ಡಾ.ಜಿ.ಪರಮೇಶ್ವರ್ ಕಪ್ ಕಬ್ಬಡಿ ಪಂದ್ಯಾವಳಿ: ಬಹುಮಾನ ವಿತರಣೆ
Team Udayavani, Mar 4, 2022, 10:14 PM IST
ಕೊರಟಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ ಕಬ್ಬಡಿ ಪಂದ್ಯಾವಳಿ ವಿಜೇತ ತಂಡಗಳೊಂದಿಗೆ ಶಾಸಕ ಡಾ.ಜಿ.ಪರಮೇಶ್ವರ್,
ಕೊರಟಗೆರೆ: ಕೊರಟಗೆರೆ ಪಟ್ಟಣದಲ್ಲಿ ಮಾ.1 ರಿಂದ ಮಾ.3 ರವರೆಗೆ ನಡೆದ ಡಾ.ಜಿ.ಪರಮೇಶ್ವರ್ ಕಪ್ ಕಬ್ಬಡಿ ಪಂದ್ಯಾವಳಿಗಳ ಕಡೇದಿನದಿಂದು ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ವಿಕ್ಷಿಸುವ ಮೂಲಕ ಇತಿಹಾಸವನ್ನು ಸೃಷ್ಠಿಮಾಡಿದ್ದು ದೇಶಿಯ ಆಟಕ್ಕೆ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಮಹತ್ವ ದೊರೆತಿದೆ,
ಶಾಸಕ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕ್ಷೇತ್ರದ ಯುವ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕೊರಟಗೆರೆ ವಿಧಾನ ಸಭಾ ವ್ಯಾಪ್ತಿಯ ಕಬ್ಬಡಿ ಪಂದ್ಯಾವಳಿಗಳಿಗೆ ಡಾ.ಜಿ.ಪರಮೇಶ್ವರ್ ಕಪ್ ಎಂದು ಹೆಸರಿಡಲಾಗಿತ್ತು, 2021 ರ ನವೆಂಬರ್ ತಿಂಗಳಲ್ಲಿ ಕ್ಷೇತ್ರದ 165 ತಂಡಗಳು ಈ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದು 6 ಹೋಬಳಿಗಳಲ್ಲಿ ಲೀಗ್ ಪಂದ್ಯಾವಳಿಗಳನ್ನು ನಡೆಸಿ ವಿಜೇತ17 ತಂಡಗಳು ಅಂತಿಮ ಘಟಕ್ಕೆ ಆಯ್ಕೆಯಾದವು, ಪೈನಲ್ ಪಂದ್ಯಾವಳಿಗಳನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನೂತನ ವರ್ಷದ 2022ರ ಜನವರಿ 22 ರಂದು ಬೃಹತ್ ಗ್ಯಾಲರಿಯನ್ನು ನಿರ್ಮಿಸಿ ಆಯೋಜಿಸಲಾಗಿತ್ತು ಪಂದ್ಯಗಳನ್ನು ಪ್ರಾರಂಭವಾಗಲು ಕೆಲವೇ ನಿಮಿಷಗಳಲ್ಲಿ ಭಾರಿ ಮಳೆಯಿಂದ ಕಬ್ಬಡಿ ಪಂದ್ಯಾವಳಿಗಳನ್ನು ಮುಂದೂಡಲಾಗಿತು.
ನಂತರ ಮಾ.1 ರ ಮಹಾಶಿವರಾತ್ರಿಯಂದು ಪಂದ್ಯಗಳನ್ನು ಮತ್ತೆ ಬೃಹತ್ ಗ್ಯಾಲರಿ ನಿರ್ಮಿಸಿ ಆಯೋಜಿಸಿ ಶಾಸಕ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರು, ನಟ ವಿನೋದ್ ಪ್ರಭಾಕರ್ ಸೇರಿದಂತೆ ಹಲವು ಗಣ್ಯರು ಹಾಗೂ ಜನ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಪಂದ್ಯಗಳು ಪ್ರಾರಂಭವಾದ ದಿನದಿಂದ ಅಂತ್ಯದವರೆಗೆ ಪ್ರತಿದಿನ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪಂದ್ಯವೀಕ್ಷಿಸಲು ಆಗಮಿಸುತ್ತಿದ್ದರು. ಮಾ. 3 ರ ಅಂತಿಮ ಘಟ್ಟದ ಪಂದ್ಯಾವಳಿಗಳಿಗೆ ನಿರ್ಮಿತ ಗ್ಯಾಲರಿ ಹಾಗೂ ಕ್ರೀಡಾಂಗಣದಲ್ಲಿ (ಸ್ಟೇಡಿಯಂ) ಸುಮಾರು5 ಸಾವಿರಕ್ಕೂ ಹೆಚ್ಚು ಮಂದಿ ಕ್ರೀಡಾ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಸೇರಿದ್ದರು ಇದರಲ್ಲಿ ಸುಮಾರು 2 ಸಾವಿರದಷ್ಟು ಮಹಿಳೆ ಮತ್ತು ಬಾಲಕೀಯರು ಉಪಸ್ಥಿತರಿದ್ದರು, ಸ್ಥಳೀಯ ಆಟಗಾರರ ಪಂದ್ಯಾವಳಿಗಳಿಗೆ ಇಷ್ಟು ಮಂದಿ ವೀಕ್ಷಿಸಿರುವುದು ಕೊರಟಗೆರೆಯಲ್ಲಿ ಇತಿಹಾಸ ನಿರ್ಮಾಣ ವಾಗಿದೆ.
ಸಮಾರೊಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನವನ್ನು ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ವಿತರಿಸಿ ಮಾತನಾಡಿ ಕಬ್ಬಡಿ ಪಂದ್ಯವು ನಮ್ಮ ದೇಶದಲ್ಲಿ ಹುಟ್ಟಿ ನಮ್ಮ ಜನರ ಮೆಚ್ಚುಗೆ ಗಳಿಸಿರುವ ದೇಶಿಯ ಕ್ರೀಡೆಯಾಗಿದ್ದು ಗ್ರಾಮೀಣ ಕ್ರೀಡೆಯೆಂದು ಪ್ರಸಿದ್ದಿಯಾಗಿದೆ, ಈ ಕ್ರೀಡೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡ್ಯೋದಿದ್ದು ಒಲಂಪಿಕ್ ಕ್ರೀಡೆಯಲ್ಲೂ ಕಬ್ಬಡಿ ಪಂದ್ಯಗಳನ್ನು ಸೇರ್ಪಡೆ ಮಾಡುವ ಉದ್ದೇಶವನ್ನು ಸಂಸ್ಥೆಯಲ್ಲಿ ಮಾತುಕತೆಗಳು ನಡೆಯುತ್ತಿವೆ, ಇದನ್ನು ಮನಗೊಂಡು ಕ್ಷೇತ್ರದ ಯುವಕರಲ್ಲಿ ಪ್ರತಿಭೆಗಳನ್ನು ಗುರುತಿಸಿ ಹೊರಚೆಲ್ಲುವ ಉದ್ದೇಶದಿಂದ ಈ ಕಬ್ಬಡಿ ಪಂದ್ಯಾವಳಿಗಳನ್ನು ನಮ್ಮ ಯುವ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ರವರಿಂದ ಆಯೋಜಿಸಲಾಗಿದ್ದು ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ಅಚ್ಚುಕಟ್ಟಾಗಿ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಯುವ ಪ್ರತಿಭೆಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶಿಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳನ್ನು ಕ್ಷೇತ್ರ ಮಟ್ಟದಲ್ಲಿ ಆಯೋಜಿಸಲಾಗುವುದು, ಈಗಾಗಲೆ ಪಟ್ಟಣದಲ್ಲಿ ಒಳಾಗಂಣ ಕ್ರೀಡಾಗಂಣದ ಕಟ್ಟಡದ 6 ಕೋಟಿ ರೂ ವೆಚ್ಚದ ಕಾಮಗಾರಿ ನಡೆಯುತ್ತಿದ್ದು ಕ್ರೀಡಾ ಪಟ್ಟುಗಳಿಗೆ ಎಲ್ಲಾ ಒಳಾಂಗಣ ಕ್ರೀಡೆಗಳಲ್ಲಿ ಅಬ್ಯಾಸ ನಡೆಸುವಂತೆ ಮಾಡಿಕೊಡಲಾಗುವುದು, ಇತ್ತೀಚಿನ ದಿನಗಳಲ್ಲಿ ಯುವಕರು ದಾರಿ ತಪ್ಪುತಿರುವ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳು ವಂತೆ ಮಾಡಲು ಈ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಪಂದ್ಯಾವಳಿಗಳಲ್ಲಿ ಮೊದಲ ಬಹುಮಾನ 1 ಲಕ್ಷ ರೂ ಮತ್ತು ಪಾರಿತೋಷಕವನ್ನು ಕೊರಟಗೆರೆ ಎ ಟೀಮ್, ದ್ವಿತೀಯ ಬಹುಮಾನ ೫೦ ಸಾವಿರ ಮತ್ತು ಪಾರಿತೋಷಕ ಕೋರಾ ಎ ಟೀಮ್, ತೃತೀಯ ಬಹುಮಾನ 25 ಸಾವಿರ ಹಾಗೂ ಪಾರಿತೋಷಕ ಕೊರಟಗೆರೆ ಬಿ.ಟೀಮ್, ನಾಲ್ಕನೇ ಬಹುಮಾನ 10 ಸಾವಿರ ಮತ್ತು ಪಾರಿತೋಷಕ, ಹೊಳವನಹಳ್ಳಿ ಎ ಟೀಮ್ ಗಳಿಸಿಕೊಂಡವು, ವೈಯಕ್ತಿಕ ಬಹುಮಾನಗಳನ್ನು ಕೊರಟಗೆರೆಯ ನಂದನ್, ನರೇಂದ್ರ, ಹೊಳವನಹಳ್ಳಿಯ ಶಿವಕುಮಾರ್, ಕೋರಾದ ಮಲ್ಲಿಕಾರ್ಜುನ ಪಡೆದುಕೊಂಡರೆ ಉತ್ತಮ ಟೀಮ್ ಪ್ರಶಸ್ತಿಯನ್ನು ಕೋರಾ ಪಡೆದುಕೊಂಡಿತು,
ಕಾರ್ಯಕ್ರದಲ್ಲಿ ಅಯೋಜಕರುಗಳಾದ ವಿನಯ್‌ಕುಮಾರ್, ರವಿಕುಮಾರ್, ಅರವಿಂದ್, ದಿಲೀಪ್‌ಕುಮಾರ್, ಅಭಿಲಾಷ್, ಮನೋಜ್, ಅನಂತ್, ಡೈರಿಸುರೇಶ್, ಚಿಕ್ಕನಾರಾಯಣ್, ಮಂಜುನಾಥ್, ಸೋಪಿಯಾನ್ ಕ್ಷಿಮಕ್ತಿಯಾರ್, ಜೈನ್‌ಸೈಪುಲ್ಲಾ, ಭರತ್, ಮಧು, ರಾಜ್ಯ ಸಾವಯವ ಕೃಷಿ ಮಾಜಿ ಅಧ್ಯಕ್ಷ ಸೋಮಶೇಖರ್, ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್ ಪಾಟೀಲ್, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆಶಂಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಯಮ್ಮ, ಶೈಲಜಾ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಹುಲಿಕುಂಟೆ ರುದ್ರಪ್ರಸಾದ್, ಪ.ಪಂ.ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಂದೀಶ್, ನಾಗರಾಜು, ಮಾಜಿ ಉಪಾಧ್ಯಕ್ಷ ಮಂಜುನಾಥ್, ಟಿ.ಎ.ಪಿ.ಸಿ,ಎಂ.ಎಸ್ ಉಪಾಧ್ಯಕ್ಷ ರಾಘವೇಂದ್ರ, ಮುಖಂಡರುಗಳಾದ ಎಂ.ಎನ್.ಜೆ.ಮಅಜುನಾಥ್, ಮಲ್ಲಿಕಾರ್ಜುನ್, ಗಣೇಶ್, ಆಟೋ ಕುಮಾರ್, ತುಂಗಮಅಜುನಾಥ್, ಕೆ.ಎಂ.ಸುರೇಶ್, ಕೆ.ಬಿ.ಲೋಕೇಶ್ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.