ಸಮಾಜದ ಅರಿವಿಗೆ ಪತ್ರಿಕೆ ಓದು ಮುಖ್ಯ: ಪ್ರಸಾದ್‌ರಾಜ್ ಕಾಂಚನ್
"ದೀಪಾವಳಿ ಧಮಾಕಾ 2021' ವಿಜೇತರ ಆಯ್ಕೆ ಸಮಾರಂಭ
Team Udayavani, Dec 19, 2021, 6:20 AM IST
ಮಣಿಪಾಲ: ಜೀವನದಲ್ಲಿ ಶಾಲೆ, ಕಾಲೇಜಿನ ಶಿಕ್ಷಣದೊಂದಿಗೆ ಸಮಾಜವನ್ನು ಅರಿಯಲು ಪತ್ರಿಕೆ ಓದು ಮುಖ್ಯವಾಗಿದ್ದು, ವಿದ್ಯಾರ್ಥಿ ಜೀವನದಿಂದ ಇಲ್ಲಿವರೆಗೆ ಉದಯವಾಣಿ ದಿನಪತ್ರಿಕೆ ಹೊರ ಜಗತ್ತಿನ ಜ್ಞಾನ ಉಣಬಡಿಸಿದೆ ಎಂದು ಕಾಂಚನ ಹ್ಯುಂಡೈ ಸಂಸ್ಥೆಯ ಪ್ರವರ್ತಕ ಪ್ರಸಾದ್‌ರಾಜ್ ಕಾಂಚನ್ ಅಭಿಪ್ರಾಯಪಟ್ಟರು.
ಉದಯವಾಣಿ ಕೇಂದ್ರ ಕಚೇರಿಯಲ್ಲಿ ನಡೆದ ಮಂಗಳೂರು ಲೇಡಿಹಿಲ್ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ “ದೀಪಾವಳಿ ಧಮಾಕ 2021′ ವಿಜೇತರ ಲಕ್ಕಿ ಡ್ರಾ ಮೂಲಕ ಆಯ್ಕೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಾಮಾಜಿಕ ವಿಚಾರ, ಪ್ರಚಲಿತ ಸುದ್ದಿಗಳನ್ನು ತಿಳಿಸುವಲ್ಲಿ ಉದಯವಾಣಿ ವಿಶೇಷವಾಗಿ ಗುರುತಿಸಿಕೊಂಡಿದ್ದು, ಜನರ ಪ್ರೀತಿಯ ಪತ್ರಿಕೆಯಾಗಿ ಬೆಳೆದಿದೆ. ದೀಪಾವಳಿ ವಿಶೇಷಾಂಕ ಮೂಲಕ ಓದುಗರಿಗೆ ಸ್ಪರ್ಧೆ ಆಯೋಜಿಸಿರುವುದು ಮಾದರಿ ನಡೆ ಎಂದು ಶ್ಲಾಘಿ ಸಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮೀಡಿಯ ನೆಟ್‌ವರ್ಕ್ ಸಂಸ್ಥೆಯ ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್ ಕುಮಾರ್ ಮಾತನಾಡಿ, “ದೀಪಾವಳಿ ಧಮಾಕಾ’ ಸ್ಪರ್ಧೆ ಹೊಸ ಪರಿಕಲ್ಪನೆಯಲ್ಲಿ ಮೂಡಿಬಂದಿದ್ದು, ಓದುಗರ ಸ್ಪಂದನೆ ಅತ್ಯುತ್ತಮವಾಗಿತ್ತು. ಪಾರದರ್ಶಕ ನೆಲೆಯಲ್ಲಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದರು.
ಉದಯವಾಣಿ ಮಂಗಳೂರು ಮಾರು ಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರು ಪ್ರಸ್ತಾವನೆಗೈದು, ದೀಪಾವಳಿ ಧಮಾಕಾ ವಿಶೇಷ ಸ್ಪರ್ಧೆಗೆ ಓದುಗರಿಂದ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ ಎಂದ ರು. ಅತಿಥಿಗಳು ಬಂಪರ್, ಪ್ರಥಮ, ದ್ವಿತೀಯ, ತೃತೀಯ, ಪ್ರೋತ್ಸಾಹಕ ಬಹುಮಾನಗಳ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿದರು.
ದೀಪಾವಳಿ ಧಮಾಕಾ ವಿಜೇತರು
ಬಂಪರ್ ಬಹುಮಾನ: ವೆಂಕಟೇಶ್ ಭಟ್ ಕಟಪಾಡಿ ಪ್ರಥಮ: ದಿನೇಶ್ ಜಿ.ವಿ. ಮೂಡುಕೇರಿ ಕುಂದಾಪುರ
ದ್ವಿತೀಯ: ಎನ್. ರಘುವೀರ್ ಕಾಮತ್ ಮಂಗಳೂರು, ಪ್ರಕಾಶ್ ಕೆ.ಬಿ. ಮಾರ್ನಮಿಕಟ್ಟೆ ಮಂಗಳೂರು
ತೃತೀಯ: ತಸ್ಲಿಮ್ ದೇರಳಕಟ್ಟೆ, ಆನಂದ ಮಹಿಮಾ ಬೆಂಗಳೂರು, ಭಾಗ್ಯಶ್ರೀ ಕಾಮತ್ ಸುರತ್ಕಲ್
ಪ್ರೋತ್ಸಾಹಕ ಬಹುಮಾನ: ಶ್ರೀನಿವಾಸ ಆಚಾರ್ಯ ಬಿ.ಸಿ.ರೋಡ್, ಸುದರ್ಶನ್ ಹಿಲಿಯಾಣ, ಹೇಮಂತ್ ಕುಮಾರ್ ಕಿನ್ನಿಗೋಳಿ, ಝಯಾನ್ ಮುಹಮ್ಮದ್ ಝಾಕಿರ್ ಕಾಸರಗೋಡು, ಎಂ. ರೇಖಾ ಮೂಡುಬಿದಿರೆ, ಭಕ್ತಿ ಶೆಟ್ಟಿ ಬೈಲೂರು, ರಾಘವೇಂದ್ರ ರಾಣಿಬೆನ್ನೂರು, ಲಕ್ಷ್ಮೀ ಪರ್ಕಳ, ಎಂ. ಸಿತಾರ ಶೆಟ್ಟಿ ಸಾಲೆತ್ತೂರು, ಸುನಿತಾ ವಿ. ಕ್ಯಾಸ್ಟಲಿನೊ ಶಿರ್ವ, ಶಾಂತಾರಾಮ ಉಪ್ಪುಂದ, ಶ್ರದ್ಧಾ ಮುಂಡಾಜೆ, ನಾರಾಯಣ ಕಾರಂತ ದರ್ಬೆ ಪುತ್ತೂರು, ಅನುಪಮಾ ಸಿ.ಎಸ್. ಮೈಸೂರು, ವಿಜಯೇಂದ್ರ ಕುಲಕರ್ಣಿ ಕಲಬುರಗಿ, ಎಂ. ವಾಸುದೇವ ರಾವ್ ಚಳ್ಳಕೆರೆ, ಎನ್. ರಾಜಾರಾಮ್ ಹೆಬ್ಟಾರ್ ಭಾಯಂದರ್ ಮುಂಬಯಿ, ವಿಶ್ವತ್ ಪಿ. ಭಟ್ ಮಂಗಳೂರು, ಕೆ. ವಿಘ್ನೇಶ್ವರ ಸುಳ್ಯ, ವಿನ್ಸೆಂಟ್ ಪತ್ರಾವೊ ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.