್ಲಿ ತಾಂತ್ರಿಕ ಲೋಪಗಳೂ ಆಗಿವೆ.
ಈತನ್ಮಧ್ಯೆ ಈಗ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಒಪ್ಪಿಕೊಂಡವರಿಗೆ ಮುಂದೆ ಸಚಿವ ಸ್ಥಾನ ಇಲ್ಲ ಎನ್ನುವ ಸಂದೇಶವನ್ನು ಪಕ್ಷ ರವಾನಿಸಿದೆ. 2 ವರ್ಷಗಳಿಗೆ ಸೀಮಿತವಾಗಿ ನಿಗಮ-ಮಂಡಳಿ ಅಧ್ಯಕ್ಷ ನೀಡಿ ಸಮಾಧಾನಪಡಿಸುವ ತಂತ್ರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಸಂಪುಟ ಪುನಾರಚನೆ ವೇಳೆ ಅವಕಾಶ ಕೊಡುವುದಿಲ್ಲ ಎನ್ನುವ ಪಕ್ಷದ ಷರತ್ತಿಗೆ ಹಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ನಿಗಮ-ಮಂಡಳಿ ಸ್ಥಾನವನ್ನು ಒಲ್ಲೆ ಎನ್ನಲಾರಂಭಿಸಿದ್ದಾರೆ. ಜನರಿಂದ ಆಯ್ಕೆಯಾಗಿ ಬಂದವರಿಗೆ ಸಚಿವ ಸ್ಥಾನದ ಬದಲು ನಿಗಮ-ಮಂಡಳಿ ಸ್ಥಾನ ಎಷ್ಟರ ಮಟ್ಟಿಗೆ ಸರಿ? ಇದರಲ್ಲಿ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ ಎಲ್ಲಿರಲಿದೆ ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.
ನೇಮಕಾತಿಯಲ್ಲಿ ಎಡವಟ್ಟು
ಈಗಾಗಲೇ ಶಾಂತ್ ತಮ್ಮಯ್ಯ ಅಧ್ಯಕ್ಷರಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ನರೇಂದ್ರಸ್ವಾಮಿ ಅವರಿಗೆ ನೀಡಿ ಎಡವಟ್ಟು ಮಾಡಿದ್ದ ಸರಕಾರ, ನಿಗಮ-ಮಂಡಳಿ ಪಟ್ಟಿಯಲ್ಲಿ ಡಿಸಿಎಂ ರಾಜಕೀಯ ಸಲಹೆಗಾರ ಸ್ಥಾನ ಸೇರಿಸಿ ಶ್ರೀನಿವಾಸ್ ಮಾನೆಗೆ ನೀಡಿರುವುದೂ ಗೊಂದಲಕ್ಕೆ ಕಾರಣವಾಗಿದೆ. ಇನ್ನು ಕ್ರೀಡಾ ಪ್ರಾಧಿಕಾರಕ್ಕೆ ಬೈಲಾ ಪ್ರಕಾರ ಕ್ರೀಡಾ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ನಿಯಮ ಇದ್ದರೂ ವಿಜಯಾನಂದ ಕಾಶಪ್ಪನವರ್ ಅವರನ್ನು ನೇಮಿಸಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಾನಮಾನ ನಿರಾಕರಿಸಿದ ಶಾಸಕರು
ಕೆಲವು ಶಾಸಕರು ತಮಗೆ ಸಿಕ್ಕಿರುವ ಸ್ಥಾನಮಾನಗಳಿಗೆ ತೃಪ್ತಿಪಟ್ಟುಕೊಂಡು ಸಂತಸ ಹಂಚಿಕೊಂಡಿದ್ದರೆ, ಹಲವು ಶಾಸಕರು ತಮಗೆ ಕೊಟ್ಟಿರುವ ಸ್ಥಾನವನ್ನು ತಿರಸ್ಕರಿಸಿದ್ದಾರೆ. ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ಅವರು, ರಾಯಚೂರು ಜಿಲ್ಲೆಗೆ ಪ್ರಾಶಸ್ತ್ಯವೇ ಸಿಕ್ಕಿಲ್ಲ. ನಾಲ್ವರು ಗೆದ್ದಿದ್ದೇವೆ. ಯಾರಿಗಾದರೂ ಮಂತ್ರಿ ಸ್ಥಾನ ಕೊಡಲಿ ಎಂದು ಆಗ್ರಹಿಸಿದರಲ್ಲದೆ, ತಾನು ಹಾಗೂ ಬಾದರ್ಲಿ ನಿಗಮ, ಮಂಡಳಿ ಸ್ಥಾನವನ್ನು ಒಪ್ಪುವುದಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.