ಡಾ| ಜಗದೀಶ್ ಗುಡಾರು ಅವರಿಗೆ “2023ರ ಜೀವಮಾನ ಪ್ರಶಸ್ತಿ” ಪ್ರದಾನ
Team Udayavani, Jan 5, 2024, 1:00 AM IST
ಮಂಗಳೂರು: ನಾಲ್ಕು ದಶಕಗಳಿಂದ ಪೋಲಿಯೋ ಬಾಧಿತ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವ ಡಾ| ಜಗದೀಶ್ ಗುಡಾರು ಅವರ ಸೇವಾ ಮನೋಭಾವನೆಯನ್ನು ಪರಿಗಣಿಸಿ ಆಂಧ್ರಪ್ರದೇಶದ ರಾಷ್ಟ್ರೀಯ ಸೇವಾ ತಿರುಪತಿ ಸಮಿತಿ ವತಿಯಿಂದ 2023ರ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೃಷಿಕ ಕುಟುಂಬದಲ್ಲಿ ಜನಿಸಿದ ಡಾ| ಗುಡಾರು ಸದ್ಯ ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಆಸ್ಟರ್ ರಮೇಶ್ ಆಸ್ಪತ್ರೆಗಳ ಶೈಕ್ಷಣಿಕ ನಿರ್ದೇಶಕರಾಗಿದ್ದಾರೆ. ಎಂಬಿಬಿಎಸ್ ಶಿಕ್ಷಣ ಮುಗಿಸಿದ ಜಗದೀಶ್ ಅವರು ಕೆಎಂಸಿ, ಮಣಿಪಾಲದಲ್ಲಿ ಎಂ.ಎಸ್. ಆರ್ಥೋ ಪದವಿ, ಯುಎಸ್‌ಎಐಎಂನಿಂದ ಎಂ.ಎಸ್., ಎಂಸಿಎಚ್ ಪದವಿ ಪಡೆದು ಟ್ರಾಮಾ ಲೆವೆಲ್ ನಿರ್ವಹಣೆಯಲ್ಲಿ ಕೀಲು ಮರುಜೋಡಣೆಯಲ್ಲಿ ಸಾಗರೋತ್ತರ ಫೆಲೋಶಿಪ್ ಪಡೆದುಕೊಂಡಿದ್ದಾರೆ.
1981ರಲ್ಲಿ ತಿರುಪತಿಯ ಬಿಐಆರ್‌ಆರ್‌ಡಿ ಟ್ರಸ್ಟ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ಸ್ ವಿಭಾಗದ ನಿರ್ದೇಶಕರಾಗಿ ಕರ್ತವ್ಯ ಆರಂಭಿಸಿದರು. ಬಳಿಕ ಸಾವಿರಾರು ಮಂದಿಗೆ ಉಚಿತ ಮೂಳೆಚಿಕಿತ್ಸೆ ನೀಡಿದರು. ರಮೇಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನಲ್ಲಿ ಅಕಾಡೆಮಿಕ್ ಡೀನ್ ಹಾಗೂ ಭಗವಾನ್ ಶ್ರೀ ವೆಂಕಯ್ಯ ಸ್ವಾಮಿ ಆಶ್ರಮ ವೈದ್ಯಶಾಲಾದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ.
ಡಾ| ಜಗದೀಶ್ 1,83,000ಕ್ಕೂ ಅಧಿಕ ರೋಗಿಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡುವ ಮೂಲಕ ಯಶಸ್ವಿ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಸಂದಿವೆ. ಮೂಳೆ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಕರೇಡು ಮತ್ತು ವೆಂಕಟಗಿರಿ ಗ್ರಾಮಗಳ ಮೀನುಗಾರರು, ನೇಕಾರರು ಸೇರಿದಂತೆ ಸಾರ್ವಜನಿಕರಿಗೆ ಅವರು ನಿರಂತರವಾಗಿ ಉಚಿತ ಮೂಳೆ ಚಿಕಿತ್ಸೆಯ ಸೇವೆಗಳನ್ನು ನೀಡುತ್ತಿದ್ದಾರೆ.
ಕರೇಡು ಗ್ರಾಮದಲ್ಲಿ 3,700ಕ್ಕಿಂತ ಹೆಚ್ಚು ವೆಂಕಟಗಿರಿಯಲ್ಲಿ 3,500 ಜನರು ಅವರ ವೈದ್ಯಕೀಯ ಚಿಕಿತ್ಸೆಯಿಂದ ಪ್ರಯೋಜನ ಪಡೆದಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪೋಲಿಯೋ ಸರ್ಜಿಕಲ್ ಮತ್ತು ಸ್ಕ್ರೀನಿಂಗ್ ಶಿಬಿರ ಏರ್ಪಡಿಸುವ ಗುರಿ ಹೊಂದಿರುವ ಅವರು 1996ರಿಂದ ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಲ, ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ ಮುಂತಾದ ಕಡೆಗಳಲ್ಲಿ 1,56,711 ಪೋಲಿಯೊ ಪೀಡಿತರನ್ನು ತಪಾಸಣೆ ಮಾಡಿ 44,235 ರೋಗಿಗಳಿಗೆ ಉಚಿತ ಪೊಲಿಯೋ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.