Udupi ಗೀತೋತ್ಸವದ ಗೀತಾ ಪ್ರಚಾರ ರಥಕ್ಕೆ ಚಾಲನೆ
Team Udayavani, Nov 26, 2023, 10:38 PM IST
ಉಡುಪಿ: ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂಕಲ್ಪಿಸಿರುವ ಮುಂಬರುವ ತಮ್ಮ ಚತುರ್ಥ ಪರ್ಯಾಯದ ಜಾಗತಿಕ ಮಟ್ಟದ ಧಾರ್ಮಿಕ ಸಂಕಲ್ಪ ಕೋಟಿಗೀತಾ ಲೇಖನ ಯಜ್ಞ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಗೀತೋತ್ಸವ ಕಾರ್ಯಕ್ರಮ ಡಿ. 23 ಮತ್ತು 24ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಈ ಸಂಬಂಧ ಗೀತಾ ಪ್ರಚಾರಕ್ಕಾಗಿ ನಿರ್ಮಿಸಲಾದ ಗೀತಾ ರಥಕ್ಕೆ ಗೀತೋತ್ಸವ ಸಮಿತಿಯ ನೇತೃತ್ವ ವಹಿಸಿದ ಎನ್.ಆರ್. ರಮೇಶ್ ಚಾಲನೆ ನೀಡಿ, ಪುತ್ತಿಗೆ ಶ್ರೀಪಾದರು ವಿಶ್ವಾದ್ಯಂತ ಗೀತಾ ಪ್ರಚಾರ ಮಾಡುತ್ತಿದ್ದು, ಸನಾತನ ಧರ್ಮದ ಏಳಿಗೆಗೆ ಭಗವದ್ಗೀತೆಯ ಮಾಧ್ಯಮದಲ್ಲಿ ವಿಶೇಷವಾಗಿ ಶ್ರಮಿಸುತ್ತಿರುವ ಶ್ರೀಪಾದರ ಸಂಕಲ್ಪಕ್ಕೆ ಬೆಂಗಳೂರಿನ ಜನತೆ ಕೈಜೋಡಿಸಬೇಕು ಎಂದರು.
ಕಾರ್ಯಾಧ್ಯಕ್ಷೆ ಡಾ| ಎಚ್.ಎಸ್ .ಪ್ರೇಮಾ, ಶ್ರೀಪಾದರ ಆಪ್ತ ಕಾರ್ಯದರ್ಶಿ ಎಂ. ಪ್ರಸನ್ನಾಚಾರ್ಯ, ಬೆಂಗಳೂರು ಪುತ್ತಿಗೆ ಮಠದ ವ್ಯವಸ್ಥಾಪಕ ಎ.ಬಿ.ಕುಂಜಾರ್, ಶ್ರೀಧರ ಭಟ್, ಜೋತಿಷಿ ನಾಗರಾಜ ನಕ್ಷತ್ರಿ, ಸಮಾಜ ಸೇವಕರಾದ ಮಾಲಿನಿ, ಹರಿಪ್ರಸಾದ್, ವೆಂಕಟೇಶ್ ಭಟ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.