Goa: ದೀಪಾವಳಿ ರಜೆ ಮಜಾ- ಗೋವಾದ ವಿವಿಧ ಬೀಚ್‌ಗಳಲ್ಲಿ ನೀರುಪಾಲಾಗುತ್ತಿದ್ದ 17 ಜನರ ರಕ್ಷಣೆ
Team Udayavani, Nov 16, 2023, 4:41 PM IST
ಪಣಜಿ: ದೀಪಾವಳಿ ರಜೆಯ ವಾರಾಂತ್ಯದಲ್ಲಿ ಗೋವಾದ ವಿವಿಧ ಬೀಚ್‍ಗಳಲ್ಲಿ ನಡೆದ ಪ್ರತ್ಯೇಕ ಹತ್ತು ಘಟನೆಗಳಲ್ಲಿ ಮುಳುಗುತ್ತಿದ್ದ 17 ಜನರನ್ನು ದೃಷ್ಠಿ ಜೀವರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದರು. ಇವರಲ್ಲಿ ಕಝಾಕಿಸ್ತಾನ್‍ನಿಂದ ಬಂದಿದ್ದ ಇಬ್ಬರು ಪ್ರವಾಸಿಗರನ್ನೂ ರಕ್ಷಿಸಲಾಗಿದೆ ಎಂದು ದೃಷ್ಟಿ ಜೀವರಕ್ಷಕ ರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ.
ಉತ್ತರ ಗೋವಾದ ಹರ್ಮಲ್ ಬೀಚ್‍ನಲ್ಲಿ ಬಲವಾದ ಪ್ರವಾಹಕ್ಕೆ ಸಿಲುಕಿದ್ದ ಕಜಕಿಸ್ತಾನದ ಇಬ್ಬರು ವಿದೇಶಿ ಪ್ರಜೆಗಳು ನೀರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಆದರೆ ದೃಷ್ಠಿ ಸಂಸ್ಥೆಯ ಸ್ವಯಂಸೇವಕರು ತಕ್ಷಣ ಅವರ ಬಳಿಗೆ ಧಾವಿಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದರು. ಹರ್ಮಾಲ್ ಬೀಚ್‍ನಲ್ಲಿ ಮುಳುಗುತ್ತಿದ್ದ ದೆಹಲಿ ಮತ್ತು ಬೆಂಗಳೂರಿನ ಇಬ್ಬರು ಪ್ರವಾಸಿಗರನ್ನು ಸಹ ರಕ್ಷಿಸಲಾಗಿದೆ.
ಶುಕ್ರವಾರ ಮತ್ತು ಭಾನುವಾರದ ನಡುವೆ ಗೋವಾದ ಕಲಂಗುಟ್‍ನ ಕಡಲತೀರದಲ್ಲಿ ಉತ್ತರ ಪ್ರದೇಶದ ಮೂವರು ಹುಡುಗಿಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ದೃಷ್ಟಿ ಮರೈನ್ ಲೈಫ್‍ಸೇವರ್ಸ್‍ನ ವಕ್ತಾರರು ತಿಳಿಸಿದ್ದಾರೆ. ಅಂತಹ ಇತರ ಘಟನೆಗಳಲ್ಲಿ ಇತರ ಇಬ್ಬರನ್ನು ಸಮುದ್ರತೀರದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ. ದೃಷ್ಠಿ ಜೀವರಕ್ಷಕ ದಳದ ಸಿಬ್ಬಂದಿಗಳು ಗೋವಾದ ಮಾಂಡ್ರೆ, ಆಗೋಂಡಾ, ಕೆಲ್ಶಿ, ಮೊರ್ಜಿ ಮತ್ತು ಸಿಕೇರಿ ಬೀಚ್‍ಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿವೆ ಎಂದು ವಕ್ತಾರರು ತಿಳಿಸಿದ್ದಾರೆ. ರಕ್ಷಣಾ ತಂಡವು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಹುಡುಗಿಯರನ್ನು, ಐದು ವರ್ಷ ಮತ್ತು ಒಂಬತ್ತು ವರ್ಷದ ಮಗುವನ್ನು ರಕ್ಷಿಸಿ ಅವರ ಪೋಷಕರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ: Fentanyl ಇಂಜೆಕ್ಷನ್ ನಿಂದ 70 ಸಾವಿರ ಜನರ ಸಾವು; ನಿಷೇಧಕ್ಕೆ ಚೀನಾ ಒಪ್ಪಂದ…ಏನಿದು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.