ಗ್ರಾಮಾಭಿವೃದ್ಧಿಗೆ ದೂರದೃಷ್ಟಿಯ ಯೋಜನೆ: ಡಾ| ಹಂದೆ ಸಲಹೆ
80 ಬಡಗಬೆಟ್ಟು ಗ್ರಾ.ಪಂ.ಗೆ ಕೆ.ಎಂ. ಉಡುಪ ಪುರಸ್ಕಾರ ಪ್ರದಾನ
Team Udayavani, Apr 25, 2022, 5:45 AM IST
ಉಡುಪಿ : ಗ್ರಾಮಾಭಿ ವೃದ್ಧಿಯ ಬಗ್ಗೆ ಕೆ.ಎಂ. ಉಡುಪರು ದೂರದೃಷ್ಟಿಯ ಯೋಜನೆ ಹೊಂದಿ ದವರಾಗಿದ್ದರು. ಗ್ರಾಮಾಭಿವೃದ್ಧಿಯ ವಿಚಾರವಾಗಿ ನಾವು ಹತ್ತು ವರ್ಷಗಳ ದೂರದೃಷ್ಟಿಯ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುವುದೇ ಉಡುಪರಿಗೆ ಸಲ್ಲಿಸಬಹುದಾದ ಶ್ರೇಷ್ಠ ಗೌರವ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ| ಹರೀಶ್ ಹಂದೆ ಸಲಹೆ ನೀಡಿದರು.
ರವಿವಾರ ಜಿ.ಪಂ. ಸಭಾಂಗಣದಲ್ಲಿ ಜರಗಿದ ಕೆ.ಎಂ. ಉಡುಪ ಗ್ರಾಮ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ 80 ಬಡಗಬೆಟ್ಟು ಗ್ರಾ.ಪಂ. ಪರ ವಾಗಿ ಅಧ್ಯಕ್ಷೆ ಮಾಧವಿ ಆಚಾರ್ಯ, ಪಿಡಿಒ ಅಶೋಕ್ ಕುಮಾರ್ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು.
ಶಾಸಕ ರಘು ಪತಿ ಭಟ್ ಅಧ್ಯ ಕ್ಷತೆ ವಹಿ ಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಜಿ.ಪಂ. ಸಿಇಒ ಡಾ| ನವೀನ್ ಭಟ್, ಟ್ರಸ್ಟಿಗಳಾದ ಮೋಹನ್ ಉಡುಪ, ಮಹೇಶ್ ಉಡುಪ, ಮಾಧವ ಉಡುಪ ಉಪಸ್ಥಿತರಿದ್ದರು. ಮಂಜುನಾಥ್ ಭಟ್ ನಿರೂಪಿಸಿದರು.
ಕುರಿಯನ್ ಮಾತು ನಿಜವಾಗುತ್ತಿದೆ
“ಮುಂದೊಂದು ದಿನ ದೇಶದ ಪ್ರಸಿದ್ಧ ಅಮುಲ್ ಬ್ರ್ಯಾಂಡನ್ನು ಕರ್ನಾಟಕದ “ನಂದಿನಿ’ ಹಿಂದಿಕ್ಕುವ ದಿನ ಬಂದರೆ ಆಶ್ಚರ್ಯವಿಲ್ಲ’ ಎಂದು ಕ್ಷೀರಕ್ರಾಂತಿಯ ಪಿತಾಮಹ ಡಾ| ವರ್ಗೀಸ್ ಕುರಿಯನ್ ಹೇಳಿದ್ದರು. ಅದು ನಿಜವಾಗುತ್ತಿದೆ ಎಂದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಆ್ಯನಿಮಲ್ ನ್ಯೂಟ್ರಿಶನ್ ಆ್ಯಂಡ್ ಫಿಸಿಯಾಲಜಿಯ ನಿರ್ದೇಶಕ ಡಾ| ರಾಘವೇಂದ್ರ ಭಟ್ ಹೇಳಿದರು. ದೇಶದ ಆರ್ಥಿಕತೆಯಲ್ಲಿ ಪಶುಸಂಗೋಪನೆ, ಕ್ಷೀರ ಉತ್ಪಾದನೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿದೆ. ಹೈನುಗಾರಿಕೆ ಗ್ರಾಮಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಗಣನೀಯವಾಗಿದೆ. ಜಾಗತಿಕವಾಗಿ ಹಾಲು ಉತ್ಪಾದನೆ ಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಪ್ರಸ್ತುತ 200 ದಶಲಕ್ಷ ಟನ್ ಹಾಲು ಉತ್ಪಾದನೆಯಾಗುತ್ತಿದ್ದು, 2025ರ ಹೊತ್ತಿಗೆ ದೇಶವು 250 ದಶಲಕ್ಷ ಟನ್ ಹಾಲು ಉತ್ಪಾದನೆ ಗುರಿಯನ್ನು ಹೊಂದಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.