ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್ ಶೆಟ್ಟಿ ವೈ
Team Udayavani, Apr 18, 2021, 5:00 AM IST
ಆರೋಗ್ಯದ ವಿಚಾರ ಬಂದಾಗ ನಮ್ಮ ದೇಶದ, ರಾಜ್ಯದ, ನನ್ನ ಕ್ಷೇತ್ರದ ಜನರ ಹಿತಾಸಕ್ತಿಯೇ ನಮಗೆ ಮುಖ್ಯವಾಗಿದ್ದು, ಜನರಲ್ಲಿ ಆತಂಕ ಮತ್ತು ಭಯ ಹುಟ್ಟಿಸುವ ಯಾವ ಉದ್ದೇಶವೂ ನಮ್ಮ ಸರಕಾರದ್ದಲ್ಲ.
ಆರೋಗ್ಯ ರಕ್ಷಣೆ ನಮ್ಮಲ್ಲರ ಪ್ರಥಮ ಆದ್ಯತೆಯಾಗಬೇಕು. ಯಾವುದೇ ಕಾನೂನು ಜನರನ್ನು ತೊಂದರೆಗೀಡು ಮಾಡಲು ಅಲ್ಲ. ಕಾನೂನು, ಲಾಕ್‌ಡೌನ್ ಏನಿದ್ದರೂ ಸರಕಾರದ ಕೊನೆಯ ಅಸ್ತ್ರವಾಗಿದೆ.
ಜನರು ಸ್ವಯಂ ಪ್ರೇರಿತರಾಗಿ ಜಾಗೃತರಾಗಿದ್ದಾಗ ಕೊರೊನಾವನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ. ಕೊರೊನಾಗೆ ತುತ್ತಾಗುವವರು ಯಾರು ಸೋಂಕಿತ ಹತ್ತಿರವಿದ್ದಾಗ, ಹತ್ತಿರ ಬಂದಾಗ, ಆತ ಮುಟ್ಟಿದ ವಸ್ತುಗಳನ್ನು ಮುಟ್ಟಿದಾಗ ಅಲ್ಲವೇ? ಇದನ್ನೇ ನಾವು ದೂರ ಮಾಡಿದರೆ? ಇದು ನಮ್ಮಿಂದ ಸಾಧ್ಯ. ಅನಗತ್ಯವಾಗಿ ಓಡಾಟ, ಏನೂ ಆಗುವುದಿಲ್ಲ ಎಂಬ ಭಂಡ ಧೈರ್ಯ ತೋರಿಸುವ ಸಮಯವಲ್ಲ. ಯಾವುದೇ ಜನ ಜಾತ್ರೆ, ಕಾರ್ಯಕ್ರಮ, ಜನರನ್ನು ಒಟ್ಟುಗೂಡಿಸುವ ಕಾರ್ಯಕ್ರಮಕ್ಕೆ ನಾವೇ ಸ್ವಯಂ ಪ್ರೇರಿತರಾಗಿ ಹೋಗದೆ ಸಾಮಾಜಿಕ ಅಂತರ ಕಾಪಾಡಿಕೊಂಡಾಗ ಕೊರೊನಾ ನಮಗೆ ಬಾರದಂತೆ ನೋಡಿಕೊಳ್ಳಬಹುದು.
ಸರಕಾರದ ಉದ್ದೇಶವೂ ಇದೇ. ಸೋಂಕು ಹರಡದಂತೆ ನೋಡಿಕೊಳ್ಳು ವುದೇ ಪ್ರಥಮ ಆದ್ಯತೆ. ಇದಕ್ಕಾಗಿ ಜನಸಂದಣಿ ನಿಯಂತ್ರಿಸಲು ಬಯಸುತ್ತದೆ. ಸೋಂಕುಪೀಡಿತರನ್ನು ಜನರ ಗುಂಪಿನಿಂದ ಬೇರ್ಪಡಿಸಿ ಚಿಕಿತ್ಸೆ ನೀಡುವುದು ಆಗಿದೆ. ಈ ಬಾರಿ ಕೊರೊನಾ ಹರಡಿದರೂ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಕಾರಣ ಇದರ ನಿಗ್ರಹವನ್ನು, ಕೊಡಬೇಕಾದ ಚಿಕಿತ್ಸೆಯ ವ್ಯವಸ್ಥೆ ,ಯೋಜನೆ ತಿಳಿದಿರುವುದರಿಂದ ಇದೀಗ ಇರುವ ಗುರಿ ಅಂದರೆ ಸೋಂಕು ನಿಯಂತ್ರಣವೇ ಆಗಿದೆ.
ನಿಮ್ಮ ಬಾತ್ ರೂಮ್, ಟೇಬಲ್ ಮೇಲ್ಭಾಗಗಳು, ಚೇರ್‌ಗಳ ಹಿಡಿಕೆಗಳು, ಬಾಗಿಲ ಚಿಲಕಗಳು ಹೀಗೆ ಎಲ್ಲ ಕಡೆ ಸ್ಯಾನಿಟೆ„ಸ್ ದ್ರವವನ್ನು ಸಿಂಪಡಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಔಷಧ ಸಿಂಪಡಣೆಯ ಅನಂತರ ಕೇವಲ 15 ಸೆಕೆಂಡುಗಳಿಂದ ಕೆಲವು ನಿಮಿಷಗಳಲ್ಲಿ ರೋಗಾಣುಗಳು ಸಾಯುತ್ತವೆ ಮತ್ತು ಇದು ನೀವು ಸಿಂಪಡಿಸಿದ ಔಷಧದ ಗುಣಮಟ್ಟದ ಮೇಲೂ ಕೂಡ ಅವಲಂಬಿತವಾಗಿರುತ್ತದೆ ಎಂಬುದು ನೆನಪಿರಲಿ.
ಸಾಧ್ಯವಾದಷ್ಟು ಕೆಲವು ವಸ್ತುಗಳನ್ನು ಪದೇಪದೆ ಮುಟ್ಟುವುದರಿಂದ ದೂರವಿದ್ದರೆ ಒಳ್ಳೆಯದು. ಅದು ನಿಮ್ಮ ನೆಚ್ಚಿನ ಹಣದ ನೋಟುಗಳಾದರೂ ಸರಿ. ನಿಮ್ಮ ಮೊಬೈಲ್ ಫೋನ್ ಅಥವಾ ಟಿವಿ ಸ್ಕ್ರೀನ್, ನಿಮ್ಮ ರಿಮೋಟ್ ವಸ್ತುಗಳು ಹೀಗೆ ಇಂತಹ ವಸ್ತುಗಳಿಂದ ಸ್ವಲ್ಪ ದೂರವಿದ್ದರೆ ಒಳ್ಳೆಯದು.
ಯಾವುದೇ ಕಾರಣಕ್ಕೂ ಮೊಬೆ„ಲ್ ಫೋನ್ ಅನ್ನು ಬಾತ್‌ರೂಮ್‌ಗೆ ತೆಗೆದುಕೊಂಡು ಹೋಗಬೇಡಿ. ತೇವಾಂಶ ಹೆಚ್ಚಿರುವ ಕಾರಣ ಸೂಕ್ಷ್ಮಾಣುಗಳ ಪೋಷಣೆಗೆ ನೀವೇ ಅನುವು ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ ನಿಮಗೆ ಔಷಧ ಸಿಂಪಡಣೆಗೆ ಸಾಧ್ಯತೆ ಇಲ್ಲದೆ ಹೋದರೆ ಅಥವಾ ನೀವು ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಕೈಗಳನ್ನು ಆಗಾಗ ಸ್ಯಾನಿಟೆ„ಸರ್ ಉಪಯೋಗಿಸಿ ಸ್ವತ್ಛ ಮಾಡಿಕೊಳ್ಳುತ್ತಿರಿ. ಮತ್ತು ಪ್ರಮುಖವಾಗಿ ಯಾವುದೇ ಕಾರಣಕ್ಕೂ ಮನೆಯ ಹೊರಗಡೆ ಹೋದಂತಹ ಸಂದರ್ಭದಲ್ಲಿ ನಿಮ್ಮ ಕೈಗಳಿಂದ ನಿಮ್ಮ ಕಣ್ಣುಗಳು, ಮೂಗು, ಮುಖ ಹಾಗೂ ಬಾಯಿಯನ್ನು ಆಗಾಗ ಮುಟ್ಟಿ ಕೊಳ್ಳಬೇಡಿ. ಕೋವಿಡ್ ಲಕ್ಷಣ ನಮಗೆಲ್ಲ ತಿಳಿದೇ ಇದೆ. ಅನುಮಾನ ಕಂಡು ಬಂದರೆ ತತ್‌ಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ,ಕುಟುಂಬ ಸದಸ್ಯರಿಗೆ, ಹಿರಿಯರಿಗೆ ಹರಡದಂತೆ ಜಾಗ್ರತೆ ವಹಿಸಿ, ಸೋಂಕು ಇದೆ ಎಂದು ಗೊತ್ತಾದರೆ ತತ್‌ಕ್ಷಣ ಚಿಕಿತ್ಸೆ ನೀಡಿದರೆ ಗುಣಮುಖವಾಗುತ್ತದೆ. ಭಯ ಪಡುವ ಅಗತ್ಯವಿಲ್ಲ. ಇದಕ್ಕಾಗಿ ನಮ್ಮ ಕಿವಿ ಮಾತು ಜನರು ಸ್ವಯಂ ನಿಯಂತ್ರಣ ವಹಿಸಬೇಕು. ಸೋಂಕು ನಿರ್ಮೂಲನೆಗೆ ಸಹಕಾರ ನೀಡಬೇಕು ಎಂಬುದು ಕಳಕಳಿಯ ಮನವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.