ಜೀರಿಗೆ ನೀರು ಕುಡಿದು ನೋಡಿ…
Team Udayavani, Oct 20, 2020, 12:39 PM IST
ಸಡನ್ನಾಗಿ ಎದುರಾಗುವ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯೂ ನಮ್ಮ ಮನೆಯಲ್ಲೇ ಇರುತ್ತದೆ. ನಾವೆಲ್ಲಾ ಗಾಬರಿಯಾಗಿ, ವೈದ್ಯರ ಬಳಿ ಹೋಗಿ, ಸಾವಿರಾರು ರೂ. ತೆತ್ತು ಬರುತ್ತೇವೆ. ಈ ಕೊರೊನಾ ಕಾಲದಲ್ಲಿ ನೆಗಡಿ ಕೂಡ ಅನೇಕ ಅನುಮಾನಗಳಿಗೆ ಎಡೆಮಾಡಿ ಕೊಡುತ್ತದೆ. ಹಾಗಂತ ಪದೇಪದೆ ವೈದ್ಯರ ಬಳಿಗೆ ಹೋಗುವುದೂ ಸೂಕ್ತವಲ್ಲ. ಸಾಮಾನ್ಯವಾಗಿ, ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಬಾಯಿ ಹುಣ್ಣು, ಪಿತ್ತ ಸಂಬಂಧಿ ತಲೆನೋವು, ವಾಂತಿ- ಇದಕ್ಕೆಲ್ಲಾ ಮನೆಮದ್ದಿನ ಮೊರೆ ಹೋಗಬಹುದು. ಮನೆಯಲ್ಲಿ ಜೀರಿಗೆ ಇದ್ದರೆ ಸಾಕು. ಬಿಸಿಬಿಸಿ ನೀರಿಗೆ ಜೀರಿಗೆ ಹಾಕಿ, ಅದನ್ನು ಕುದಿಸಿ ಕುಡಿದರೆ ಹೊಟ್ಟೆ ಭಾಗದ ಸಮಸ್ಯೆಗಳು ಶಮನವಾಗುತ್ತವೆ. ಜೀರ್ಣಕ್ರಿಯೆ ವೇಗವಾಗಿ ಆಗುತ್ತದೆ.
ಜೀರ್ಣ ಸರಿಯಾಗಿ ಆದರೆ, ಯಾವ ಕಾಯಿಲೆ ಕೂಡ ಬರುವುದಿಲ್ಲ. ಜೀರಿಗೆಗೆ ರಕ್ತ ಶುದ್ದಿ ಮಾಡುವ ಶಕ್ತಿ ಇದೆ. ಒಂದು ಪಕ್ಷ ಕೊರೊನಾ ಕಾಲದಲ್ಲಿ ಬಾಯಿ ರುಚಿ ಕಳೆದುಕೊಂಡರೆ ಗಾಬರಿಯಾಗಬೇಡಿ. ಜೀರಿಗೆ ಕಷಾಯ ಮಾಡಿ, ಅದಕ್ಕೆ ಬೆಲ್ಲ ಬೆರೆಸಿ ಕುಡಿದು ನೋಡಿ. ನಾಲಿಗೆಗೆ ರುಚಿ ಸ್ಪಷ್ಟವಾಗುತ್ತದೆ. ಮುಖ್ಯ ವಾಗಿ, ಒಳಗಿರುವ ಜ್ವರವನ್ನೂ, ಜ್ವರ ಬರುವ ಲಕ್ಷಣಗಳ ಮೂಲ ಬೇರನ್ನು ಅಲ್ಲೇ ಕಡಿಯುವುದರಲ್ಲಿ ಜೀರಿಗೆ, ಪಪ್ಪಾಯಿ ಹಣ್ಣು ಎತ್ತಿದ ಕೈ. ಅದರಲ್ಲೂ ನಾಟಿ ಪಪ್ಪಾಯವನ್ನು ದಿನಕ್ಕೆ ಮೂರು ಪೀಸು ತಿಂದಿದ್ದೇ ಆದರೆ, ಯಾವ ಅಲರ್ಜಿಯೂ ದೇಹ ಹೊಕ್ಕುವುದಿಲ್ಲ. ತಲೆನೋವು, ಸ್ವಲ್ಪ ಮೈ ಕೈ ನೋವಿದ್ದರೆ ಗಾಬರಿ
ಆಗಬೇಡಿ. ಅಂಥ ಸಂದರ್ಭದಲ್ಲಿ- ಐದು ಗ್ಲಾಸ್ ನೀರಿಗೆ 6-8 ಚಮಚ ಜೀರಿಗೆ ಪುಡಿ ಹಾಕಿ, ಮೂರು ಚಮಚ ಮೆಣಸಿನ ಕಾಳು ಕುಟ್ಟಿ ಹಾಕಿ. ಒಣ ಶುಂಠಿ,
ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ದಿನಕ್ಕೆ ಮೂರು ಬಾರಿ ಕುಡಿದರೆ ತಲೆನೋವಿನ ಜೊತೆಗೆ ಜ್ವರ ಕೂಡ ನಾಪತ್ತೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.