ದುಬೈ: ಮನಸೆಳೆದ ಶೃಂಗೇರಿ ಪೀಠದ ಪ್ರತಿಕೃತಿ

ಕನ್ನಡ ನೆಲದ ನೆನಪು ನೀಡಿದ ಕ್ಷಣ

Team Udayavani, Oct 31, 2023, 2:20 PM IST

ದುಬೈ: ಮನಸೆಳೆದ ಶೃಂಗೇರಿ ಪೀಠದ ಪ್ರತಿಕೃತಿ

ಸುಂದರ ಶೈಲಿಯ ಕಲ್ಲಿನ ಶಿಲಾಕೃತಿ, ತಲೆಬಾಗಿ ಒಳಗೆ ಹೋದರೆ ಶಾರದಾಂಬೆ ವಿರಾಜಮಾನಳಾಗಿದ್ದಾಳೆ. ಸುತ್ತಲೂ ತಣ್ಣನೆಯ ಪರಿಸರ, ಹಸುರ ನಿಸರ್ಗದ ಸಮೀಪದಲ್ಲಿ ಶಾರದಾ ಮಾತೆಯನ್ನು ಆದಿ ಶಂಕರಾಚಾರ್ಯರು ಕರ್ನಾಟಕ ಶೃಂಗೇರಿಯಲ್ಲಿ ತಂದು ಸ್ಥಾಪಿಸಿದ್ದರು. ಶೃಂಗೇರಿಯಲ್ಲಿರುವ ಶಿಲ್ಪಕಲಾಕೃತಿಗಳು ಎಂದಿಗೂ ಮನಸೆಳೆಯುವಂತದ್ದು. ಶ್ರೀಮಂತ ನಗರಿ ದುಬೈನಲ್ಲೂ ಇತ್ತೀಚೆಗೆ ಶೃಂಗೇರಿಯನ್ನು ನೋಡಿದ ಅನುಭವವಾಯಿತು.

ದುಬೈ ಗಿನ್ನೆಸ್‌ ದಾಖಲೆಗಳ ಸರಮಾಲೆಯನ್ನು ಧರಿಸಿರುವ ವಿಶ್ವದ ವಾಣಿಜ್ಯ ಕೇಂದ್ರ. ಒಂದೊಂದು ವಿಸ್ಮಯಗಳನ್ನು ಸೃಷ್ಟಿಸಿ ಜನಮನ ಸೆಳೆಯುತಿರುತ್ತದೆ. ಗಣೇಶನನ್ನು ಪೂಜಿಸುವ ಚೌತಿ ಹಬ್ಬವನ್ನು ಭಾರತದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜತೆಗೆ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ದುಬೈನಲ್ಲಿಯೂ ಚೌತಿ ಹಬ್ಬ ಬಂದರೆ ಪ್ರಮುಖ ಮಳಿಗೆಗಳಲ್ಲಿ ವಿವಿಧ ಭಂಗಿಗಳಲ್ಲಿ ಶ್ರೀ ಮಹಾಗಣಪತಿ ಮೂರ್ತಿ ಪ್ರದರ್ಶನಗೊಂಡು, ಜನರು ಮನೆ ಮನೆಗಳಿಗೆ ಭಕ್ತಿ ಶೃದ್ಧೆಯಿಂದ ತೆಗೆದುಕೊಂಡು ಹೋಗುತ್ತಾರೆ.

ದುಬೈಯ ಹೃದಯ ಭಾಗದಲ್ಲಿ ಭಾರತೀಯ ಉದ್ಯಮಿಯ ಒಂದು ಭವ್ಯಬಂಗಲೆ ಕಳೆದ ಹದಿನಾಲ್ಕು ವರ್ಷಗಳಿಂದ ಪ್ರತೀ ವರ್ಷ ವಿವಿಧ ರೀತಿಯ ಪುರಾಣ ಪ್ರಸಿದ್ಧ ಕಥೆಗಳನ್ನು ಆಧರಿಸಿ ಭವ್ಯ ಸೆಟ್ಟಿಂಗ್ಸ್‌ನಲ್ಲಿ ದೇವಲೋಕವನ್ನೇ ಸೃಷ್ಟಿಸಿಕೊಂಡು ಬರುತ್ತಿದ್ದು, ಈ ಬಾರಿ ಕರ್ನಾಟಕದ ಪವಿತ್ರ ಕ್ಷೇತ್ರ ಶೃಂಗೇರಿ ದೇವಾಲಯದ ಪ್ರತಿಕೃತಿ ನಿರ್ಮಿಸಲಾಗಿತ್ತು.

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಋಷ್ಯಶೃಂಗ ಗಿರಿ ತಪ್ಪಲಿನಲ್ಲಿದೆ. ಶ್ರೀ ಆದಿ ಶಂಕರಾಚಾರ್ಯರು ಸನಾತನ ಧರ್ಮವನ್ನು ಜನರಲ್ಲಿ ಜಾಗೃತಿಗೊಳಿಸುತ್ತಾ ಭಾರತದಾದ್ಯಂತ ಸಂಚರಿಸುತ್ತಾ ಸಾಗುವಾಗ ಶೃಂಗೇರಿಯ ತುಂಗಭದ್ರಾ ನದಿಯ ತೀರದಲ್ಲಿ ಪ್ರಸವ ವೇದನೆಯಿಂದ ತನ್ನ ಮರಿಗೆ ಜನ್ಮ ನೀಡುವ ಸಂದರ್ಭದಲ್ಲಿ ಬಿಸಿಲ ಬೇಗೆಯಿಂದ ಬಳಲುತ್ತಿರುವಾಗ, ಹೆಡೆ ಬಿಚ್ಚಿದ ಸರ್ಪವು ಕಪ್ಪೆಯ ಮೇಲೆ ನೆರಳನ್ನು ಮೂಡಿಸಿದ್ದ ದೃಶ್ಯವನ್ನು ಶ್ರೀ ಆದಿ ಶಂಕರರು ನೋಡಿದ ಅನಂತರ ಇದೊಂದು ಪವಿತ್ರ ಭೂಮಿ ಎಂದು ತೀರ್ಮಾನಿಸಿ ಅಲ್ಲಿ ಒಂದು ಮಠವನ್ನು ಕಟ್ಟಲು ನಿರ್ಧರಿಸಿದರು.

ಅದ್ವೈತ ವೇದಾಂತ ತತ್ತÌ ಶಾಸ್ತ್ರದ ಆಧಾರದಲ್ಲಿ ಶ್ರೀ ಶಾರದಾ ಪೀಠವನ್ನು ಸ್ಥಾಪಿಸಿದರು. ಅನಂತರದ ಜ್ಯೋತಿರ್‌ಮಠ ಬದರಿನಾಥದಲ್ಲಿ, ಪುರಿ, ಧಾರಕದಲ್ಲಿ ಸಹ ಸ್ಥಾಪಿಸಿದ್ದಾರೆ. ಶೃಂಗೇರಿ ಮಠ ಸಂಪೂರ್ಣವಾಗಿ ಶಿಲೆಯಿಂದ ಕೆತ್ತಲ್ಪಟ್ಟಿರುವ ಭವ್ಯ ಶಿಲಾ ದೇಗುಲವಾಗಿದೆ. ಕ್ರಿ.ಶ. 1338ರಲ್ಲಿ ಹೊಯ್ಸಳ ಚಾಲುಕ್ಯ ದ್ರಾವಿಡ ಶೈಲಿಯ ಗೋಪುರಾಕಾರದಲ್ಲಿ ನಿರ್ಮಾಣವಾಗಿರುವ ಶೃಂಗೇರಿ ಮಠ ಶತ ಶತಮಾನಗಳಿಂದ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ. ಈ ರೀತಿಯಾದ ಪ್ರಸಿದ್ಧ ಹಿನ್ನೆಲೆ ಇರುವ ಶೃಂಗೇರಿ ಪೀಠದ ಶಿಲಾಮಯ ಪ್ರತಿಕೃತಿಯನ್ನು ದುಬೈಯಲ್ಲಿ ಚೌತಿ ಹಬ್ಬದ ಸಂದರ್ಭದಲ್ಲಿ ಶಿಲ್ಪಿಗಳು ಅತ್ಯಂತ ಸೊಗಸಾಗಿ ವಿನ್ಯಾಸಗೊಳಿಸಿದ್ದರು.

ಇದು ಹಲವು ಭಾರತೀಯರನ್ನು ಅದರಲ್ಲೂ ಇಲ್ಲಿ ನೆಲೆಸಿರುವ ಕನ್ನಡಿಗರಿಗೆ ತವರು ನಾಡಿನ ನೆನಪನ್ನು ನೀಡುತ್ತಿತ್ತು. ಶೃಂಗೇರಿ ಪೀಠದ ಮೂಲ ಸ್ವರೂಪವನ್ನು ಯಥವತ್ತಾಗಿ ಇಲ್ಲಿ ನಿರ್ಮಾಣ ಮಾಡಲು ಬಳಸಾಗಿರುವ ಮೂಲ ವಸ್ತು ಥರ್ಮಕೋಲ್‌ ಶೀಟ್‌ಗಳು. ದೇವಾಲಯದ ಪ್ರತಿಕೃತಿ ಹಾಗೂ ದೇವರ ಕಲಾಕೃತಿಗಳೊಂದಿಗೆ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಮಾಡಲಾಗಿತ್ತು. ಉಳಿದ ಕಲಾಕೃತಿಗಳ ಜತೆಗೆ ಶಂಕರಾಚಾರ್ಯರ ಪ್ರತಿಮೆಯೂ ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿತ್ತು. ಥರ್ಮ್ಕೋಲ್‌ನಲ್ಲಿ ರೂಪಿಸಿದ ಪ್ರತಿಮೆಯು ನಿಜವಾಗಿಯೂ ಕಂಚಿನ ಪ್ರತಿಮೆಯಂತೆ ಕಾಣುತ್ತಿತ್ತು.

ನಿರ್ಮಿಸಿರುವ ಪ್ರತಿಯೊಂದು ಆಕೃತಿಗಳು ಶಿಲಾ ಶಿಲ್ಪದಂತೆ ನೈಜತೆಯನ್ನು ಹೊಂದಿದ್ದು, ವೀಕ್ಷಕರು ಅತ್ಯಂತ ಸೂಕ್ಷ್ಮವಾಗಿ ವೀಕ್ಷಿಸುತ್ತಾ ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಾ ನಿರ್ಮಾಣ ಮಾಡಿರುವ ಬಂಗಲೆಯ ಯಜಮಾನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶ್ರೀ ಗಣಪತಿ ವಿಗ್ರಹದ ದರ್ಶನ ಪಡೆಯುತ್ತಾ ತೆರಳುತ್ತಿದ್ದ ದೃಶ್ಯ ಅವಿಸ್ಮರಣೀಯವಾಗಿತ್ತು.

*ಬಿ. ಕೆ. ಗಣೇಶ್‌ ರೈ, ದುಬೈ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.