Dubai: ನಹ್ಯಾನ್ ಪರಿವಾರ ವಿಶ್ವದ ಶ್ರೀಮಂತ ರಾಜವಂಶ- ಈ ಕುಟುಂಬದ ಬಳಿ ಇದೆ 700 ಕಾರುಗಳು !
ಅರಮನೆಯ ಮೌಲ್ಯ 4,078 ಕೋಟಿ ರೂ.
Team Udayavani, Jan 20, 2024, 12:50 AM IST
ಹೊಸದಿಲ್ಲಿ: ಜಗತ್ತಿನ ಶ್ರೀಮಂತ ರಾಜವಂಶ ಯಾವುದು ಗೊತ್ತಾ? ದುಬಾೖಯ ಅಲ್ ನಹ್ಯಾನ್‌ರದ್ದು…
ಹೀಗೆಂದು ಜಿಖ್ಯೂ ವರದಿಯಲ್ಲಿ ಹೇಳಲಾಗಿದೆ. ಈ ಕುಟುಂಬ 4078 ಕೋಟಿ ರೂ. ಮೌಲ್ಯದ ಅರಮನೆ(ಮೂರು ಪೆಂಟಗನ್‌ನಷ್ಟು ಗಾತ್ರ) ಹೊಂದಿದೆ. ಎಂಟು ಖಾಸಗಿ ಜೆಟ್ ವಿಮಾನಗಳು, ಒಂದು ಜನಪ್ರಿಯ ಫುಟ್ಬಾಲ್ ಕ್ಲಬ್ ಕೂಡ ಇದರ ಆಸ್ತಿಯಲ್ಲಿ ಸೇರುತ್ತದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಸದ್ಯ ಈ ಕುಟುಂಬದ ಮುಖ್ಯಸ್ಥ.
ಅವರಿಗೆ 18 ಸಹೋದರರು, 11 ಸಹೋದರಿಯರು ಇದ್ದಾರೆ. ಝಾ ಯೆದ್‌ಗೆ 9 ಮಕ್ಕಳು, 18 ಮೊಮ್ಮಕ್ಕಳಿದ್ದಾರೆ. ವಿಶ್ವದ ಒಟ್ಟು ತೈಲಸಂಗ್ರಹದಲ್ಲಿ ಈ ಕುಟುಂಬದ ಪಾಲೇ ಶೇ.6ರಷ್ಟಿದೆ. ಮ್ಯಾಂಚೆಸ್ಟರ್ ಫುಟ್ಬಾಲ್ ಕ್ಲಬ್‌ನಲ್ಲಿ ಷೇರುಗಳಿವೆ. ಜಗತ್ತಿನ ಪ್ರಖ್ಯಾತ ಕಂಪೆನಿಗಳಲ್ಲಿ ಈ ಕುಟುಂಬಸ್ಥರ ಷೇರುಗಳಿವೆ. ಗಾಯಕಿ ರಿಹಾನ್ನಾರ ಸೌಂದರ್ಯ ಸಾಧನ ಕಂಪೆನಿ ಫೆಂಟಿಯಿಂದ ಹಿಡಿದು ಎಲಾನ್ ಮಸ್ಕ್ ಒಡೆತನದ ಎಕ್ಸ್ ಸಾಮಾಜಿಕ ತಾಣಗಳವರೆಗೆ ಈ ಕುಟುಂಬ ಆವರಿಸಿಕೊಂಡಿದೆ. ಇನ್ನು ಮೊಹಮ್ಮದ್ ಬಿನ್ ಝಯೇದ್ ಕಿರಿಯ ಸಹೋದರ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್ 700ಕ್ಕೂ ಅಧಿಕ ಕಾರುಗಳನ್ನು ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.