ದೀಪಾವಳಿ: ಬೆಂಗಳೂರು- ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ
ಚನ್ನರಾಯಣಪಟ್ಟಣ, ಕುಣಿಗಲ್, ಚಿಕ್ಕಬಾಣಾವರಗಳಲ್ಲಿ ನಿಲುಗಡೆಯಾಗಲಿದೆ
Team Udayavani, Oct 30, 2024, 3:21 PM IST
ಹುಬ್ಬಳಿ: ನೈಋತ್ಯ ರೈಲ್ವೆ ವಲಯ ದೀಪಾವಳಿ ಸಮಯದಲ್ಲಿ ಪ್ರಯಾಣಿಕರ ಹೆಚ್ಚಿನ ದಟ್ಟಣೆ ನಿಮಿತ್ತ ನ. 4ರಂದು ಎಸ್‌ಎಂವಿಟಿ
ಬೆಂಗಳೂರು-ಮಡಗಾಂವ್ ನಡುವೆ ಒನ್‌ವೇ ಸ್ಪೇಶಲ್ ಎಕ್ಸ್ ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ. 4ರಂದು ಎಸ್‌ಎಂವಿಟಿ ಬೆಂಗಳೂರು- ಮಡಗಾಂವ್ (01685) ವಿಶೇಷ ರೈಲು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7:35 ಗಂಟೆಗೆ ಮಡಗಾಂವ್ ತಲುಪಲಿದೆ.
ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್‌ರಾಕ್, ಕುಲೇಂ, ಸಂವೋರ್ದಂ (ಕುಡಚಾಡೆ)ಗಳಲ್ಲಿ ನಿಲುಗಡೆಯಾಗಲಿದೆ.
ಕಾರವಾರ-ಎಸ್‌ಎಂವಿಟಿ
ಕೊಂಕಣ ರೈಲ್ವೆಯು ನ. 3ರಂದು ಕಾರವಾರ-ಎಸ್ ಎಂವಿಟಿ ಬೆಂಗಳೂರು ನಡುವೆ ಒನ್ ವೇ ಸ್ಪೇಷಲ್ ಎಕ್ಸಪ್ರೆಸ್ ರೈಲು ಓಡಿಸಲಿದೆ. ಅಂದು ಕಾರವಾರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲು (01686) ಮಧ್ಯಾಹ್ನ 12 ಗಂಟೆಗೆ
ಕಾರವಾರದಿಂದ ಹೊರಟು ಮರುದಿನ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರು ತಲುಪಲಿದೆ.
ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್, ಬೈಂದೂರು,
ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ್, ಟೋಕೂರ, ಬಂಟ್ವಾಳ, ಕಬಕ, ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಣಪಟ್ಟಣ, ಕುಣಿಗಲ್, ಚಿಕ್ಕಬಾಣಾವರಗಳಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sensex: ಸತತ ಕುಸಿತದ ಬಳಿಕ ಸೆನ್ಸೆಕ್ಸ್ ಚೇತರಿಕೆ: 535 ಅಂಕ ಏರಿಕೆ
Maha Kumbh Mela:ದುಬಾರಿ ಟಿಕೆಟ್ ದರ ವಸೂಲಿ; ವಿಮಾನಯಾನ ಸಂಸ್ಥೆ ವಿರುದ್ಧ ವಿಎಚ್ ಪಿ ಕಿಡಿ
Stock Market: ಜಾಗತಿಕ ಬೆಳವಣಿಗೆ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 800 ಅಂಕ ಕುಸಿತ!
Joint Tax Filing: ವಿವಾಹಿತರಿಗೆ ಜಂಟಿ ತೆರಿಗೆ ವ್ಯವಸ್ಥೆ ಜಾರಿಗೆ ಪ್ರಸ್ತಾವನೆ
Ambani:ಜಾಮ್ ನಗರದಲ್ಲಿ ಜಗತ್ತಿನ ಅತೀ ದೊಡ್ಡ AI ಡಾಟಾ ಸೆಂಟರ್ ಸ್ಥಾಪನೆ: ಮುಕೇಶ್ ಅಂಬಾನಿ