ಉದಯವಾಣಿ ‘ರೇಷ್ಮೆ ಜತೆ ದೀಪಾವಳಿ-2021’: ವಿಜೇತರಿಗೆ ಬಹುಮಾನ ವಿತರಣೆ


Team Udayavani, Dec 20, 2021, 7:22 PM IST

1-fdsfd

ದಾವಣಗೆರೆ: ಮಹಿಳೆ ಮಾನಸಿಕವಾಗಿ ಸ್ವಸ್ಥಳಾಗಿದ್ದಾಗ ಮಾತ್ರ ಸೀರೆಗಳನ್ನು ಒಪ್ಪವಾಗಿ ಉಟ್ಟು ಸಂತಸದಿಂದ ಸಂಭ್ರಮಿಸುತ್ತಾಳೆ. ಆದ್ದರಿಂದ ಸೀರೆ ಎಂಬುದು ಮಹಿಳೆಯ ಮಾನಸಿಕ ಸ್ವಾಸ §éದ ಪ್ರತಿಬಿಂಬ ಎಂದು ದಾವಣಗೆರೆಯ ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಫೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ| ಶಶಿಕಲಾ ಕೃಷ್ಣಮೂರ್ತಿ ಅಭಿಪ್ರಾಯಿಸಿದರು.

“ಉದಯವಾಣಿ’ ಪತ್ರಿಕೆಯು ಪ್ರತಿಷ್ಠಿತ ಜವಳಿ ಸಂಸ್ಥೆ ಬಿ.ಎಸ್‌.ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಸಹಯೋಗದಲ್ಲಿ ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ “ರೇಷ್ಮೆ ಜತೆ ದೀಪಾವಳಿ-2021′ ಸ್ಪರ್ಧೆಯ ಯ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಸೀರೆ ಉಡುವುದು ಕೇವಲ ಅಂದ-ಚೆಂದ, ಮೆಚ್ಚುಗೆಗಲ್ಲ. ಅವಳ ಆತ್ಮ ಸಂತೋಷಕ್ಕಾಗಿ ಬಣ್ಣಬಣ್ಣದ, ಆಕರ್ಷಕ ಸೀರೆ ಉಡುತ್ತಾಳೆ. ಸೀರೆಗೆ ಭಾರತೀಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದ್ದು ಅದು ದೇಶದ ಸಂಪ್ರದಾಯ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಹಬ್ಬ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಸೀರೆ ಉಟ್ಟಾಗ ಅದರಲ್ಲಿಯೂ ರೇಷ್ಮೆ ಸೀರೆ ಉಟ್ಟಾಗ ಅದು ಮಹಿಳೆಯರಲ್ಲಿನ ಆತ್ಮವಿಶ್ವಾಸದ ಕುರುಹು ಆಗಿ ಪ್ರತಿಬಿಂಬತವಾಗುತ್ತದೆ ಎಂದರು. ರೇಷ್ಮೆ ಸೀರೆ ಧರಿಸಿದಾಗ ಮಹಿಳೆ ದೈವಿ ಸ್ವರೂಪ ಪಡೆದುಕೊಳ್ಳುತ್ತಾಳೆ. ರೇಷ್ಮೆ ಸೀರೆಯು ಇಂಥವರ ಕಾರ್ಯಕ್ರಮಕ್ಕಾಗಿ ಖರೀದಿಸಿದ್ದು, ಇಂಥವರು ಕೊಡಿಸಿದ್ದು ಎಂಬ ನೆನಪುಗಳ ಮೂಲಕ ಸಂಬಂಧಗಳನ್ನು ಸಹ ಬೆಸೆಯುತ್ತದೆ. ಕೋವಿಡ್‌ ಕಾರಣದಿಂದಾಗಿ ಬಹಳ ದಿನಗಳಿಂದ ಕಪಾಟು ಸೇರಿದ್ದ ರೇಷ್ಮೆ ಸೀರೆಗಳನ್ನು ಫೋಟೋ ಸ್ಪರ್ಧೆಯ ಹೆಸರಲ್ಲಿ ಹೊರತೆಗೆಯುವಂತೆ ಮಾಡಿ, ಹಬ್ಬದ ದಿನ ರೇಷ್ಮೆ ಸೀರೆಯೊಂದಿಗೆ ಸಂಭ್ರಮಿಸುವಂತೆ ಮಾಡಿದ “ಉದಯವಾಣಿ’ಪತ್ರಿಕೆಯ ಕಾರ್ಯಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.

ಬಿ.ಎಸ್‌. ಚನ್ನಬಸಪ್ಪ ಅವರ ಅಂಗಡಿ ಗುಣಮಟ್ಟದ ಬಟ್ಟೆಗೆ ಖ್ಯಾತಿ ಪಡೆದಿದೆ. ಅಂಗಡಿಯ ಮಾಲೀಕರು ವ್ಯಾಪಾರದ ಜತೆಗೆ ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವ, ವಿವಿಧ ಪ್ರೋತ್ಸಾಹದಾಯಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಮೂಲಕ ಗ್ರಾಹಕರೊಂದಿಗಿನ ಸಂಬಂಧ ಸುಮಧುರಗೊಳಿಸುವ ಕಾರ್ಯವೂ ಮಾಡುತ್ತ ಬಂದಿರುವುದು ಶ್ಲಾಘನೀಯ ಎಂದರು. ಬಾಂಧವ್ಯ ಬೆಸೆಯುವ ಕಾರ್ಯಕ್ರಮ: ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಮಾಲೀಕ ಬಿ.ಸಿ. ಶಿವಕುಮಾರ್‌ ಮಾತನಾಡಿ, ಕೇವಲ ವ್ಯಾವಹಾರಿಕವಾಗಿ ಅಷ್ಟೇ ಅಲ್ಲದೆ ನಮ್ಮ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಬೇಕು ಎಂಬ ಕಾರಣಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದೊಂದು ಬಾಂಧವ್ಯ ಬೆಸೆಯುವ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಈ ಸ್ಪರ್ಧೆಯ ಯ ಮೂಲಕ ಅಂಗಡಿ-ಗ್ರಾಹಕರ ನಡುವಿನ ಬಾಂಧವ್ಯದ ಜತೆಗೆ ಗ್ರಾಹಕ-ಕುಟುಂಬದ ನಡುವಿನ ಸಂಬಂಧಗಳನ್ನು ಬೆಸೆಯುವ ಕಾರ್ಯವೂ ಆಗಿರುವುದು ಹೆಮ್ಮೆಯ ಸಂಗತಿ. ಇದೇ ಮೊದಲ ಬಾರಿಗೆ ದಾವಣಗೆರೆಯಿಂದ ಹೊರಗೆ ಶೋರೂಮ್‌ ಮಾಡುತ್ತಿದ್ದು ಬೆಳಗಾವಿ, ಹುಬ್ಬಳ್ಳಿಯಲ್ಲಿ ತೆರೆಯಲು ಸಿದ್ಧತೆ ನಡೆದಿದೆ. ಇದರಿಂದ ನಾವು ಆ ಭಾಗದ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲಿದ್ದೇವೆ ಎಂದರು.

ಉದಯವಾಣಿ ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಪ್ರಾಸ್ತಾವಿಕವಾಗಿ ಮಾತನಾಡಿ, ಹಬ್ಬ ಎಂದರೆ ಸಂಭ್ರಮ-ಸಡಗರ. ಸಂಭ್ರಮ-ಸಡಗರ ಎಂದರೆ ಮಹಿಳೆ. ಹಬ್ಬಗಳು ಕೊಡುವ ಸಂತೋಷವನ್ನು ಮಹಿಳೆಯರಷ್ಟು ಬೇರಾರೂ ಆಸ್ವಾದಿಸುವುದಿಲ್ಲ. ಹಬ್ಬದಲ್ಲಿ ಮಹಿಳೆಯರು ರೇಷ್ಮೆ ಸೀರೆ ಉಟ್ಟು ಸಂಭ್ರಮಿಸಿದಾಗ ಅವರ ಬದುಕಿನ ನವೀರಾದ, ಸೊಗಸಾದ ಸಂದರ್ಭಗಳ ಸವಿನೆನಪು ಮೂಡುತ್ತದೆ. ಹೀಗಾಗಿ ರೇಷ್ಮೆ ಸೀರೆಗೆ ಭಾರತೀಯ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ ಎಂದರು. ಮಣಿಪಾಲ್‌ ಎಂಬ ಪುಟ್ಟ ಊರಲ್ಲಿ ಆರಂಭವಾದ “ಉದಯವಾಣಿ’ ಪತ್ರಿಕೆ ಈಗ 52 ವರ್ಷಗಳನ್ನು ಪೂರೈಸಿದೆ. ಕರಾವಳಿ ಭಾಗದಲ್ಲಿ ಅತ್ಯಧಿಕ ಓದುಗರನ್ನು ಹೊಂದಿದ್ದ ಪತ್ರಿಕೆ, ಈಗ ರಾಜ್ಯದೆಲ್ಲೆಡೆ ಲಕ್ಷ ಲಕ್ಷ ಓದುಗರನ್ನು ಹೊಂದಿದೆ. ಪ್ರತಿವರ್ಷ ನ.14ರಂದು ಮಕ್ಕಳ ಫೋಟೋ ಸ್ಪರ್ಧೆ ನಡೆಸುತ್ತ ಬಂದಿದ್ದು ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಈ ವರ್ಷ ಮಕ್ಕಳ ಸ್ಪರ್ಧೆಗೆ 17,500ಕ್ಕೂ ಹೆಚ್ಚು ಫೋಟೋಗಳು ಸ್ಪರ್ಧೆಗೆ ಬಂದಿದ್ದವು. ಇದೇ ರೀತಿ ಈಗ ಕೆಲವು ವರ್ಷಗಳಿಂದ ದೀಪಾವಳಿ ಹಬ್ಬಕ್ಕೆ “ರೇಷ್ಮೆ ಜತೆ ದೀಪಾವಳಿ’ ಫೋಟೋ ಸ್ಪರ್ಧೆ ನಡೆಸಲಾಗುತ್ತಿದೆ. ದಾವಣಗೆರೆ ಸೇರಿದಂತೆ ಉತ್ತರಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಈ ಸ್ಪರ್ಧೆಗೆ ಬಂದಿದ್ದ ಫೋಟೋಗಳನ್ನು ಸಾಕಷ್ಟು ಅಳೆದು ತೂಗಿ, ಶೇಕಡಾ ನೂರಕ್ಕೆ ನೂರರಷ್ಟು ಪಾರದರ್ಶಕವಾಗಿ ವಿಜೇತರನ್ನು ಆಯ್ಕೆ ಮಾಡಿದ್ದೇವೆ ಎಂದರು. ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಮಾಲೀಕರಲ್ಲೋರ್ವರಾದ ಬಿ.ಯು.ಸಿ. ಶೇಖರ್‌, ಕುಟುಂಬದವರಾದ ಮಧು ಶೇಖರ್‌, ಮೇಹುಲ್‌ ವಿವೇಕ್‌, ಮೃಣಾಲ್‌ ವೇದಿಕೆಯಲ್ಲಿದ್ದರು. ಬಹುಮಾನ ವಿಜೇತರು ಸಂತಸಹಂಚಿಕೊಂಡು ಸ್ಪರ್ಧೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿ.ಎಸ್‌.ಚನ್ನಬಸಪ್ಪ ಆ್ಯಂಡ್‌ ಸನ್ಸ್‌ನ ಮಾರುಕಟ್ಟೆ ವ್ಯವಸ್ಥಾಪಕ ಉಮೇಶಕುಮಾರ್‌ ಕೆ.ಎನ್‌. ಸ್ವಾಗತಿಸಿ, ನಿರ್ವಹಿಸಿದರು. ಉದಯವಾಣಿ ಪತ್ರಿಕೆಯ ಹುಬ್ಬಳ್ಳಿ- ದಾವಣಗೆರೆ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಟಿ. ರವಿಕುಮಾರ್‌ ವಂದಿಸಿದರು. ಇದೇ ಸಂದರ್ಭದಲ್ಲಿಅತಿಥಿಗಳಿಗೆಪತ್ರಿಕೆಯಿಂದಉಡುಗೊರೆ ನೀಡಿ ಗೌರವಿಸಲಾಯಿತು. “ಉದಯವಾಣಿ’ ಪತ್ರಿಕೆ ಹಾಗೂ ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಬಹುಮಾನ ನಮ್ಮ ಕುಟುಂಬದವರನ್ನೆಲ್ಲ ಬೆಸೆಯುವ ಕಾರ್ಯ ಮಾಡಿದೆ. ಬಹುಮಾನ ಪಡೆಯಲು ಬೇರೆ ಬೇರೆ ಕಡೆಯಿಂದ ಸಹೋದರಿಯರು,ಕುಟುಂಬದವರೆಲ್ಲ ಒಗ್ಗೂಡಿ ಬಂದಿದ್ದೇವೆ. ತುಂಬ ಖುಷಿಯಾಗಿದೆ. ಪತ್ರಿಕೆ ಹಾಗೂ ಬಿಎಸ್‌ಸಿಯವರಿಗೂ ಧನ್ಯವಾದಗಳು.

ಡಾ| ಸೌಮ್ಯ ಎಸ್‌. ಮಾಸ್ತೆ, ಬೆಳಗಾವಿ ಪ್ರಥಮ ಬಹುಮಾನ ವಿಜೇತರು

ಸೀರೆ ಎಂದರೆಮಹಿಳೆಯರಿಗೆ ಅಚ್ಚುಮೆಚ್ಚು. ಸ್ಪರ್ಧೆಗಾಗಿ ಇನ್ನಷ್ಟುಒಪ್ಪವಾಗಿಯೇ ಉಟ್ಟು ಫೋಟೋ ತೆಗೆದುಕಳುಹಿಸಿದ್ದೆ.ಬಹುಮಾನ ಬರುವ ನಿರೀಕ್ಷೆ ಇರಲಿಲ್ಲ. ಸ್ಪರ್ಧೆಯಲ್ಲಿ ನನ್ನ ಫೋಟೋ ಆಯ್ಕೆಯಾಗಿ ಬಹುಮಾನ ಬಂದಿರುವುದು ಖುಷಿ ತಂದಿದೆ.

ರೇಣುಕಾ ಹೂಗಾರ್‌, ಸೇಡಂ ದ್ವಿತೀಯ ಬಹುಮಾನ ವಿಜೇತರು

ಬಹುಮಾನ ವಿಜೇತರು

ಪ್ರಥಮ(20,000ರೂ.): ಡಾ| ಸೌಮ್ಯಾಎಸ್‌.ಮಾಸ್ತೆ ಹಾಗೂಕುಟುಂಬ-ಬೆಳಗಾವಿ

ದ್ವಿತೀಯ(15,000 ರೂ.): ರೇಣುಕಾ ಹೂಗಾರ್‌, ವೀಣಾ ಪೂಜಾರಿ ಹಾಗೂ ವಾಣಿ ಹೂಗಾರ್‌-ಸೇಡಂ

ತೃತೀಯ(10,000 ರೂ.): ಸೌಮ್ಯಾ ಶಿಗ್ಗಾಂವಕರ್‌ ಹಾಗೂ ಸುಧಾಮಹೇಂದ್ರಕರ್‌-ದಾವಣಗೆರೆ

ಪ್ರೋತ್ಸಾಹಕ(ತಲಾ 3000 ರೂ.)

1. ಗಿರಿಜಾ ಉಮಾಪತಿ ಅಕ್ಕಿ, ಭೂಮಿಕಾ,ರಾಜೇಶ್ವರಿ ಹಾಗೂ ಶ್ರೀಶಾಂತ್‌-ಕುಷ್ಟಗಿ
2. ಕಮಲಾಬಾಯಿ, ಅನುರಾಧಾ, ಮೈತ್ರಿ, ನಿವೇದಿತಾ- ಕಲಬುರಗಿ
3. ರೂಪಾ ಹೆಗಡೆ, ವೀಣಾ ಹೆಗಡೆ, ಶರಾವತಿ ಹೆಗಡೆ, ಅನುಷಾ ಹೆಗಡೆ ಉಂಬಳಮನೆ- ಶಿರಸಿ
4. ಪೂರ್ಣಿಮಾ ಹಳಾಳ- ರಾಮದುರ್ಗ

5. ಡಾ| ಸವಿತಾ, ಡಾ| ಮಿತ್ರಾ, ರಾಜೇಶ್ವರಿ, ಜಯನಗರ- ಕಲಬುರಗಿ
6. ಡಾ| ಶಿವಗಂಗಾ ದುದ್ಗಿ, ಸೌಜನ್ಯ ದುದ್ಗಿ ಹಾಗೂ ಅನಿತಾ ಪಿ.ಎನ್‌.-ಹುನಗುಂದ
7. ಸ್ಮಿತಾ ಎಂ.ಪಿ.ಎಂ ಹಾಗೂ ಪುಷ್ಪಲತಾಎಂ.ಪಿ.ಎಂ.- ದಾವಣಗೆರೆ
8. ವೈಷ್ಣವಿ ಕಂದಕೂರ್‌, ಚೈತ್ರಾ,ರೋಜಾ ಹಾಗೂ ಸಹನಾ- ಕುಷ್ಟಗಿ
9. ಸೌಮ್ಯ ಹಾಗೂ ಲತಾ, ಚಿಪಗಿ- ಶಿರಸಿ
10. ಡಾ| ಚೈತಾಲಿ ರಾಘೋಜಿ,ಅರ್ಚನಾ, ವಂದನಾ ಹಾಗೂ ವೈಶಾಲಿ- ದಾವಣಗೆರೆ

ಟಾಪ್ ನ್ಯೂಸ್

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.