ಮುಂಗಾರು ಎದುರಿಸಲು ದ.ಕ. ಗೃಹರಕ್ಷಕ ದಳ ಸಜ್ಜು
Team Udayavani, May 31, 2020, 5:45 AM IST
ಮಂಗಳೂರು: ಕೆಲವೇ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಮಳೆ ಆರಂಭವಾಗಲಿದ್ದು, ಈ ವೇಳೆ ಸಂಭವಿಸಬಹುದಾದ ಅನಾಹುತಗಳಿಂದ ಸಾರ್ವಜನಿಕ ರನ್ನು ರಕ್ಷಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಗೃಹರಕ್ಷಕ ದಳ ಸನ್ನದ್ಧಗೊಂಡಿದೆ.
ಜಿಲ್ಲೆಯಲ್ಲಿ ಈಗಾಗಲೇ 14 ಗೃಹರಕ್ಷಕ ಘಟಕಗಳಿವೆ. ಮಂಗಳೂರು, ಸುಳ್ಯ, ಬೆಳ್ಳಾರೆ,ಕಡಬ, ಪುತ್ತೂರು, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಮೂಲ್ಕಿ, ಬೆಳ್ತಂಗಡಿ, ಪಣಂಬೂರು, ಸುರತ್ಕಲ್, ಬಂಟ್ವಾಳ, ವಿಟ್ಲ, ಮೂಡುಬಿದಿರೆ ಘಟಕಗಳಲ್ಲಿ ಒಟ್ಟು 950 ಮಂದಿ ಗೃಹರಕ್ಷಕರು ಸೇವೆಯಲ್ಲಿ ದ್ದಾರೆ. ಪೊಲೀಸ್ ಇಲಾಖೆ ಸಹಿತ ಹಲವು ಇಲಾಖೆಗಳಲ್ಲಿ ಗೃಹರಕ್ಷಕರು ಕಾರ್ಯ ವೆಸಗುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಸುಮಾರು 400 ಮಂದಿ ಹಾಗೂ ಇತರ ಇಲಾಖೆಗಳಲ್ಲಿ 150 ಮಂದಿ ಗೃಹರಕ್ಷಕರು ಕರ್ತವ್ಯದಲ್ಲಿದ್ದಾರೆ. ಇತರರು ಗೃಹರಕ್ಷಕ ಇಲಾಖೆಯಲ್ಲಿರುತ್ತಾರೆ.
ಇವರೆಲ್ಲರೂ ಮಳೆಗಾಲಕ್ಕೆ ಸಂಬಂಧಿಸಿ ಸ್ಥಳೀಯ ಇಲಾಖೆಗಳ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಲು ಸನ್ನದ್ಧರಾಗಿದ್ದಾರೆ. ಜೂನ್ 1ರಿಂದ ಈ ಪಡೆ ಎಲ್ಲ ಘಟಕಗಳಲ್ಲಿಯೂ ಸನ್ನದ್ಧ ಸ್ಥಿತಿಯಲ್ಲಿರಲಿದೆ.
ಬೀಚ್‌ಗಳಲ್ಲೂ ನಿಯೋಜನೆ
ಬೀಚ್‌ಗಳಲ್ಲೂ ಮುನ್ನೆಚ್ಚರಿಕೆ ದೃಷ್ಟಿ ಯಿಂದ ಗೃಹರಕ್ಷಕರನ್ನು ನೇಮಿಸಲಾಗಿದೆ. ನಗರದ ಪಣಂಬೂರು, ಸೋಮೇಶ್ವರ, ಸಸಿಹಿತ್ಲು, ತಣ್ಣೀರುಬಾವಿ-1 ಬೀಚ್, ಮೊಗವೀರಪಟ್ಣ, ಉಳ್ಳಾಲ ಸೋಮೇಶ್ವರ ಬೀಚ್‌ಗಳಲ್ಲಿ ಇಬ್ಬರು ಗೃಹರಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಜತೆಗೆ ಬೀಚ್ ಬದಿಯಲ್ಲಿ ಅಪಾಯ ಮುನ್ಸೂಚನೆಯ ಫಲಕ ಅಳವಡಿಸಲು ನಿರ್ಧರಿಸಲಾಗಿದೆ. ಉಪ್ಪಿನಂಗಡಿ ನೇತ್ರಾವತಿ, ಕುಮಾರಧಾರಾ ನದಿ ಪ್ರದೇಶದಲ್ಲಿ ಮುಂಜಾಗೃತ ಕ್ರಮವಾಗಿ ಗಾಳಿ ತುಂಬಬಹುದಾದ ಬೋಟ್ (ಇನ್‌ಫ್ಲಾಟೇಬಲ್ ಬೋಟ್) ಅನ್ನು ಜೂನ್ 1ರಿಂದಲೇ ನಿಯೋಜಿಸ ಲಾಗುತ್ತದೆ.
ಘಟಕಾಧಿಕಾರಿಗಳ ಸಭೆ
ಮುಂಜಾಗೃತ ಕ್ರಮದ ಕುರಿತು ದ.ಕ. ಜಿಲ್ಲಾ ಗೃಹರಕ್ಷಕ ದಳ ಘಟಕಾಧಿ ಕಾರಿಗಳ ಸಭೆಯು ಶನಿವಾರ ಮೇರಿಹಿಲ್ ನಲ್ಲಿರುವ ಗೃಹರಕ್ಷಕ ದಳ ಕಚೇರಿಯಲ್ಲಿ ಜರಗಿತು. ಪ್ರವಾಹ ಪೀಡಿತ ಪ್ರದೇಶ ಘಟಕದಲ್ಲಿ ಕೈಗೊಳ್ಳಬೇಕಾದ ಕಾರ್ಯ, ಗೃಹರಕ್ಷಕರ ನವೀಕರಣದ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಠ ಡಾ| ಮುರಲೀಮೋಹನ್ ಚೂಂತಾರು, ಉಪ ಸಮಾದೇಷ್ಠ ರಮೇಶ್ ಪೂಜಾರಿ, ಸುಳ್ಯ ಘಟಕಾಧಿಕಾರಿ ಜಯಂತ್ ಶೆಟ್ಟಿ, ಬೆಳ್ಳಾರೆ – ವಸಂತ ಕುಮಾರ್, ಸುಬ್ರಹ್ಮಣ್ಯ-ನಾರಾಯಣ್, ಕಡಬ-ತೀರ್ಥೇಶ್, ಉಪ್ಪಿನಂಗಡಿ- ದಿನೇಶ್, ಬಂಟ್ವಾಳ-ಐತ್ತಪ್ಪ, ಪುತ್ತೂರು- ಅಭಿಮನ್ಯು, ಮಂಗಳೂರು- ಮಾರ್ಕ್ ಶೇರ್, ಸುರತ್ಕಲ್- ರಮೇಶ್, ಪಣಂಬೂರು- ಶಿವಪ್ಪ ನಾಯಕ್, ಮೂಲ್ಕಿ- ಲೋಕೇಶ್, ಮೂಡುಬಿದಿರೆ- ಪಾಂಡಿರಾಜ್, ಬೆಳ್ತಂಗಡಿ-ಜಯಾನಂದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಳೆಗಾಲ ಮುಂಜಾಗ್ರತೆಯ ದೃಷ್ಟಿಯಿಂದ ಬಳಸಬಹುದಾದ ಪರಿಕರಗಳಾದ ಲೈಫ್ ಜಾಕೆಟ್, ಲೈಫ್‌ಬಾಯ್, ಲೈಟ್, ವುಡ್ ಕಟ್ಟರ್, ರೋಪ್, ಟಾರ್ಚ್‌ಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಸಿದ್ಧತೆ ನಡೆಸಲಾಗಿದೆ
ಮುಂಗಾರು ಮಳೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾ ಗೃಹರಕ್ಷಕ ದಳ ಸನ್ನದ್ಧಗೊಂಡಿದೆ. ಈಗಾಗಲೇ ಸಿದ್ಧತೆ ನಡೆಸಲಾಗಿದ್ದು, ಜಿಲ್ಲೆಯ ಎಲ್ಲ ಘಟಕಾಧಿಕಾರಿಗಳ ಸಭೆ ನಡೆಸಲಾಗಿದೆ. ಮುಂಜಾಗೃತಾ ದೃಷ್ಟಿಯಿಂದ ಬಳಸಬಹುದಾದ ಪರಿಕರಗಳನ್ನು ಪ್ರದರ್ಶಿಸಲಾಗಿದೆ.
-ಡಾ| ಮುರಲೀ ಮೋಹನ್ ಚೂಂತಾರು
ದ.ಕ. ಜಿಲ್ಲಾ ಸಮಾದೇಷ್ಠರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.