ನಿರ್ವಾಹಕ-ಪ್ರಯಾಣಿಕನ “ಕೋಳಿ’ ಜಗಳ!
Team Udayavani, Apr 29, 2019, 3:05 AM IST
ಉಪ್ಪಿನಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಎರಡು ಕೋಳಿಗಳೊಂದಿಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೋಳಿಗೂ ಅರ್ಧ ಟಿಕೆಟ್ ನೀಡಬೇಕೆಂದು ನಿರ್ವಾಹಕ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕ ಹಾಗೂ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆದು, ಕುಪಿತನಾದ ಪ್ರಯಾಣಿಕ ಬಸ್ಸಿನಿಂದ ಇಳಿದ ಪ್ರಕರಣ ಭಾನುವಾರ ನಡೆದಿದೆ.
ಕುಪ್ಪೆಟ್ಟಿ ಪರಿಸರದ ನಿವಾಸಿಯೊಬ್ಬರು ಶಿರಾಡಿ ಗಡಿಯ ದೈವಸ್ಥಾನದಲ್ಲಿ ಹರಕೆ ಸಲ್ಲಿಸಲೆಂದು ಎರಡು ಕೋಳಿಗಳೊಂದಿಗೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಸಕಲೇಶಪುರದ ಕಡೆಗೆ ಹೋಗುವ ಬಸ್ಸನ್ನೇರಿದ್ದರು. ಸೀಮಿತ ನಿಲುಗಡೆಯನ್ನು ಹೊಂದಿದ್ದ ಈ ಬಸ್ಸಿನಲ್ಲಿ ಸಕಲೇಶಪುರದ ಟಿಕೆಟ್ ದರ 77 ರೂ.ಗಳನ್ನು ಪಾವತಿಸಬೇಕಾಗಿತ್ತು. ಆದರೆ, ಬಸ್ ನಿರ್ವಾಹಕ ಎರಡು ಕೋಳಿಗಳಿಗೂ ಸೇರಿಸಿ 154 ರೂ.ಟಿಕೆಟ್ ನೀಡಲು ಮುಂದಾದ.
ಈ ಕುರಿತು ಪ್ರಯಾಣಿಕ ಪ್ರಶ್ನಿಸಿದಾಗ, ಜೀವಂತ ಕೋಳಿಗಳ ಪ್ರಯಾಣಕ್ಕೂ ಬಸ್ಸಿನಲ್ಲಿ ಅರ್ಧ ಟಿಕೆಟ್ ನಿಯಮ ಅನ್ವಯವಾಗುತ್ತದೆ ಎಂದು ನಿರ್ವಾಹಕರು ತಿಳಿಸಿದರು. ಇದನ್ನು ಪ್ರಯಾಣಿಕ ಬಲವಾಗಿ ಆಕ್ಷೇಪಿಸಿದಾಗ, ಇಬ್ಬರ ನಡುವೆ ವಾಗ್ವಾದ ನಡೆಯಿತು.
ಉಳಿದ ಬಸ್‌ಗಳ ನಿರ್ವಾಹಕರೂ ನಿಯಮದ ಕುರಿತು ಪ್ರಯಾಣಿಕನಿಗೆ ಮನವರಿಕೆ ಮಾಡಿಕೊಟ್ಟರು. ಕೊನೆಗೆ, ಇನ್ನೆಂದೂ ಕೋಳಿಗಳೊಂದಿಗೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವುದಿಲ್ಲವೆಂದು ಶಪಥ ಮಾಡಿ, ಪ್ರಯಾಣಿಕ ಬಸ್ಸಿನಿಂದ ಇಳಿದು ಹೋದ. ಆದರೆ, ಇದಾವುದನ್ನೂ ಅರಿಯದ ಕೋಳಿಗಳು ಚೀಲದಲ್ಲಿ ಕೊಕ್ಕೊಕ್ಕೋ ಎನ್ನುತ್ತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಮೈಕ್ರೋಫೈನಾನ್ಸ್ ಸಾಲ ಮೋಸ ಪ್ರಕರಣ ತನಿಖೆಗೆ ಮೂರು ತಂಡ ರಚನೆ: ಸತೀಶ ಜಾರಕಿಹೊಳಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.