ದುಬೈ: ರಾಷ್ಟ್ರಗೀತೆ ಹಾಡಲು ಸೂಚನೆ
Team Udayavani, Apr 18, 2020, 6:09 PM IST
ದುಬೈ: ಕೋವಿಡ್ 19 ಅನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳನ್ನು ಗೌರವಿಸಲು ಮತ್ತು ಪ್ರಶಂಸಿಸಲು ಎಪ್ರಿಲ್ 17ರಂದು ರಾತ್ರಿ 9 ಗಂಟೆಗೆ ಯುಎಇ ರಾಷ್ಟ್ರಗೀತೆ ಹಾಡಲು ಪ್ರಜೆಗಳಿಗೆ ಕರೆ ನೀಡಲಾಗಿದೆ.
ಬುಧವಾರ ಯುಎಇಯಲ್ಲಿ 432 ಹೊಸ ಕೋವಿಡ್ 19 ಪ್ರಕರಣಗಳು ದೃಢಪಟ್ಟಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ದೇಶದ ಒಟ್ಟು ಸೋಂಕುಗಳ ಸಂಖ್ಯೆ 5365 ಕ್ಕೆ ಏರಿದೆ.
ಎಪ್ರಿಲ್ 5 ರಂದು ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ದೀಪ ಪ್ರಜ್ವಲನೆ ದೇಶದಾದ್ಯಂತ ಯಶಸ್ವಿಯಾಗಿದ್ದು, ರಾಜಕೀಯ, ಸಿನಿಮಾ ತಾರೆಯರು ಸೇರಿದಂತೆ ಎಲ್ಲಾ ಗಣ್ಯರು ಪ್ರಧಾನಿ ಕರೆಗೆ ಓಗೊಟ್ಟು ದಿಪ ಬೆಳಗಿಸಿ ಏಕತೆಯನ್ನು ಸಾರಿದ್ದರು.
ಅದೇ ಮಾದರಿಯಲ್ಲೀಗ ಆರೋಗ್ಯ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಲು ಎಲ್ಲರೂ ನಿರ್ದಿಷ್ಟ ಹೊತ್ತಿನಲ್ಲಿ ರಾಷ್ಟ್ರಗೀತೆ ಹಾಡಲು ಸೂಚಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರ ಬಗ್ಗೆ ನಿವಾಸಿಗಳ ಪರಿಶ್ರಮವನ್ನು ಗೌರವಿಸುವ ಉದ್ದೇಶದಿದ ಲಾಂಗ್ ಲೈವ್ ಮೈ ಕಂಟ್ರಿ ಕಾರ್ಯಕ್ರಮದಲ್ಲಿ ಯುಎಇಯ ರಾಷ್ಟ್ರಗೀತೆ ಹಾಡಲಾಗುತ್ತದೆ. ಈ ಕುರಿತು ಮೊದಲ ಕಾರ್ಯಕ್ರಮ ಬುಧವಾರ ನಡೆದಿದ್ದು, ಅಲ್ಲಿನ ನಿವಾಸಿಗಳು ತಮ್ಮ ಬಾಲ್ಕನಿ ಮತ್ತು ಮನೆಯ ಮುಂದೆ ನಿಂತು ರಾಷ್ಟ್ರಗೀತೆಯನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.