Alva’s: ಸಪ್ತ ಮೇಳಗಳ ಮುನ್ನುಡಿಯೊಂದಿಗೆ ಆಳ್ವಾಸ್‌ ವಿರಾಸತ್‌ಗೆ ಚಾಲನೆ


Team Udayavani, Dec 15, 2023, 12:52 AM IST

alv a

ಮೂಡುಬಿದಿರೆ: ರಾಷ್ಟ್ರದ ಸಾಂಸ್ಕೃತಿಕ ಸಿರಿವಂತಿಕೆಯ ದ್ಯೋತಕವಾದ ಆಕರ್ಷಕ ಮೆರವಣಿಗೆ, ಭಕ್ತಿಯ ಸೂಚಕವಾದ ವಿಭಿನ್ನ ಸಾಂಸ್ಕೃತಿಕ ರಥ ಎಳೆಯುವಿಕೆ, ರಥಕ್ಕೆ ಆರತಿಯ ಗೌರವದ ಮುನ್ನುಡಿಯೊಂದಿಗೆ 29ನೇ ಆಳ್ವಾಸ್‌ ವಿರಾಸತ್‌ಗೆ ಗುರುವಾರ ಸಂಭ್ರಮೋಲ್ಲಾಸದ ಚಾಲನೆ ಸಿಕ್ಕಿದೆ.

ವಿರಾಸತ್‌ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಮಾತನಾಡಿ, ಇಂದು ದೇಶಕ್ಕೆ ಸಮರ್ಪಣ ಮನೋಭಾವ ಹೊಂದಿರುವ ಜನರು ಬೇಕಾಗಿದ್ದಾರೆ. ವಿರಾಸತ್‌ನಂತಹ ರಾಷ್ಟ್ರೀಯ ಉತ್ಸವಗಳು ಇಂತಹ ಮನೋಭಾವವನ್ನು ಪ್ರಚೋದಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿರಾಸತ್‌ ಆಯೋಜಿಸುವ ಮೂಲಕ ಯುವಜನರಲ್ಲಿ ದೇಶಕ್ಕಾಗಿ ಹೊಸತನ್ನು ಸೃಷ್ಟಿಸುವ ಕನಸನ್ನು ಬಿತ್ತುವ ಕೆಲಸ ನಡೆಯುತ್ತಿರುವುದು ಶ್ಲಾಘನಾರ್ಹ. ಇದರಿಂದ ಯುವಕರಲ್ಲಿ ಏನಾದರೂ ಮಾಡಲೇಬೇಕು ಎಂಬ ಸಂಕಲ್ಪ ಉಂಟಾಗುತ್ತದೆ ಎಂದರು.

ಮಾತೃಭಾಷೆಯಲ್ಲಿಯೇ ಕಲಿಯು ವುದು ಯಾವತ್ತೂ ಸದ್ವಿಚಾರ, ಜರ್ಮನಿ, ಜಪಾನ್‌ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಆಳ್ವಾಸ್‌ ಶಿಕ್ಷಣ ಸಂಸ್ಥೆ ಕನ್ನಡದಲ್ಲೇ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಳ್ವಾಸ್‌ ಸಂಸ್ಥೆಗೆ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಂತಹ ಕಾರ್ಯಕ್ರಮಗಳಿಗೆ ದೇಶದ ಹಲವು ಪ್ರದೇಶಗಳಿಂದ ಕಲಾವಿದರನ್ನು ಕರೆಸಿ ಶಾಸ್ತ್ರೀಯ ಹಾಗೂ ಜಾನಪದ ಮೇಳಗಳನ್ನು ನಡೆಸುವುದು ಸೂಕ್ತವಾಗಿದೆ. ಇದು ನಮ್ಮ ರಾಷ್ಟ್ರೀಯತೆಯನ್ನು ಮತ್ತಷ್ಟು ದೃಢಗೊಳಿಸುತ್ತದೆ ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದು, ಇದುವರೆಗೆ ವಿರಾಸತ್‌ ಆಯೋಜನೆ 28 ವರ್ಷಗಳಲ್ಲಿ ವಿಭಿನ್ನ ಅನುಭವ ಕೊಟ್ಟಿದೆ. ಜಿಲ್ಲೆಗೆ ಸೀಮಿತವಾಗಿದ್ದ ವಿರಾಸತ್‌ ಜಾಗತಿಕ ಮಟ್ಟಕ್ಕೆ ಬೆಳೆದು ನಿಂತಿದೆ. ಎಲ್ಲೂ ಇಲ್ಲದ ಯುವಶಕ್ತಿ ನಮ್ಮ ದೇಶದಲ್ಲಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂಬ ಉದ್ದೇಶಕ್ಕೆ ಪೂರಕವಾಗಿ ವಿರಾಸತ್‌ ನಡೆಯುತ್ತಿದೆ ಎಂದರು.

ಅಂಚೆ ಲಕೋಟೆ ಬಿಡುಗಡೆ
ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರ ಭಾವಚಿತ್ರ ಇರುವ ಅಂಚೆ ಲಕೋಟೆಯನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು.

ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಭಾರತ್‌ ಸ್ಕೌಟ್ಸ್‌ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ, ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಮೋಹನ್‌ ದೇವ್‌, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಪ್ರಸನ್ನ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಮುಸ್ತಫಾ ಎಸ್‌.ಎಂ., ಪ್ರವೀಣ್‌ ಕುಮಾರ್‌, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ರಾಧಾ, ವಿಧಾನ ಪರಿಷತ್‌ ಸದಸ್ಯ ಭೋಜೇ ಗೌಡ, ಸುರೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌, ಕ್ಯಾ| ಗಣೇಶ್‌ ಕಾರ್ಣಿಕ್‌, ಪ್ರದೀಪ್‌ ಕುಮಾರ್‌ ಕಲ್ಕೂರ, ನಾಮಭಕ್ತಿದಾಸ್‌, ಪ್ರೇಮಭಕ್ತಿದಾಸ್‌ ಉಪಸ್ಥಿತರಿದ್ದರು.

ಉಪನ್ಯಾಸಕರಾದ ರಾಜೇಶ್‌ ಡಿ’ಸೋಜಾ ಹಾಗೂ ಕೆ. ವೇಣು ಗೋಪಾಲ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಶ್ವದಲ್ಲೇ ಭಾರತದ ಛಾಪು

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಭಾರತವೀಗ ಬಡ ರಾಷ್ಟ್ರವಾಗಿ ಉಳಿದಿಲ್ಲ, ನಾಲ್ಕನೇ ಪ್ರಬಲ ರಾಷ್ಟ್ರವಾಗಿ ಬೆಳೆದಿದೆ, ಮೋದಿಯವರ ನಾಯಕತ್ವದಲ್ಲಿ ವಿಶ್ವದಲ್ಲೇ ತನ್ನ ಛಾಪು ಮೂಡಿಸುತ್ತಿದೆ ಎಂದರು.

ಮೋಹನ ಆಳ್ವರಂಥ ಅನೇಕರ ತ್ಯಾಗ ಪರಿಶ್ರಮದಿಂದ ದೇಶ ಬೆಳೆಯುತ್ತಿದೆ. ಆಳ್ವರು ದೊಡ್ಡ ಯಾಗವನ್ನೇ ಮಾಡುತ್ತಿದ್ದಾರೆ. ಇದೊಂದು ಜ್ಞಾನ ಯಾತ್ರೆ, ಇಲ್ಲಿ ಮನೋರಂಜನೆ ಮಾತ್ರವಲ್ಲ ಸಂಸ್ಕಾರವೂ ಸಿಗುತ್ತದೆ. ಸಂಸ್ಕೃತಿ ಸಂಸ್ಕಾರ ಈ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಸಿಗುತ್ತಿದೆ, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಪುಣ್ಯವಂತರು, ಇಂತಹ ಅವಕಾಶ ಅವರಿಗೆ ಸಿಕ್ಕಿದೆ. ಆಳ್ವರು ವಯಸ್ಸಾದಂತೆ ಹೆಚ್ಚೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಇದು ಮುಂದುವರಿಸಲಿ. ನಾವೆಲ್ಲರೂ ಸಹಸ್ರಬಾಹುಗಳಾಗಿ ಅವರ ಜತೆಗಿರುತ್ತೇವೆ ಎಂದರು.

ಕ್ಯಾ| ಪ್ರಾಂಜಲ್‌ಗೆ ಸಮರ್ಪಣೆ
ಇತ್ತೀಚೆಗೆ ದೇಶ ರಕ್ಷಣೆ ವೇಳೆ ಪ್ರಾಣತೆತ್ತ ಭಾರತೀಯ ಸೇನಾಧಿಕಾರಿ ಕ್ಯಾ| ಪ್ರಾಂಜಲ್‌ ಅವರಿಗೆ ಈ ಬಾರಿಯ ವಿರಾಸತ್‌ ಅನ್ನು ಸಮರ್ಪಿಸುವುದಾಗಿ ಉದ್ಘಾಟನೆ ವೇಳೆ ಡಾ| ಆಳ್ವ ತಿಳಿಸಿದರು. ಪ್ರಾಂಜಲ್‌ ಅವರು ನುಡಿಸಿರಿಗೆ ಹಲವು ಬಾರಿ ಬಂದಿದ್ದರು. ಅವರ ಕುಟುಂಬ ನನಗೆ ಆತ್ಮೀಯರು. ಪ್ರಾಂಜಲ್‌ ಅವರ ತಂದೆಯೊಂದಿಗೆ ಮಾತನಾಡಿದ್ದೆ. ಅವರು ಸಹಾಯ ಸ್ವೀಕರಿಸುವುದಕ್ಕೆ ನಿರಾಕರಿಸಿ, ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು.

ಭಕ್ತಿ ಬಾವ ಉದ್ದೀಪನಗೊಳಿಸಿದ ಸಾಂಸ್ಕೃತಿಕ ರಥ, ರಥಾರತಿ
ವಿರಾಸತ್‌ನ ಆರಂಭದಲ್ಲೇ ಗಮನ ಸೆಳೆದದ್ದು ಸಾಂಸ್ಕೃತಿಕ ರಥ ಹಾಗೂ ರಥಾರತಿ.

130ಕ್ಕೂ ಅಧಿಕ ಕಲಾತಂಡಗಳು ಮೆರವಣಿಗೆ ಮೂಲಕ ರಾಷ್ಟ್ರದ ಸಾಂಸ್ಕೃತಿಕ ವೈವಿಧ್ಯತೆಗೆ ಸಾಟಿಯಾದರೆ ಕೊನೆಯಲ್ಲಿ ನಡೆದ ರಥಯಾತ್ರೆಯಂತೂ ನೋಡುಗರಲ್ಲಿ ಭಕ್ತಿಯ ಅಲೆಗಳನ್ನೆಬ್ಬಿಸಿತು. ಶಂಖ, ಕೊಂಬು, ಕಹಳೆಯ ತಂಡಗಳು ಮುನ್ನಡೆಯುತ್ತಾ ಬಂದರೆ ಕಲಶ ಹೊತ್ತ ಮಹಿಳೆಯರು, ವಿಪ್ರರ ವೇದಘೋಷ, ಪಂಢರಾಪುರದ ಭಜನ ತಂಡ, ಹರೇರಾಮ ಹರೇಕೃಷ್ಣ ಭಜನ ತಂಡ, ಮೈಸೂರು ರಘುಲೀಲಾ ಸಂಕೀರ್ತನ ತಂಡಗಳ ಹಿಂದೆಯೇ ಗಣಪತಿ ಮೂರ್ತಿ ಇರುವ ಸಣ್ಣ ರಥ ಸಾಗಿ ಬಂತು, ಅದರ ಹಿಂದೆ ಸರಸ್ವತಿ, ಶ್ರೀಲಕ್ಷ್ಮೀ, ಹನುಮಂತರ ಪಲ್ಲಕ್ಕಿಯನ್ನು ಹೊತ್ತು ತರಲಾಯಿತು. ಬಳಿಕ ದೊಡ್ಡರಥದಲ್ಲಿ ಶ್ರೀರಾಮ-ಶ್ರೀಕೃಷ್ಣಾದಿ ಆರೂಢ ದೇವರುಗಳನ್ನಿರಿಸಿ ವೇದಿಕೆಯ ಮುಂಭಾಗಕ್ಕೆ ಎಳೆದು ತರಲಾಯಿತು. ಇದೇ ವೇಳೆ ಹರಿದ್ವಾರದಿಂದ ಆಗಮಿಸಿದ್ದ ವಿಪ್ರಕೂಟವು ವೇದಿಕೆಯನ್ನೇರಿ ವೇದಮಂತ್ರಗಳನ್ನು ಪಠಿಸಿತು. ಗಂಗಾರತಿ ಶೈಲಿಯಲ್ಲೇ ದೇವರುಗಳಿಗೆ ರಥಾರತಿ ಸಲ್ಲಿಸಿತು. ಈ ಅಪರೂಪದ ಸನ್ನಿವೇಶವನ್ನು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದವರು ಬೆರಗಿನಿಂದ ವೀಕ್ಷಿಸಿದರು. ಈ ರಥವನ್ನು ಕೊನೆಯ ದಿನ ಮತ್ತೆ ಎಳೆಯಲಾಗುವುದು.

3 ಸಾವಿರಕ್ಕೂ ಅಧಿಕ ಕಲಾವಿದರು ನಾಡಿನ ವಿವಿಧೆಡೆಯಿಂದ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಜಾನಪದ, ಸಂಪ್ರದಾಯ, ಪುರಾಣ ಹಿನ್ನೆಲೆಯ ಯಕ್ಷಗಾನ, ಕಹಳೆ, ಕೊಡೆಗಳು, ಪೂರ್ಣಕುಂಭ, ನಾಗಸ್ವರ, ನಂದಿಧ್ವಜ, ಪೂಜಾಕುಣಿತ, ಆಂಜನೇಯ ವಾನರಸೇನೆ, ತಟ್ಟಿರಾಯ, ಮರಗಾಲು, ಕೇರಳದ ತೆಯ್ಯಂ ಗಮನ ಸೆಳೆದರೆ ಕೇರಳ ಚೆಂಡೆ, ಊರಿನ ಚೆಂಡೆ, ನಾಸಿಕ್‌ ಬ್ಯಾಂಡ್‌, ಡೊಳ್ಳು ಕುಣಿತ, ಜಗ್ಗಲಿಗೆ, ರಣ ಕಹಳೆ ನೋಡುಗರಲ್ಲಿ ರೋಮಾಂಚನ ಮೂಡಿಸಿದವು.

ಘಟೋತ್ಕಜ, ಕಿಂಗ್‌ ಕಾಂಗ್‌, ಮೀನು, ವಿಚಿತ್ರ ಮಾನವ, ಜೋಡಿ ಜಿಂಕೆ, ಶಿವ-ಆಘೋರಿಗಳು, ಅರ್ಧ ನಾರೀಶ್ವರ, ವಾರ್‌ ಕ್ರಾಫ್ಟ್‌ ಹೊಸತನಕ್ಕೆ ಸಾಕ್ಷಿಯಾದವು. ಆಳ್ವಾಸ್‌ ವಿದ್ಯಾರ್ಥಿಗಳ ಶ್ರೀಲಂಕಾ ಜಾನಪದ ವೇಷ, ಏಂಜೆಲ್ಸ್‌, ಸಾಂತಾಕ್ಲಾಸ್‌, ಕಾರ್ಟೂನ್ಸ್‌, ಗೊಂಬೆಗಳು, ತಟ್ಟಿರಾಯ ನೋಡುಗರಿಗೆ ಖುಷಿಕೊಟ್ಟವು.

ಹುಲಿವೇಷಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರೆ ಕೇರಳ, ತಮಿಳುನಾಡಿನ ವಿಶಿಷ್ಟ ಮಿನುಗುವ ದೀಪಗಳ ಪ್ರಭಾವಳಿಯಿರುವ ಶೃಂಗಾರಿ ಮೇಳ, ಚಿಟ್ಟೆ ವೇಷ, ಬಿಳಿ ವೇಷ, ಇತ್ಯಾದಿಗಳು ವಿಶೇಷವಾಗಿ ಗಮನ ಸೆಳೆದವು.

ಮರಗಾಲು ತಂಡದಲ್ಲಿ ಉಡುಪಿ ಕುರ್ಕಾಲಿನ ಹೃದಯ ಹೆಜ್ಜೆ ಹಾಕಿದ್ದು ಸಭಿಕರ ಮನಸೆಳೆದಳು.

ಉದ್ಘಾಟನೆಗೆ ಮುನ್ನ ರಾಷ್ಟ್ರೀಯ ಉತ್ಸವವನ್ನು ಬಿಂಬಿಸುವಂತೆ, ತುಳುನಾಡಿನ ದೇವಳದ ಧ್ವಜಸ್ತಂಭ ಮಾದರಿಯಲ್ಲಿ ಆಳ್ವಾಸ್‌ ವಿರಾಸತ್‌ನ ಧ್ವಜಾರೋಹಣವನ್ನು ರಾಜ್ಯಪಾಲರು ನೆರವೇರಿಸಿದರು.

ವಿರಾಸತ್‌ ಕಾರ್ಯಕ್ರಮ ವಿವರ
ಶುಕ್ರವಾರ ಸಂಜೆ 5.45ಕ್ಕೆ ದೀಪ ಪ್ರಜ್ವಲನದೊಂದಿಗೆ ಆಳ್ವಾಸ್‌ ವಿರಾಸತ್‌-2023ರ ಎರಡನೇ ದಿನದ ಕಲಾಪ ಪ್ರಾರಂಭವಾಗಲಿದೆ. 5.45ಕ್ಕೆ ಹಿನ್ನೆಲೆ ಗಾಯಕರಾದ ಬೆನ್ನಿ ದಯಾಲ್‌ ಅವರಿಂದ ಗಾನ ವೈಭವ, ರಾತ್ರಿ 8ರಿಂದ 9ರವರೆಗೆ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಸಂಯೋಜಿಸಲಾಗಿದೆ. ಶನಿವಾರ ಸಂಜೆ 5.45ರಿಂದ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌ ಅವರಿಂದ ಭಾವಲಹರಿ, 8ರಿಂದ 9ರ ವರೆಗೆ ಆಳ್ವಾಸ್‌ ಸಾಂಸ್ಕೃತಿಕ ವೈಭವ.

ಸಮಾರೋಪ
ರವಿವಾರ ಸಂಜೆ 5.15ಕ್ಕೆ ಡಾ| ಮೈಸೂರು ಮಂಜುನಾಥ್‌, ಡಾ. ಪ್ರವೀಣ್‌ ಗೋಡ್ಖೀಂಡಿ ಮತ್ತು ವಿಜಯ ಪ್ರಕಾಶ್‌ ಇವರಿಗೆ ಆಳ್ವಾಸ್‌ ವಿರಾಸತ್‌ -2023ರ ಪ್ರಶಸ್ತಿ ಪ್ರದಾನ ಬಳಿಕ ಪ್ರಶಸ್ತಿ ಪುರಸ್ಕೃತರ ತಂಡದವರಿಂದ ತಾಳವಾದ್ಯ ಸಂಗೀತ, 7.30ರಿಂದ ವಿಜಯ ಪ್ರಕಾಶ್‌ ಇವರಿಂದ ಸಂಗೀತ ರಸಸಂಜೆ, 9.30ರಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಏರ್ಪಡಿಸಲಾಗಿದೆ. ನಿತ್ಯ ಬೆಳಗ್ಗೆ 9ರಿಂದ ರಾತ್ರಿ 10ರ ವರೆಗೆ ವಿದ್ಯಾಗಿರಿಯ ಕೃಷಿಸಿರಿ ವೇದಿಕೆ ಆವರಣದಲ್ಲಿ “ಸಪ್ತ ಮೇಳ’ಗಳು ತೆರೆದಿರುತ್ತವೆ.

ವಿರಾಸತ್‌: ಹರಿದು ಬಂದ ಜನಸಾಗರ
ಪುತ್ತಿಗೆ ಗ್ರಾಮದ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗವೇದಿಕೆಯಲ್ಲಿ ಆರಂಭವಾದ 29ನೇ ವರ್ಷದ ಆಳ್ವಾಸ್‌ ವಿರಾಸತ್‌ -2023 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಮೊದಲ ದಿನ ಜನ ಸಾಗರವೇ ಹರಿದುಬಂದಿದೆ.

ಅಳ್ವಾಸ್‌ ನಡೆಸಿಕೊಂಡು ಬಂದಿರುವ ನುಡಿಸಿರಿ, ವಿರಾಸತ್‌, ರಾಷ್ಟ್ರಮಟ್ಟದ ಕ್ರೀಡಾಕೂಟಗಳು ಸೇರಿದಂತೆ ಇದೇ ಮೊದಲ ಬಾರಿಗೆ 125ಕ್ಕೂ ಅಧಿಕ ಕಲಾತಂಡಗಳು, 3 ಸಾವಿರಕ್ಕೂ ಅಧಿಕ ಕಲಾವಿದರು ಗುರುವಾರ ಸಂಜೆ ಉದ್ಘಾಟನ ಸಮಾರಂಭದಲ್ಲಿ ನಡೆದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ದಾಖಲೆ. ಇದೇ ರೀತಿ, ಇದೇ ಮೊದಲ ಬಾರಿಗೆ ಸಂಯೋಜಿಸಲಾದ ಸಾಂಸ್ಕೃತಿಕ ರಥ ಸಂಚಲನ ಪ್ರಾಯಃ ದೇವಾಲಯಗಳ ಹೊರತುಪಡಿಸಿ ವಿದ್ಯಾಲಯವೊಂದರ ಆವರಣದಲ್ಲಿ ನಡೆದಿರುವುದು ಮತ್ತೂಂದು ವಿಶಿಷ್ಟ ದಾಖಲೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.