Puttur: ಎಚ್ಚರ,ರಸ್ತೆಗೆ ಉರುಳಲು ಸಿದ್ಧವಾಗಿವೆ ಹತ್ತಾರು ಮರಗಳು

ವಾಹನ ಸವಾರರ ಜೀವದ ಜತೆ ಚೆಲ್ಲಾಟ; ಬೆಳ್ಳಾರೆ- ಸವಣೂರು ಕಾಡುಹಾದಿ ದಾಟಲು ಎಂಟೆದೆ ಬೇಕು

Team Udayavani, Aug 3, 2024, 12:02 PM IST

puttur

ಪುತ್ತೂರು: ಯಾತ್ರಾ ಸ್ಥಳ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಬೆಳ್ಳಾರೆ-ಪುದ್ದೊಟ್ಟು-ಸವಣೂರು ರಸ್ತೆಯ ಬದಿಗಳಲ್ಲಿ ಬೃಹತ್‌ ಗಾತ್ರದ ಮರಗಳು ಬುಡ ಸಹಿತ ಇಲಾಖೆಯು ಮುಂದಾಗಿಲ್ಲ ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಏಕಾಏಕಿ ಮರಗಳು ಉರುಳುತ್ತಿದ್ದು ಪ್ರಾಣ ಭೀತಿಯಿಂದಲೇ ವಾಹನಗಳನ್ನು ಚಲಾಯಿಸುವ ಸ್ಥಿತಿ ಇಲ್ಲಿನದ್ದಾಗಿದೆ.
ಬೆಳ್ಳಾರೆಯಿಂದ ಪೆರುವಾಜೆ ಮುಂದಕ್ಕೆ ಕಾಪುಕಾಡಿನ ಮಧ್ಯೆ ಈ ರಸ್ತೆ ಹಾದು ಹೋಗಿದೆ. ಇಲ್ಲಿ ರಸ್ತೆ ದಾಟಲು ಎಂಟೆದೆ ಬೇಕು ಅನ್ನುವ ಸ್ಥಿತಿ ಇದೆ. ಕಾಪು ಕಾಡಿನ ಎರಡು ಬದಿಗಳಲ್ಲಿ ಹತ್ತಾರು ಮರಗಳು ರಸ್ತೆಗೆ ಬುಡ ಸಹಿತ ವಾಲಿ ನಿಂತಿದೆ. ಅಲ್ಲಲ್ಲಿ ಕಾಡಿನ ಬದಿಗಳಲ್ಲಿ ಭೂ ಕುಸಿತ ಉಂಟಾಗಿದ್ದು ಒಸರು ನೀರು ತುಂಬಿ ಯಾವ ಕ್ಷಣದಲ್ಲಾದರೂ ಇಲ್ಲಿ ಮರ ಬೀಳುವ ಅಪಾಯ ಇದೆ.

ರಸ್ತೆಗೆ ನುಗ್ಗುವ ನೀರು
ಮಾಪ್ಲಮಜಲು ಬಳಿ ಪ್ರತೀ ಮಳೆಗಾಲದಲ್ಲಿಯು ಭಾರೀ ಮಳೆಯ ಸಂದರ್ಭ ಗೌರಿ ಹೊಳೆಯ ನೀರು ರಸ್ತೆಗೆ ನುಗ್ಗಿ ಕೆಲವು ತಾಸು ಸಂಚಾರ ಸ್ಥಗಿತವಾಗುತ್ತದೆ. ಈ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಸವಣೂರಿನಿಂದ ಕಾಪು ತನಕ ಪುತ್ತೂರು ಲೋಕೋಪಯೋಗಿ ಇಲಾಖೆ, ಕಾಪುಕಾಡಿನಿಂದ ಬೆಳ್ಳಾರೆ ತನಕ ಸುಳ್ಯ ಉಪವಿಭಾಗಕ್ಕೆ ಸೇರಿರುವ ರಸ್ತೆ ಇದಾಗಿದ್ದು ಮಾಪ್ಲಮಜಲು ಸ್ಥಳ ಸುಳ್ಯ ಉಪ ವಿಭಾಗದ ವ್ಯಾಪ್ತಿಯಲ್ಲಿದೆ. ಈ ಹಿಂದೆ 3.5 ಕೋ. ರೂ.ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಅಭಿವೃದ್ಧಿ ಕೆಲಸ ನಡೆದಿತ್ತು. ಆ ವೇಳೆ ರಸ್ತೆಯನ್ನು ಎತ್ತರಿಸಿ, ಹೊಳೆ ಬದಿಗೆ ತಡೆಗೋಡೆ ನಿರ್ಮಿಸುವಂತೆ ಜನರು ಬೇಡಿಕೆ ಇಟ್ಟಿದ್ದರೂ ಇಲಾಖೆ ಅದಕ್ಕೆ ಸ್ಪಂದನೆ ನೀಡಿರಲಿಲ್ಲ. ತಗ್ಗು ರಸ್ತೆಗೆ ಡಾಮರು ಹಾಕಲಾಗಿತ್ತು. ಇದರ ಪರಿಣಾಮ ಹೊಳೆ ಭಾಗದಲ್ಲಿ ಕುಸಿತ ಕಂಡಿದ್ದು ರಸ್ತೆಯ ಒಂದು ಬದಿ ಬಿರುಕು ಬಿಟ್ಟಿದೆ.

ಪ್ರಮುಖ ಸಂಪರ್ಕ ರಸ್ತೆ
ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಾಣಗೊಂಡ ಬಳಿಕ
ಯಾತ್ರಾರ್ಥಿಗಳಿಗೆ ಕಡಿಮೆ ದೂರ, ಅವಧಿಯಲ್ಲಿ ಬೆಳ್ಳಾರೆ -ಪೆರುವಾಜೆ -ಸವಣೂರು ಸಂಪರ್ಕ ರಸ್ತೆ ಮೂಲಕ ಧರ್ಮಸ್ಥಳಕ್ಕೆ ತೆರಳಲು ಅನುಕೂಲಕರವೆನಿಸಿದೆ. ಮೈಸೂರು, ಮಡಿಕೇರಿ, ಕಾಸರಗೋಡು, ಸುಳ್ಯ ಸೇರಿದಂತೆ
ತಾಲೂಕು, ಹೊರ ಜಿಲ್ಲೆಯ ಜನರು ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ತೆರಳಲುಈ ರಸ್ತೆಯನ್ನು ಬಳಸುತ್ತಾರೆ.

ಪೆರುವಾಜೆ, ಸವಣೂರು, ಬೆಳಂದೂರಿನಲ್ಲಿ ಪ್ರಥಮ ದರ್ಜೆ ಕಾಲೇಜು, ಕಡಬ ತಾಲೂಕು ಕೇಂದ್ರ, ಆಲಂಕಾರು, ನೆಲ್ಯಾಡಿ ಮೊದಲಾದೆಡೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ತೆರವಿಗೆ ಸೂಚನೆ ಅಪಾಯಕಾರಿ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಗೆ ಸೂಚಿಸುತ್ತೇನೆ. ವಾಹನ ಸವಾರರು ಸಹಿತ ಜನರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸುವಂತೆಲೋಕೋಪಯೋಗಿ, ಅರಣ್ಯ ಇಲಾಖೆಗೆ ತತ್‌ ಕ್ಷಣ ನಿರ್ದೇಶನ ನೀಡುತ್ತೇನೆ.

– ಜುಬಿನ್‌ ಮೊಹಾಪಾತ್ರ, ಸಹಾಯಕ ಆಯುಕ್ತ, ಪುತ್ತೂರು ಉಪವಿಭಾಗ

ಉಸ್ತುವಾರಿ ಸಚಿವರಿಗೆ ತಿಳಿಸಲಾಗುವುದು
ರಸ್ತೆಗೆ ನೀರು ನುಗ್ಗುವ ಗೌರಿ ಹೊಳೆ ಭಾಗದಲ್ಲಿ ತಡೆಗೋಡೆ ನಿರ್ಮಿಸಲು ಗ್ರಾ.ಪಂ.ನಿಂದ ಮನವಿ ಮಾಡಿದ್ದರೂ ಲೋಕೋಪಯೋಗಿ ಇಲಾಖೆ ಸ್ಪಂದನೆ ನೀಡಿಲ್ಲ. ಮರಗಳು ರಸ್ತೆ ಬೀಳಲು ಅಣಿಯಾಗಿದ್ದು ಇದರ ತೆರವಿಗೆ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಸಮಸ್ಯೆಯ ಗಂಭೀರತೆಯನ್ನು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು.

-ಜಗನ್ನಾಥ ಪೂಜಾರಿ ಮುಕ್ಕೂರು, ಅಧ್ಯಕ್ಷ, ಪೆರುವಾಜೆ ಗ್ರಾ.ಪಂ.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.