ಡಬ್ಬಿಂಗ್ ಸನಿಹಕೆ ರಾಜ್ ಮೊಮ್ಮಗಳ ಚಿತ್ರ
Team Udayavani, Jun 12, 2020, 4:41 AM IST
ಸೂರಜ್ ಗೌಡ ಅಭಿನಯಿಸಿ ನಿರ್ದೇಶಿಸಿರುವ, ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯಾರಾಮ್‌ಕುಮಾರ್ ಮೊದಲ ಸಲ ಕಾಣಿಸಿಕೊಂಡಿರುವ “ನಿನ್ನ ಸನಿಹಕೆ’ ಚಿತ್ರ ಇದೀಗ ಡಬ್ಬಿಂಗ್ ಮುಗಿಸುವ ಉತ್ಸಾಹದಲ್ಲಿದೆ. ಹೌದು, ಲಾಕ್‌ಡೌನ್ ಮುನ್ನವೇ ಚಿತ್ರದ ಚಿತ್ರೀಕರಣ ಮುಗಿಸಿದ್ದ ಸೂರಜ್‌ಗೌಡ, ಪೋಸ್ಟ್ ಪ್ರೊಡಕ್ಷನ್‌ಗೆ ತಯಾರು ಆಗುತ್ತಿರುವಂತೆಯೇ, ಲಾಕ್‌ಡೌನ್ ಘೋಷಣೆಯಾಗಿತ್ತು. ಈಗ ಸಡಿಲಗೊಂಡ ಹಿನ್ನೆಲೆಯಲ್ಲಿ ಚಿತ್ರದ ಡಬ್ಬಿಂಗ್ ಕೆಲಸಗಳನ್ನು ನಡೆಸುತ್ತಿದ್ದಾರೆ.
ಸೂರಜ್‌ಗೌಡ ನಟನೆ ಜೊತೆಯಲ್ಲಿ ಇದೇ ಮೊದಲ ಸಲ ನಿರ್ದೇಶನಕ್ಕೂ ಇಳಿದಿರುವುದು ಎಲ್ಲರಿಗೂ ಗೊತ್ತೇ ಇದೆ. ಸೂರಜ್ ಗೌಡ ನಿರ್ದೇಶನ ಮಾಡಲೇಬೇಕು ಅಂತ ಮಾಡಿದ್ದಲ್ಲ. ಆಕಸ್ಮಿಕ ಎಂಬಂತೆ ಅವರ ಪಾಲಿಗೆ ನಿರ್ದೇಶನದ ಜವಾಬ್ದಾರಿ ಬಂದಿದೆ. ಸುಮನ್ ಜಾದುಗಾರ್ ಅವರು “ನಿನ್ನ ಸನಿಹಕೆ’ ಚಿತ್ರ ನಿರ್ದೇಶನ ಮಾಡಬೇಕಿತ್ತು. ಆರಂಭದಲ್ಲಿ ಮೂರು ದಿನಗಳ ಕಾಲ ಅವರು ನಿರ್ದೇಶನವನ್ನೂ ಮಾಡಿದ್ದರು.
ಆದರೆ, ಬೈಕ್ ಅಪಘಾತದಿಂದಾಗಿ ಅವರು ಕೈಗೆ ಪೆಟ್ಟು ತಿಂದು ವಿಶ್ರಾಂತಿ ಪಡೆಯಬೇಕಾಯಿತು. ಆದರೆ, ಚಿತ್ರಕ್ಕೆ ಎಲ್ಲಾ ತಯಾರು ನಡೆದಿದ್ದರಿಂದ, ಅದನ್ನು ಸೂರಜ್‌ಗೌಡ ಅವರು ಮುಂದುವರೆಸಬೇಕು ಎಂಬ ಸೂಚನೆ ನಿರ್ಮಾಪಕರಿಂದ ಸಿಕ್ಕಿತು. ಸೂರಜ್‌ಗೌಡ ಅವರ ಕಥೆ ಆಗಿದ್ದರಿಂದ, ಅವರೂ ಸ್ಕ್ರಿಪ್ಟ್ನಲ್ಲಿ ತೊಡಗಿದ್ದ ರಿಂದ ಚಿತ್ರದ ಪ್ರತಿಯೊಂದು ಸೀನ್ ಬಗ್ಗೆಯೂ ಗೊತ್ತಿತ್ತು. ಕೊನೆಗೆ, ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸೂರಜ್‌ಗೌಡ ಅವರೇ ಆ್ಯಕ್ಷನ್-ಕಟ್‌ಹೇಳ್ಳೋಕೆ ಮುಂದಾಗಿ ಸಿನಿಮಾ ಈಗ ಚಿತ್ರ ಮುಗಿಸಿ ಬಿಡುಗಡೆಯ ಹಂತದಕ್ಕೆ ತಂದಿದ್ದಾರೆ.
ಸದ್ಯಕ್ಕೆ ಡಬ್ಬಿಂಗ್ ಮುಗಿಯೋ ಹಂತ ತಲು ಪಿದ್ದು, ಹಿನ್ನೆಲೆ ಸಂಗೀತ, ಎಫೆಕ್ಟ್ ಇತ್ಯಾದಿ ಕೆಲಸಗಳಲ್ಲಿ ನಿರತರಾಗಿದ್ದಾರೆ. ಎಲ್ಲವನ್ನೂ ಪೂರೈಸಿಕೊಂಡು, ಮೊದಲ ಪ್ರತಿ ಪಡೆದು, ಚಿತ್ರಮಂದಿರ ಆರಂಭಗೊಂಡ ಬಳಿಕ ಪ್ರಚಾರ ಕೆಲಸ ಶುರು ಮಾಡಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ. ಇದಕ್ಕೂ ಮೊದಲು ಸೂರಜ್‌ಗೌಡ ಅವರು, ಒಂದು ಹಾಡು ಹಾಗು ಟ್ರೇಲರ್ ರಿಲೀಸ್ ಮಾಡುವ ಯೋಚನೆ ಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಸೆನ್ಸಾರ್ ಅಂಗಳಕ್ಕೂ ಹೋಗಿ, ನಂತರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.