Drought: ಬರ ಪರಿಹಾರಕ್ಕೆ 324 ಕೋಟಿ ರೂ .ಬಿಡುಗಡೆ
SDRF ನಿಧಿಯಲ್ಲಿ 216 ತಾಲೂಕುಗಳಿಗೆ ಹಂಚಿಕೆ
Team Udayavani, Nov 3, 2023, 10:05 PM IST
ಬೆಂಗಳೂರು: ತೀವ್ರ ಬರಕ್ಕೆ ತುತ್ತಾಗಿರುವ ರಾಜ್ಯದ 216 ತಾಲೂಕುಗಳಲ್ಲಿ ತುರ್ತು ಪರಿಹಾರ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಒಟ್ಟು 324 ಕೋಟಿ ರೂ.ನ್ನು ಜಿಲ್ಲಾವಾರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.
ಎಸ್‌ಡಿಆರ್‌ಎಫ್ ನಿಧಿಯಿಂದ ಈ ಹಣವನ್ನು ಬಳಕೆ ಮಾಡಲು ಹಣಕಾಸು ಇಲಾಖೆ ನಿರ್ಧರಿಸಿದ್ದು, ಕೇಂದ್ರ ಸರ್ಕಾರಕ್ಕೆ ಈಗಾಗಲೇ 18 ಸಾವಿರ ಕೋಟಿ ರೂ. ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಪತ್ರ ಬರೆದಿದೆ. “ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನು ರಾಜ್ಯ ಸರ್ಕಾರ ಅಭ್ಯಾಸ ಮಾಡಿಕೊಂಡಿದೆ. ಬರ ನಿರ್ವಹಣೆಗಾಗಿ ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಬ್ಬರಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.
2023ನೇ ಹಂಗಾಮಿಗೆ ಬರ ಪರಿಸ್ಥಿತಿ ನಿರ್ವಹಣೆ ಮಾಡುವುದಕ್ಕಾಗಿ ನಿಗದಿ ಮಾಡಿದ ಹಾಗೂ ಪುನರ್ ವಿನಿಯೋಗಗೊಳಿಸಿದ ನಂತರ ಲಭ್ಯವಿರುವ 434.15 ಕೋಟಿ ರೂ. ಪೈಕಿ 324 ಕೋಟಿ ರೂ. ಮಾತ್ರ ಬರ ನಿರ್ವಹಣೆಗೆ ವಿನಿಯೋಗಿಸಬೇಕೆಂದು ಕಂದಾಯ ಇಲಾಖೆಯಿಂದ ಹೊರಡಿಸಲಾದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ಅಂದರೆ 22.50 ಕೋಟಿ ರೂ.ಹಂಚಿಕೆಯಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಕಡಿಮೆ 3 ಕೋಟಿ ರೂ. ನೀಡಲಾಗಿದೆ.
ಜಿಲ್ಲಾವಾರು ಬಿಡುಗಡೆಯಾಗಿರುವ ಅನುದಾನದ ಪ್ರಮಾಣ ಹೀಗಿದೆ…..
ಬೆಂಗಳೂರು ನಗರ – 7.5 ಕೋಟಿ ರೂ.
ಬೆಂಗಳೂರು ಗ್ರಾಮಾಂತರ- 6 ಕೋಟಿ ರೂ.
ರಾಮನಗರ- 7.5 ಕೋಟಿ ರೂ.
ಕೋಲಾರ- 9 ಕೋಟಿ ರೂ.
ಚಿಕ್ಕಬಳ್ಳಾಪುರ- 9 ಕೋಟಿ ರೂ.
ತುಮಕೂರು- 15 ಕೋಟಿ ರೂ.
ಚಿತ್ರದುರ್ಗ- 9 ಕೋಟಿ ರೂ.
ದಾವಣಗೆರೆ- 9 ಕೋಟಿ ರೂ.
ಚಾಮರಾಜನಗರ- 7.5 ಕೋಟಿ ರೂ.
ಮೈಸೂರು- 13.5 ಕೋಟಿ ರೂ.
ಮಂಡ್ಯ- 10.5 ಕೋಟಿ ರೂ.
ಬಳ್ಳಾರಿ- 7.5 ಕೋಟಿ ರೂ.
ಕೊಪ್ಪಳ- 10.5 ಕೋಟಿ ರೂ.
ರಾಯಚೂರು- 9 ಕೋಟಿ ರೂ.
ಕಲಬುರ್ಗಿ- 16.5 ಕೋಟಿ ರೂ.
ಬೀದರ್ – 4.5 ಕೋಟಿ ರೂ.
ಬೆಳಗಾವಿ – 22.5 ಕೋಟಿ ರೂ.
ಬಾಗಲಕೋಟೆ- 13.5 ಕೋಟಿ ರೂ.
ವಿಜಯಪುರ – 18 ಕೋಟಿ ರೂ.
ಗದಗ- 10.5 ಕೋಟಿ ರೂ.
ಹಾವೇರಿ – 12 ಕೋಟಿ ರೂ.
ಧಾರವಾಡ – 12 ಕೋಟಿ ರೂ.
ಶಿವಮೊಗ್ಗ – 10.5 ಕೋಟಿ ರೂ.
ಹಾಸನ- 12 ಕೋಟಿ ರೂ.
ಚಿಕ್ಕಮಗಳೂರು – 12 ಕೋಟಿ ರೂ.
ಕೊಡಗು – 7.5 ಕೋಟಿ ರೂ.
ದಕ್ಷಿಣ ಕನ್ನಡ – 3 ಕೋಟಿ ರೂ.
ಉಡುಪಿ- 4.5 ಕೋಟಿ ರೂ.
ಉತ್ತರ ಕನ್ನಡ – 16.5 ಕೋಟಿ ರೂ.
ಯಾದಗಿರಿ – 9 ಕೋಟಿ ರೂ.
ವಿಜಯನಗರ – 9 ಕೋಟಿ ರೂ.
ಬಿಡುಗಡೆ ಮಾಡಿರುವ ಅನುದಾನ ಬಳಕೆಗೆ ಸಂಬಂಧಪಟ್ಟಂತೆ ಸದ್ಯದಲ್ಲೇ ಪ್ರತ್ಯೇಕ ಮಾರ್ಗಸೂಚಿಯನ್ನು ಕಂದಾಯ ಇಲಾಖೆ ಹೊರಡಿಸಲಿದೆ. ಬಿಡುಗಡೆಯಾದ ಹಣವನ್ನು ಜಿಲ್ಲಾಧಿಕಾರಿಗಳು ಪೇಯಿಸ್ ರಸೀದಿ ಮೂಲಕ ಡ್ರಾ ಮಾಡಿ ತಮ್ಮ ಪಿಡಿ ಖಾತೆಗೆ ಜಮಾ ಮಾಡಿಕೊಳ್ಳಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.