ಭ್ರಷ್ಟಾಚಾರದ ಆರೋಪಗಳನ್ನು ಜಾತಿ ಹೆಸರಿನಲ್ಲಿ ರಾಜಕೀಯಗೊಳಿಸುವುದು ಸಮಂಜಸವೇ ?
Team Udayavani, Sep 12, 2019, 3:28 PM IST
ಮಣಿಪಾಲ: ಭ್ರಷ್ಟಾಚಾರದ ಆರೋಪಗಳನ್ನು ಒಂದು ಸಮುದಾಯ ಅಥವಾ ಜಾತಿ ಹೆಸರಿನಲ್ಲಿ ರಾಜಕೀಯಗೊಳಿಸುವುದು ಸಮಂಜಸವೇ ? ಎಂದು ಉದಯವಾಣಿ ತನ್ನ ಓದುಗರಿಗೆ ಕೇಳಿತ್ತು. ಅತ್ಯುತ್ತಮವೆನಿಸಿದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.
ರಾಜಣ್ಣ: ಜಾತಿ ಪದ್ದತಿಯನ್ನು ನಿಷೇಧಿಸಬೇಕು. ಮಠಕ್ಕೆ ಕೊಡುವ ಆದ್ಯತೆ ಸಂಪೂರ್ಣ ವಾಗಿ ಕಡಿಮೆಯಾಗಬೇಕು. ಜಾತ್ಯಾತೀತ ಪದ ರಾಜಕೀಯದಿಂದ ಅಪವಿತ್ರವಾಗಿದೆ. ಲೋಕಾಯುಕ್ತ ಕಾನೂನು ಬಲಿಷ್ಠವಾಗಬೇಕು, ಜಾತಿ ಆಧಾರಿತ ವ್ಯವಸ್ಥೆ ನಿಲ್ಲಬೇಕು.
ಶಂಕರ್ ಬಂಟ್ವಾಳ: ರಾಜಕೀಯದಲ್ಲಿ ಜಾತಿ ಲೆಕ್ಕಾಚಾರ ಶುದ್ಧ ತಪ್ಪು, ಆರ್ಹತೆ ಮತ್ತು ಯೋಗ್ಯತೆಗೆ ಪ್ರಾಮುಖ್ಯತೆ ಸಿಕ್ಕಿದ್ದಲ್ಲಿ ಮುಂದಿನ ಪೀಳಿಗೆಯವರು ಉತ್ತಮವಾಗಿರಲು ಸಾಧ್ಯವಿದೆ.
ಶಿವ ಶಿಂಶ : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜಾತಿ ರಾಜಕಾರಣ ಹೊಸತಲ್ಲ. ಆದರೂ ಸಂವಿಧಾನದ ಹಾಗೂ ಕಾನೂನು ಆಶಯಗಳಿಗೆ ಮಾಡುವ ಅಪಚಾರ ಇದಾಗಿದೆ. ರಾಜಕೀಯ ಪಕ್ಷಗಳು ಜಾತಿ, ಹಣ ಬಲಗಳ ಮೂಲಕ ಅಧಿಕಾರ ಹೊಂದುತ್ತಿವೆ ಹಾಗೂ ಅಧಿಕಾರ ಕಳೆದುಕೊಳ್ಳುತ್ತಿವೆ.
ರಂಗನಾಥ್: ನ್ಯಾಯ ನೀತಿಗಳು ಎಲ್ಲರಿಗೂ ಒಂದೇ. ಜಾತಿ ಧರ್ಮದ ಆಧಾರದ ಮೇಲೆ ನಿರ್ಧಾರ ಮಾಡುವುದಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜಾತಿ ರಾಜಕಾರಣ ಸಲ್ಲ. ಜಾತಿ ಧರ್ಮಗಳು ಆಚಾರ ವಿಚಾರಗಳಿಗೆ ಮಾತ್ರ ಸೀಮಿತ.
ನವಿ ದಾಸ್: ಜಾತಿ, ಮತ, ಧರ್ಮ ಇವುಗಳ ಬಗ್ಗೆ ಸಾಂವಿಧಾನಿಕವಾಗಿ ತಿದ್ದುಪಡಿ ತರುವ ಅವಶ್ಯಕತೆ ಇದೆ. ಉನ್ನತ ಮಟ್ಟದ ಅಧಿಕಾರಿಗಳು ಹತ್ಯೆಯಾದಾಗ ಅದರ ನ್ಯಾಯಕ್ಕೆ ಹೋರಾಟ ಮಾಡದೆ ಇರುವಂತಹ ಜಾತಿ, ಒಬ್ಬ ಪ್ರಜೆಗಳಿಂದ ಚುನಾಯಿತ ವ್ಯಕ್ತಿ ಬಗ್ಗೆ ಏಕೆ ? ನಮ್ಮ ದೇಶ ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಮೊದಲು ಜಾತಿಯ ನಿರ್ಮೂಲನೆ ಅಗತ್ಯ.
ಲಿಂಗಪ್ಪ ಗೌಡ: ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಜಾತಿ ಮತ ಪಂಥ ಧರ್ಮ ಭ್ರಷ್ಟಾಚಾರ ನಿರ್ಮೂಲನೆ ತೊಡರು ಆಗಬಾರದು, ಭ್ರಷ್ಟಾಚಾರ ಮಾಡುವವರನ್ನು ಜಾತಿ ನೋಡಿ ಅಳೆದರೆ. ನಾಳೆ ನಮ್ಮಂತಹ ಮೂರ್ಖರು ಯಾರು ಇರುವುದಿಲ್ಲ.
ಸೈಮನ್ ಫರ್ನಾಂಡೀಸ್: ಖಂಡಿತಾ ತಪ್ಪು. ಇದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಯಾವುದೇ ಜಾತಿಯವರಾಗಲಿ, ಧರ್ಮದವರಾಗಲಿ, ಸಮುದಾಯದವರಾಗಲಿ, ಅವರು ಮಾಡಿದ ತಪ್ಪು ತಪ್ಪೇ. ! ತಪ್ಪನ್ನು ಸಮರ್ಥಿಸಿಕೊಳ್ಳುವುದು ಅಪರಾಧ..
ದೊಡ್ಡನಗೌಡ : ಪ್ರತಿಯೊಬ್ಬ ರಾಜಕಾರಣಿಗಳಿಗೂ ಅಭಿಮಾನಿಗಳಿರುತ್ತಾರೆ ಹಾಗೆ ಪ್ರತಿಯೊಂದು ಜಾತಿಗೂ ಗುರುಗಳಿದ್ದಾರೆ. ಆದರೇ ಜನರನ್ನು ತಿದ್ದುವ, ಸೌಹಾರ್ದತೆ, ಸಹಬಾಳ್ವೆಯ ಮಹತ್ವ ಸಾರಬೇಕಾಗಿರುವ ಮಠ ಮಂದಿರಗಳು ಜಾತಿ ರಾಜಕಾರಣದ ವಿಷ ಬೀಜ ಬಿತ್ತುತ್ತಿರುವುದು ವಿಷಾದನೀಯ.
ಕೆ ಎಸ್ ಕೃಷ್ಣ: ಪ್ರತಿಯೋಬ್ಬ ರಾಜಕಾರಣಿಗಳಿಗೂ ಅವರವರ ಜಾತಿಯ ಮಠಾಧೀಶರು ಬೆಂಬಲಕ್ಕೆ ನಿಂತುಕೊಂಡರೆ ನ್ಯಾಯ,ನೀತಿ,ಧರ್ಮಕ್ಕೆ ಬೆಲೆ ಎಲ್ಲಿ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.