Kerala: ವರದಕ್ಷಿಣೆ ಪಿಡುಗು- 15 ವರ್ಷಗಳಲ್ಲಿ ಕೇರಳದಲ್ಲಿ 260 ಮಹಿಳೆಯರು ಬಲಿ
Team Udayavani, Jan 4, 2024, 11:37 PM IST
ಕಾಸರಗೋಡು: ವರದಕ್ಷಿಣೆ ಪಿಡುಗಿಗೆ ಕೇರಳದಲ್ಲಿ 15 ವರ್ಷಗಳಲ್ಲಿ 260 ಮಂದಿ ಮಹಿಳೆಯರು ಬಲಿಯಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.
ಇನ್ನೊಂದೆಡೆ ರಾಜ್ಯದಲ್ಲಿ ಪ್ರತೀ ವರ್ಷ ಸರಾಸರಿ ಐದು ಸಾವಿರದಷ್ಟು ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ. ವರದಕ್ಷಿಣೆ ತಡೆ ಕಾನೂರು 1961ರಿಂದಲೇ ಜಾರಿಯಲ್ಲಿದೆ. ಈ ಕಾನೂನು ಪ್ರಕಾರ ಮದುವೆ ಖರ್ಚಿಗಾಗಿ ಹಣ ನೀಡಿದರೂ ಅದನ್ನೂ ವರದಕ್ಷಿಣೆಯನ್ನಾಗಿ ಪರಿಗಣಿಸಲಾಗುತ್ತಿದೆ.
ವಿವಾಹದ ವೇಳೆ ಲಭಿಸುತ್ತಿರುವ ಉಡುಗೊರೆಗಳ ಪಟ್ಟಿ ಮಾಡಿ ಅದನ್ನು ಒಂದು ದಾಖಲೆಯಾಗಿ ಸಂರಕ್ಷಿಸಿಡಬೇಕೆಂದೂ ಈ ಕಾನೂನಿನಲ್ಲಿ ಹೇಳಲಾಗಿದೆ. ನೀಡಿದ ವರದಕ್ಷಿಣೆ ಮೊತ್ತ ಕಡಿಮೆಯಾಯಿತೆಂಬ ಹೆಸರಿನಲ್ಲಿ ಪತ್ನಿಯನ್ನು ಕೊಂದಿರುವ ಅದೆಷ್ಟೋ ಘಟನೆಗಳೂ ರಾಜ್ಯದಲ್ಲಿ ನಡೆದಿವೆ. ವರದಕ್ಷಿಣೆ ನೀಡಿಲ್ಲವೆಂದು ಪತ್ನಿಯನ್ನು ವಿಷಪೂರಿತ ಹಾವಿನಿಂದ ಕಚ್ಚಿಸಿ ಕೊಲೆಗೈದ ಘಟನೆಯೂ ನಡೆದಿದೆ. ಮದುವೆಯಾಗಲು ಕೋಟಿಗಟ್ಟಲೆ ರೂಪಾಯಿ, ಎಕ್ರೆಗಟ್ಟಲೆ ಜಮೀನು ಮತ್ತು ಐಷಾರಾಮಿ ಕಾರು ನೀಡಬೇಕೆಂದು ವರ ಮತ್ತು ಆತನ ಮನೆಯವರು ಷರತ್ತು ವಿಧಿಸಿದುದರಿಂದ ಮನನೊಂದು ವೆಙಾರಮೂಡಿನ ಡಾ| ರಹೀನಾ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಇನ್ನು ಕೆಲವು ಹೆತ್ತವರು ಸಮಾಜದಲ್ಲಿ ತಮ್ಮ ಘನತೆ ಹೆಚ್ಚಿಸುವಂತೆ ಮಾಡುವ ಹೆಸರಿನಲ್ಲಿ ತನ್ನ ಹೆಣ್ಮಕ್ಕಳಿಗೆ ಹೆಚ್ಚು ವರದಕ್ಷಿಣೆ ನೀಡುವ ಹೆಸರಿನಲ್ಲಿ ಇತರರೊಂದಿಗೆ ಪೈಪೋಟಿಗಿಳಿಯುತ್ತಿದ್ದು. ಇವೆಲ್ಲವೂ ವರದಕ್ಷಿಣೆ ತಡೆ ಕಾನೂನು ಕೇವಲ ಕಾನೂನಿನಲ್ಲಿ ಮಾತ್ರವಾಗಿ ಉಳಿದುಕೊಳ್ಳುವಂತೆಯೂ ಮಾಡುತ್ತಿದೆ. ಮಾತ್ರವಲ್ಲ ಇದು ವರದಕ್ಷಿಣೆ ಪಿಡುಗುಗಳಿಗೆ ಇನ್ನಷ್ಟು ಪ್ರೋತ್ಸಾಹವನ್ನು ನೀಡುವಂತೆ ಮಾಡುತ್ತಿದೆಯೆಂದು ಪೊಲೀಸರು ಹೇಳುತ್ತಾರೆ.
ಆಲಪ್ಪುಳ ಜಿಲ್ಲೆಯ ಅಡೂರಿನ ಉತ್ರಾ ಎಂಬಾಕೆಯ ಮನೆಯವರು ಆಕೆಯ ಮದುವೆ ವೇಳೆ ಪತಿಗೆ 100 ಪವನ್ ಚಿನ್ನದೊಡವೆ, ಕಾರು, ಮೂರೂವರೆ ಎಕ್ರೆ ಜಮೀನು, 10 ಲಕ್ಷ ರೂ. ನಗದು ನೀಡಿದ್ದರು. ಅದರೂ ಪತ್ನಿಯ ಎಲ್ಲಾ ಆಸ್ತಿ ಪಾಸ್ತಿ ಕಬಳಿಸುವ ಉದ್ದೇಶದಿಂದ ರಾತ್ರಿ ಮಲಗಿದ್ದ ವೇಳೆ ವಿಷ ಪೂರಿತ ಹಾವಿನಿಂದ ಕಚ್ಚಿಸಿ ಆಕೆಯನ್ನು ಪತಿ ಕೊಲೆಗೈದ ಘಟನೆಯೂ ನಡೆದಿತ್ತು.
ವರದಕ್ಷಿಣೆ ಕೇಳಿದಲ್ಲಿ 5 ವರ್ಷ ಕಾರಾಗೃಹ: ಮದುವೆ ಹೆಸರಿನಲ್ಲಿ ವಧುವಿನ ಅಥವಾ ಆಕೆಯ ಮನೆಯವರಿಂದ ಯಾವುದೇ ರೀತಿಯಲ್ಲಿ ವರದಕ್ಷಿಣೆ ಪಡೆದಲ್ಲಿ ವರದಕ್ಷಿಣೆ ತಡೆ ಕಾನೂನು ಪ್ರಕಾರ ಅಂತಹವರು ಐದು ವರ್ಷ ಜೈಲು ವಾಸ ಅನುಭವಿಸಬೇಕಾಗಿ ಬರಲಿದೆ. ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಈ ಶಿಕ್ಷೆ ಜತೆಗೆ ನ್ಯಾಯಾಲಯ ನಿಗದಿಪಡಿಸುವಷ್ಟು ದಂಡ ಪಾವತಿಸಬೇಕಾಗಿದೆ. ವರದಕ್ಷಿಣೆ ಕೇಳಿದ್ದಲ್ಲಿ ಕನಿಷ್ಠ ಆರು ತಿಂಗಳಿಂದ ಎರಡು ವರ್ಷ ತನಕ ಸಜೆ ಮತ್ತು 10,000 ರೂ. ದಂಡ ವಿಧಿಸಲಾಗುವುದು. ಮಾತ್ರವಲ್ಲ ವರದಕ್ಷಿಣೆ ರೂಪದಲ್ಲಿ ನಗ-ನಗದು ಅಥವಾ ಇತರ ಯಾವುದಾದರೂ ಪಡೆದಿದ್ದಲ್ಲಿ ಅದನ್ನೆಲ್ಲವನ್ನೂ ಈ ಕಾನೂನು ಪ್ರಕಾರ ವಧುವಿಗೆ ಹಿಂತಿರುಗಿಸ
ಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.