ದತ್ತಿ ಸಂಸ್ಥೆಗಳಿಗೆ ದೇಣಿಗೆ: ತೆರಿಗೆ ಕಡಿತ
Team Udayavani, Feb 2, 2020, 6:18 AM IST
ದತ್ತಿ ಸಂಸ್ಥೆ (ಚಾರಿಟೆಬಲ್ ಇನ್ಸ್ಟಿಟ್ಯೂಷನ್)ಗಳಿಗೆ ನೀಡುವ ದೇಣಿಗೆಯ ಮೂಲಕ ಕೂಡ ತೆರಿಗೆ ಕಡಿತ ಪ್ರಮಾಣ ಪಡೆದುಕೊಳ್ಳುವ ಅವಕಾಶ ಕೊಡಲಾಗಿದೆ. ಆದರೆ ಈ ಅಂಶವನ್ನು ರಿಟರ್ನ್ಸ್ ಸಲ್ಲಿಕೆ ಮಾಡುವ ವೇಳೆ ಮಾಹಿತಿ ನೀಡಬೇಕಾಗುತ್ತದೆ. ತೆರಿಗೆದಾರರು ದತ್ತಿ ಸಂಸ್ಥೆಗೆ ನೀಡಿದ ನಗದಿನಲ್ಲಿ ತೆರಿಗೆ ಕಡಿತವನ್ನು ಪಡೆಯಬಹುದಾಗಿದೆ. ದೇಣಿಗೆಯನ್ನು ಪಡೆದ ಸಂಸ್ಥೆಯೂ ಸಹ ತೆರಿಗೆಯಿಂದ ಮುಕ್ತವಾಗಿರುತ್ತದೆ. ಅದರೆ, ದೇಣಿಗೆ ನೀಡಿದ ವ್ಯಕ್ತಿ ತನ್ನ ಆದಾಯ ತೆರಿಗೆ ಪಾವತಿ ವೇಳೆ ಕಡ್ಡಾಯವಾಗಿ ದೇಣಿಗೆ ನೀಡಿದ ವಿಷಯ ವನ್ನು ನಮೂದಿಸಬೇಕು.
ನೂತನವಾಗಿ ದತ್ತಿ ಸಂಸ್ಥೆ ಸ್ಥಾಪನೆ ಮಾಡಲು ನೋಂದಣಿ ಪ್ರಕ್ರಿಯೆ ಯನ್ನು ಸಂಪೂರ್ಣ ಎಲೆ ಕ್ಟ್ರಾನಿಕ್ ವ್ಯವಸ್ಥೆಗೆ ಒಳಪಡಿ ಸಲಾಗಿದೆ. ನೂತನ ಸಂಸ್ಥೆ ಗಳಿಗೆ ವಿಶೇಷ ನೋಂದಣಿ ನಂಬರ್(ಯುಆರ್‌ಎನ್) ನೀಡಲಾಗುವುದು. ಚಟುವಟಿಕೆಗಳನ್ನು ಪ್ರಾರಂಭಿಸದ ಹೊಸ ಸಂಸ್ಥೆಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ನೋಂದಣಿಗೂ ಅನುಕೂಲ ಮಾಡಲಾಗಿದೆ.
ತೆರಿಗೆ ಪಾವತಿದಾರರಿಗೆ ಸನ್ನದು: ಆದಾಯ ತೆರಿಗೆ ಇಲಾಖೆಯ ವಿತರಣಾ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ತೆರಿಗೆದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ)ಯಲ್ಲಿ ತೆರಿಗೆದಾರರ ಸನ್ನದು ಸೇರ್ಪಡೆಗೊಳಿಸಲು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ತೆರಿಗೆ ವ್ಯವಸ್ಥೆಯಲ್ಲಿ ಪಾವತಿದಾರ ಮತ್ತು ಆಡಳಿತದ ನಡುವೆ ನಂಬಿಕೆ ಮುಖ್ಯ. ತೆರಿಗೆ ಪಾವತಿದಾರ ತಮ್ಮ ಹಕ್ಕುಗಳನ್ನು ಸ್ಪಷ್ಟವಾಗಿ ಪಾಲಿಸಿದಾಗ ವಿಶ್ವಾಸ ಉಳಿಯಲು ಸಾಧ್ಯ. ಮುಂದಿನ ದಿನಗಳಲ್ಲಿ ಯಾವ ರೀತಿ ಸನ್ನದು ಇರಲಿದೆ ಎನ್ನುವುದನ್ನು ಕೇಂದ್ರ ಸರಕಾರ ಪ್ರಕಟಿಸಲಿದೆ.
ವಿವಾದಗಳಿಗೆ ತೆರೆ, ನಂಬಿಕೆಗೆ ಮಾನ್ಯತೆ
ಹಿಂದಿನ ಕೇಂದ್ರ ಬಜೆಟ್‌ನಲ್ಲಿ “ಸಬ್ ಕಾ ವಿಶ್ವಾಸ್’ ಯೋಜನೆ ಪರಿಚಯಿಸಿದ್ದ ಕೇಂದ್ರ ಸರಕಾರ. ಈ ಬಾರಿಯ ಬಜೆಟ್‌ನಲ್ಲಿ “ವಿವಿಧ್ ಸೇ ವಿಶ್ವಾಸ್’ ಅನ್ನು ಪರಿಚಯಿಸಿದೆ. ಈ ಮೂಲಕ ವಿವಾದಗಳಿಗೆ ಎಡೆಮಾಡಿಕೊಡದೆ ನಂಬಿಕೆಗೆ ಮಾತ್ರ ಅವಕಾಶ ಎಂಬುದನ್ನು ನೇರ ತೆರಿಗೆಯಲ್ಲಿ ಸಾಬೀತುಪಡಿಸಲು ಮುಂದಾಗಿದೆ.
ನೇರ ತೆರಿಗೆ ಪಾವತಿ ಸಂಬಂಧಿಸಿದ ದಾವೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಸರಕಾರ, ಯಾವುದೇ ಹಂತದಲ್ಲಿ ಉಳಿದಿರುವ ಮೇಲ್ಮನವಿಗಳಿಂದ ತೆರಿಗೆದಾರರಿಗೆ ಲಾಭವನ್ನುಂಟು ಮಾಡಲು ಈ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ದಾವೆ ಅಥವಾ ವಿವಾದದಿಂದಾಗಿ ಪಾವತಿ ಮಾಡಬೇಕಾದ ತೆರಿಗೆಯನ್ನು 2020 ಮಾ.31ರೊಳಗೆ ಪಾವತಿಸಿದರೆ ನೀಡಬೇಕಾದ ಬಡ್ಡಿ ಮತ್ತು ಹೇರಲಾಗಿದ್ದ ದಂಡವನ್ನು ಮನ್ನಾ ಮಾಡಲಾಗುವುದು. ಮಾ. 31 ರ ಬಳಿಕ ಪಾವತಿ ಮಾಡಿದವರು ಸ್ವಲ್ಪ ಅಧಿಕ ಪ್ರಮಾಣದ ಮೊತ್ತ ಪಾವತಿಸಬೇಕಾಗುತ್ತದೆ. ಅಲ್ಲದೆ ಈ ಯೋಜನೆಯು ಜೂ. 30 ವರೆಗೆ ಮಾತ್ರ ತೆರೆದಿರುತ್ತದೆ
ಪರೋಕ್ಷ ತೆರಿಗೆ ನಿಯಂತ್ರಣಕ್ಕೆ ತರಲಾದ ಸಬ್ ಕಾ ವಿಕಾಸ್ ಯೋಜನೆಯಲ್ಲಿ 1,89,000 ಪ್ರಕರಣಗಳು ಇತ್ಯರ್ಥ
ಮಾಹಿತಿ ಪ್ರಕಾರ 4,83,000 ನೇರ ತೆರಿಗೆ ಪ್ರಕರಣಗಳು ಬಾಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!
Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ
Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು
Expert’s Opinion: ಗ್ಯಾರಂಟಿ ಭಾರ ಇಲ್ಲದಿದ್ದರೆ ಇನ್ನೂ ಉತ್ತಮ ಆಗಿರುತ್ತಿತ್ತು
Start-up Sector; ನವ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್ ಅಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.