![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Oct 14, 2023, 12:01 AM IST
ಕೆಲವು ದಶಕಗಳ ಹಿಂದೆ ನಮ್ಮಲ್ಲಿ ದಿನ ಬೆಳಗಾಯಿತೆಂ ದರೆ ಜನರೆಲ್ಲ ಅಂಚೆಯಲ್ಲಿ ಬರುತ್ತಿದ್ದ ಪತ್ರಗಳಿಗಾ ಗಿಯೋ, ಟೆಲಿಗ್ರಾಂಗಾಗಿಯೋ ಬಹುನಿರೀಕ್ಷೆಯಿಂದ ಅಂಚೆ ಯಣ್ಣನನ್ನು ಕಾದಿರುತ್ತಿದ್ದರು. ಹಾಗೆ ಕಾಯುವುದರಲ್ಲೂ ಒಂದು ಸೊಗಸಿತ್ತು. ಆ ಕಾಯುವಿಕೆಯು ತಾಳ್ಮೆಯನ್ನು ಕಲಿಸುತ್ತಿತ್ತು. ಹಾಗೆ ಕಾಯುತ್ತಿರುವಾಗಲೇ ಸೈಕಲ್ ಬೆಲ್ ಮಾಡುತ್ತ ಅಂಚೆಯಣ್ಣನು “ಪೋಸ್ಟ್’ ಎಂದು ಏರಿದ ಧ್ವನಿಯಲ್ಲಿ ಕೂಗುತ್ತ ಬಂದಾಗ ಮನೆಯೊಳಗಿದ್ದವರೆಲ್ಲ ಹೊರಗೆ ಓಡೋಡಿ ಬಂದು ಸಂತಸ, ಕುತೂಹಲದಿಂದ ತನಗೆ ಕಾಗದ ಬಂದಿದೆಯೇ? ಎಂದು ಪ್ರತಿಯೊಬ್ಬರೂ ಕೇಳುತ್ತ ಅಂಚೆಯಾತನನ್ನು ಸುತ್ತುವರಿಯುತ್ತಿದ್ದರು. ಅಂಚೆಯಣ್ಣ ತನ್ನ ಕೈಚೀಲದಲ್ಲಿನ ಕಾಗದಗಳ ರಾಶಿಯಿಂದ ಕಾಗದವೊಂದನ್ನು ಎತ್ತಿ ನೀಡಿದಾಗ ಆ ಪತ್ರವನ್ನು ಪಡೆದ ವ್ಯಕ್ತಿಗೆ ಮನದೊಳಗೆ ಆಗುತ್ತಿದ್ದ ಸಂತೋಷ, ಸಂಭ್ರಮ ವರ್ಣಿ ಸಲಾಗದ್ದು. ಕಂಪ್ಯೂಟರ್, ಮೊಬೈಲ್ ಇಲ್ಲದಿದ್ದ ಅಂದಿನ ದಿನಗಳಲ್ಲಿ ಅಂಚೆಯ ಮೂಲಕ ಬರು ತ್ತಿದ್ದ ಪತ್ರಗಳೇ ಬಹುಮುಖ್ಯವಾದ ಸಂವಹನ ಮಾಧ್ಯಮವಾಗಿತ್ತು. ಆಗೆಲ್ಲ ಖಾಸಗಿ ಕೊರಿಯ ರ್ ವ್ಯವಸ್ಥೆಯೂ ಇದ್ದಿರಲಿಲ್ಲ. ಬಹಳ ದಿನಗಳ ತನಕ ಕಾದು ಬಳಿಕ ಪತ್ರವೊಂದು ಬಂದಾಗ, ಅದನ್ನು ಒಡೆದು ಓದಿದಾಗ ಆಗುತ್ತಿದ್ದ
ರೋಮಾಂಚನ, ಸಂತೋಷದ ಅನುಭವವನ್ನು ಇಂದಿನ ದಿನಗಳಲ್ಲಿ ಕಾಣಲಾರೆವು.
ಇಂದಿನ ಇ-ಮೇಲ್ ಮೊಬೈಲ್ ಪ್ರವಾಹ ದಲ್ಲಿ ವ್ಯಕ್ತಿಯ ಸ್ವ-ಹಸ್ತಾಕ್ಷರದಲ್ಲಿರುತ್ತಿದ್ದ ಪತ್ರಗಳ ಓದಿನ ಸಂಭ್ರಮವೆಲ್ಲ ಕೊಚ್ಚಿ ಹೋಗಿದೆ. ಇಂದು ವಿದ್ಯಾವಂತರ ಸಂಖ್ಯೆಯೇನೋ ಹಿಂದಿಗಿಂತ ಹೆಚ್ಚಿದೆ. ಆದರೆ ಪತ್ರ ಬರೆಯುವವರ ಸಂಖ್ಯೆ ಮಾತ್ರ ಬಹಳಷ್ಟು ಕಡಿಮೆಯಾಗಿದೆ. ಕೆಲವರಿಗೆ ಪತ್ರ ಬರೆಯು ವುದೆಂದರೇನೇ ಅದೇನೋ ಅಲರ್ಜಿ, ಪತ್ರ ಬರೆಯುವುದಕ್ಕೆ ಪುರುಸೊತ್ತಾದರೂ ಎಲ್ಲಿದೆ ಎಂಬುದೇ ಬಹುತೇಕ ಮಂದಿಯ ಪ್ರಶ್ನೆ. ಒಂದೊಮ್ಮೆ ಪತ್ರ ಬರೆದರೂ ಅದನ್ನು ಪಡೆದವರಿಗೆ ಓದುವುದಕ್ಕೆ ಪುರುಸೊತ್ತು, ತಾಳ್ಮೆ, ಸಮಯಬೇಕಲ್ಲ! ಅಂತೂ ಪತ್ರ ಬರೆಯುವ ಹವ್ಯಾಸವೇ ಇಂದು ಜನಮನದಿಂದ ಕಾಣೆಯಾಗುತ್ತಿದೆ.
ಪತ್ರ ಬರವಣಿಗೆಯೂ ಒಂದು ಕಲೆಯಾಗಿದೆ. ಸ್ವಾಮೀ ವಿವೇಕಾನಂದ, ಮಹಾತ್ಮಾ ಗಾಂಧೀಜಿಯವರು, ಪಂಡಿತ್ ಜವಾಹರ್‌ಲಾಲ್ ನೆಹರೂ ಅವರಂಥ ಮಹನೀಯರೆಲ್ಲ ತಮ್ಮ ಪತ್ರ ಬರ ವಣಿಗೆಯಿಂದಲೂ ಪ್ರಸಿದ್ಧರಾಗಿದ್ದರು. ಖ್ಯಾತ ಸಾಹಿತಿಗಳಾಗಿದ್ದ ಡಾ| ಶಿವರಾಮ ಕಾರಂತರು ತಮಗೆ ಬರುತ್ತಿದ್ದ ಜನರ ಪತ್ರಗಳಿಗೆ ಪತ್ರ ಬಂದ ದಿನವೇ ಮರುಪತ್ರ ಬರೆಯುತ್ತಿದ್ದರಂತೆ.
ಪತ್ರವು ಪರಿಣಾಮಕಾರೀ ಸಂವಹನ ಮಾಧ್ಯ ಮವಾಗಿದ್ದು, ಗೆಳೆತನವನ್ನು ಪ್ರೋತ್ಸಾಹಿಸಲು, ಏಕಾಂಗಿತನವನ್ನು ಹೋಗಲಾಡಿಸಲು, ಪರಸ್ಪರ ಅಭಿಪ್ರಾಯ, ತಿಳಿವಳಿಕೆ, ಭಾವನೆಗಳನ್ನು ಹಂಚಿ ಕೊಳ್ಳಲು ಇದು ಬಹುಮುಖ್ಯ ಸಾಧನವಾಗಿದೆ. ಸ್ವ ಹಸ್ತಾಕ್ಷರದಲ್ಲಿರುತ್ತಿದ್ದ ಪತ್ರಗಳಿಗೂ ಯಾಂತ್ರಿ ಕವಾಗಿ ಟೈಪಿಸಿದ ಪತ್ರಗಳಿಗೂ ಬಹಳಷ್ಟು ವ್ಯತ್ಯಾ ಸವಿದೆ. ಪತ್ರ ಬರವಣಿಗೆಯಿಂದ ಅಕ್ಷರಜ್ಞಾನ, ಬರವಣಿಗೆಯ ಅಂದ ಸ್ಪಷ್ಟತೆ ಹೆಚ್ಚುತ್ತದೆ. ಸೃಜನ ಶೀಲತೆ ಬೆಳೆಯುತ್ತದೆ.
ತನ್ನ ಅಭಿಪ್ರಾಯ, ನಿಲು ವನ್ನು ಸ್ಪಷ್ಟವಾಗಿ ತಿಳಿಸಲು ಪತ್ರ ಬರವಣಿಗೆಯು ನೆರವಾಗುತ್ತದೆ. ಒಬ್ಬ ವ್ಯಕ್ತಿಯನ್ನು ಆತನ ಮಿತ್ರ ರಿಂದಷ್ಟೇ ಅಲ್ಲದೇ ಆತ ಬರೆದ ಪತ್ರಗಳಿಂದಲೂ ತಿಳಿದುಕೊಳ್ಳಬಹುದು. ಪತ್ರಲೇಖನವು ಬರೆ ಯುವವರಿಗೂ, ಓದುವವರಿಗೂ ಸಂತಸ ನೀಡುವ ಕಲೆಯಾಗಿದೆ. ಪ್ರೇಮ ಪತ್ರಗಳಿ ರಬಹುದು, ಸಾರ್ವಜನಿಕ ಹಿಸಾಸಕ್ತಿಯ ಪತ್ರ ಗಳಿರಬಹುದು, ಕಚೇರಿಗಳಿಗೆ ಬರೆದ ಪತ್ರಗಳಿರ ಬಹುದು, ಪ್ರತಿಯೊಂದು ಬಗೆಯ ಪತ್ರಗಳಿಗೂ ಅದರದ್ದೇ ಆದ ವೈವಿಧ್ಯ, ವೈಶಿಷ್ಟ್ಯ ಇರುತ್ತದೆ. ಇದೊಂದು ಕ್ರಿಯಾಶೀಲ ಹವ್ಯಾಸವಾಗಿದ್ದು ಬರೆದು ಮುಗಿಸಿದಾಗ ಬರೆದವರಿಗೆ ಒಂದು ಬಗೆಯ ನಿರಾಳತೆ, ಸಮಾಧಾನ ಉಂಟಾ ಗುತ್ತದೆ. ಪ್ರೀತಿ ಪಾತ್ರರ, ಸ್ನೇಹಿತರ ಪತ್ರಗಳನ್ನು ರಕ್ಷಿಸಿಟ್ಟುಕೊಂಡು ಅದನ್ನು ಮತ್ತೆ ಮತ್ತೆ ಓದಿ ಸಂತೋಷ ಪಡಬಹುದು. ಇವು ದಾಖಲೆ ಯಾಗಿ ಉಳಿದು ಸಮಯ ಸಿಕ್ಕಾಗಲೆಲ್ಲ ಹಳೆಯ ಪತ್ರಗಳನ್ನು ಮತ್ತೂಮ್ಮೆ ಓದಿದಾಗ ಹಳೆಯ ನೆನಪುಗಳೆಲ್ಲ ಮರುಕಳಿಸಿ ಮನಸ್ಸಿಗೆ ಮುದವಾಗುತ್ತದೆ, ಹಿತಾನುಭವವಾಗುತ್ತದೆ. ಥಟ್ಟನೆ ಬಂದು ಅಚ್ಚರಿ ಮೂಡಿಸುವ ಮೊಬೈಲ್ ಸಂದೇಶಗಳಲ್ಲಿ ಈ ಬಗೆಯ ಸಂತೋಷವನ್ನು ಕಾಣಲಾರೆವು.
ನಾವು ನಮಗೆ ಬಂದ ಪತ್ರವನ್ನು ಓದುವಾಗ ಪತ್ರವನ್ನು ಬರೆದ ವ್ಯಕ್ತಿಯೊಂದಿಗೆ ನಾವು ಸಂಭಾಷಿಸಿದಂತೆ ನಮಗೆ ಅನುಭವವಾಗುತ್ತದೆ. ಹೂಗಳನ್ನು ಪೋಣಿಸಿದಂತೆ ಸ್ವಹಸ್ತಾಕ್ಷರಗಳ ಲ್ಲಿರುವ ಪ್ರೀತಿ, ಬಾಂಧವ್ಯ, ಸಂತೋಷ, ಸಂಕಟ ಗಳನ್ನು ಹಂಚಿಕೊಳ್ಳುವ ಪತ್ರಗಳು ಇಂದು ಜನಮಾನಸದಿಂದ ಕಣ್ಮರೆಯಾಗುತ್ತಿರುವುದು ವಿಷಾದನೀಯ. ಇದಕ್ಕೆ ಕೇವಲ ಕಂಪ್ಯೂಟರ್, ಮೊಬೈಲ್‌ಗಳಷ್ಟೇ ಕಾರಣವಲ್ಲ. ಪತ್ರ ಬರೆಯುವಲ್ಲಿ ಜನರಲ್ಲಿನ ಉದಾಸೀನತೆಯೇ ಕಾರಣ. ಮಹಾತ್ಮಾ ಗಾಂಧಿಜೀಯವರು ಬರವ ಣಿಗೆಯು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ, ಪರಿಚಯಿಸುತ್ತದೆ ಎಂದಿದ್ದಾರೆ. ವ್ಯಕ್ತಿತ್ವ ವಿಕಸನ ದಲ್ಲಿ ವ್ಯಕ್ತಿಯ ಕೈಬರವಣಿಗೆಯನ್ನು ಅವ ಗಣಿಸುವಂತಿಲ್ಲ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.