ನನಗೆ ತುಂಬಾ ಕಾಡಿದ ಸಿನಿಮಾ ಡಿಎನ್ಎ: ನಾಯಕಿ ಎಸ್ತರ್ ನರೋನ್ಹಾ ಮಾತು
Team Udayavani, Jan 5, 2022, 11:07 AM IST
ಕನ್ನಡದಲ್ಲಿ ವಿಭಿನ್ನ ಸಿನಿಮಾ, ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ನಟಿ ಎಸ್ತರ್ ನರೋನ್ಹಾ ನಾಯಕಿಯಾಗಿರುವ ಚಿತ್ರವೊಂದು ಈ ವಾರ ತೆರೆಕಾಣುತ್ತಿದೆ. ಅದು “ಡಿಎನ್ಎ‘. ಹೀಗೊಂದು ವಿಭಿನ್ನ ಟೈಟಲ್ನ ಸಿನಿಮಾ ಜ.7ರಂದು ತೆರೆಗೆ ಬರುತ್ತಿದ್ದು, ಎಸ್ತರ್ ಕೂಡಾ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಎಸ್ತರ್, “ನಾನು ತುಂಬಾ ಇಷ್ಟಪಟ್ಟ ಸ್ಕ್ರಿಪ್ಟ್ನಲ್ಲಿ ಡಿಎನ್ಎ ಕೂಡಾ ಒಂದು. ನಿರ್ದೇಶಕರು ಬಂದು ಕಥೆ ಹೇಳಿದಾಗ ನಾನು ತುಂಬಾ ಖುಷಿಯಿಂದ ಒಪ್ಪಿಕೊಂಡೆ. ಇವತ್ತಿಗೆ ಇದು ತುಂಬಾ ಹಾಟ್ ಸಬೆjಕ್ಟ್. ಆದರೆ, ಇದರ ಹಿಂದೆ ಒಂದು ಭಾವನಾತ್ಮಕ ವಿಚಾರವಿದೆ. ಇದು ದಿನಾ ನಡೆಯುತ್ತಿರುವ ವಿಚಾರವಾದರೂ ದೊಡ್ಡ ಮಟ್ಟದಲ್ಲಿ ಗಮನಕ್ಕೆ ಬಂದಿಲ್ಲ. ಈಗ ನಮ್ಮ ಸಿನಿಮಾದಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಲಾಗಿದೆ‘ ಎನ್ನುತ್ತಾರೆ ಎಸ್ತರ್.
ಎಸ್ತರ್ ವಿಭಿನ್ನ ಪಾತ್ರಗಳನ್ನು ಮಾಡಬೇಕೆಂಬ ಆಸೆಯೊಂದಿಗೆ ಚಿತ್ರರಂಗಕ್ಕೆ ಬಂದವರಂತೆ. ಅದಕ್ಕೆ ಪೂರಕವಾಗಿ ಈಗ “ಡಿಎನ್ಎ‘ ಸಿಕ್ಕಿದೆ ಎಂದು ಖುಷಿಯಿಂದ ಹೇಳುತ್ತಾರೆ. “ನಾನು ಚಿತ್ರರಂಗಕ್ಕೆ ಬಂದಿರೋದು ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕೆಂಬ ಆಸೆಯಿಂದ. ಈಗ ಸಿಕ್ಕಿರುವ “ಡಿಎನ್ಎ‘ ಒಂದು ಹೊಸ ಬಗೆಯ ಸಿನಿಮಾ ಮತ್ತು ಪಾತ್ರ. ಇಲ್ಲಿ ನಾನು ತಾಯಿಯ ಪಾತ್ರ ಮಾಡಿದ್ದೇನೆ. ತಾಯಿಯೇ ಈ ಸಿನಿಮಾದ ಹೀರೋಯಿನ್. ನನ್ನ ಪ್ರಕಾರ, ಪ್ರತಿ ಮಹಿಳೆಯೂ ಅವಳ ಪಾತ್ರದಲ್ಲಿ ನಾಯಕಿಯೇ. ನಾನು ಈ ಪಾತ್ರವನ್ನು ತುಂಬಾ ಖುಷಿಯಿಂದ ಒಪ್ಪಿಕೊಂಡೆ‘ ಎನ್ನುವ ಎಸ್ತರ್, “ಚಿತ್ರ ಎರಡು ಲಾಕ್ಡೌನ್ ನಂತರ ರಿಲೀಸ್ ಆಗುತ್ತಿದೆ. ಕೊರೊನಾ ನಮಗೆಲ್ಲ ಸಂಬಂಧದ ಪಾಠ ಕಲಿಸಿದೆ. ನಮ್ಮ ಸಿನಿಮಾ ಕೂಡಾ ಸಂಬಂಧದ ಸುತ್ತ ಇರುವುದರಿಂದ ಈ ಚಿತ್ರ ಜನರಿಗೆ ಹೆಚ್ಚು ಕನೆಕ್ಟ್$ಆಗುತ್ತದೆ ಎಂಬ ವಿಶ್ವಾಸವಿದೆ‘ ಎನ್ನುತ್ತಾರೆ. ಇನ್ನು, “ಡಿಎನ್ಎ‘ ತಂಡದ ಬಗ್ಗೆ ಮಾತನಾಡುವ ಎಸ್ತರ್, ನಾನು ಕೆಲಸ ಮಾಡಿದ ಒಂದೊಳ್ಳೆಯ ತಂಡವಿದು. ಇಡೀ ತಂಡಕ್ಕೆ ತಾವು ಮಾಡುತ್ತಿರುವ ಸಿನಿಮಾ ಬಗ್ಗೆ ಪಕ್ಕಾ ಕ್ಲಾರಿಟಿ ಇತ್ತು‘ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.