ಪೊಲೀಸ್‌ ವಸತಿ ಗೃಹದಲ್ಲೇ ಹಣ್ಣಿನ ತೋಟ ನಿರ್ಮಿಸಿದ ಡಿವೈಎಸ್ಪಿ


Team Udayavani, Jun 5, 2022, 4:25 PM IST

14

ಬೈಲಹೊಂಗಲ: ಬಂದೋಬಸ್ತ್, ರೌಂಡ್ಸ್‌, ಸ್ಟೇಷನ್‌ ಡ್ನೂಟಿ, ವಿಐಪಿ ಭದ್ರತೆ ಹೀಗೆ ವರ್ಷವಿಡೀ ಪೊಲೀಸ್‌ ಸಿಬ್ಬಂದಿಗೆ ಒತ್ತಡದ ಕೆಲಸ ಸಹಜ. ಇಷ್ಟೆಲ್ಲ ಒತ್ತಡದ ಕೆಲಸದ ನಡುವೆ ಅಧಿಕಾರಿಯೊಬ್ಬರು ಸಮಯ ಮಾಡಿಕೊಂಡು ಪೊಲೀಸ್‌ ವಸತಿ ಗೃಹದಲ್ಲಿ ಹಣ್ಣಿನ ತೋಟ ಮಾಡಿದ್ದಾರೆ.

ಹೌದು, ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಗ್ರಾಮೀಣ ಪೊಲೀಸ್‌ ಠಾಣೆ ಪಕ್ಕದ ವಸತಿ ಗೃಹದಲ್ಲಿ ಡಿವೈಎಸ್ಪಿ ಶಿವಾನಂದ ಕಟಗಿ ಅವರೇ ಈ ಪರಿಸರ ಕಾಳಜಿ ತೋರಿದ ಅಧಿಕಾರಿ.

ಅಲ್ಲಿ ವಿವಿಧ ಹಣ್ಣಿನ ಸಸಿ ನೆಟ್ಟು ಗಿಡವಾಗಿಸಿದ್ದಾರೆ. ಹಲವಾರು ಹಣ್ಣಿನ ಗಿಡ ಬೆಳೆಯುವ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಅಧಿಕಾರಿಯ ಈ ಉತ್ಸಾಹಕ್ಕೆ ಸಿಬ್ಬಂದಿ ಕೈ ಜೋಡಿಸಿದ್ದಾರೆ. ಪಾಳು ಬಿದ್ದಿದ್ದ ಜಾಗದಲ್ಲಿ ಹಣ್ಣಿನ ತೋಟ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಯಾವುದೇ ರಾಸಾಯನಿಕ ವಸ್ತು ಬಳಸದೇ ಹಣ್ಣಿನ ಗಿಡ ಬೆಳೆಸಲಾಗುತ್ತಿದೆ.

ಪಾಳು ಬಿದ್ದಿದ್ದ ಜಾಗದಲ್ಲಿ ಜೆಸಿಬಿ ಮೂಲಕ ಭೂಮಿ ಹದಗೊಳಿಸಿ ಹಣ್ಣಿನ ತೋಟದ ಕೆಲಸ ಆರಂಭಿಸಿದ್ದಾರೆ. ಕಲ್ಲು, ಮಣ್ಣು, ಗೊಬ್ಬರ ಹಾಕಿ ಜಮೀನಿನ ರೂಪ ನೀಡಿದ್ದಾರೆ. ಬಿಡುವಿನ ಸಮಯದಲ್ಲಿ ಪೊಲೀಸ್‌ ಸಿಬ್ಬಂದಿ, ಕುಟುಂಬಸ್ಥರು ತೋಟದ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದಾರೆ.

15ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಬೆಳವಣಿಗೆ: ಕಳೆದೊಂದು ವರ್ಷದಿಂದ ಹಣ್ಣಿನ ತೋಟ ಮಾಡಿ 30 ಗುಂಟೆ ಜಾಗದಲ್ಲಿ ಮಾವು, ಸೇಬು, ಪಪ್ಪಾಯಿ, ಹಲಸು, ಪೇರಲ, ಚಿಕ್ಕು, ದಾಳಿಂಬೆ, ಲಿಂಬೆ, ಗುಡ್ಡನ್ನೆಲ್ಲಿ, ಟೆಂಗು, ಸೀತಾಫಲ, ನೇರಳೆ, ಗೋಡಂಬೆ, ವಾಟರ್‌ ಆ್ಯಪಲ್‌ ಸೇರಿದಂತೆ ಇನ್ನೂ ಹಲವಾರು ಹಣ್ಣಿನ ಸಸಿ ನೆಟ್ಟು ಗಿಡವಾಗಿಸಿ ಉತ್ತಮ ಫಲ ಬೆಳೆಯಲಾಗುತ್ತಿದೆ. ಬೆಳೆದ ಹಣ್ಣುಗಳನ್ನು ತಾವು ಸವಿದು, ಸಿಬ್ಬಂದಿ, ಕುಟುಂಬಕ್ಕೂ ನೀಡುತ್ತಿದ್ದಾರೆ.

ಖಾಲಿ ಜಾಗೆಯಲ್ಲಿ ಫಸಲು: ಪೊಲೀಸ್‌ ವಸತಿ ಗೃಹ ಸುತ್ತಮುತ್ತ ಸಾಕಷ್ಟು ಜಾಗೆ ಇದೆ. ಆ ಜಾಗದಲ್ಲಿ ಹೂವು, ಹಣ್ಣು, ತರಕಾರಿ ಬೆಳೆದು ಸದ್ಬಳಕೆ ಮಾಡಿಕೊಳ್ಳಬೇಕೆನ್ನುವ ದೃಷ್ಟಿಯಿಂದ ಹಣ್ಣಿನ ತೋಟ ನಿರ್ಮಾಣಕ್ಕೆ ಕೈ ಹಾಕಿ ತಾಜಾ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಸಿಬ್ಬಂದಿ ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಡಿವೈಎಸ್ಪಿ ಶಿವಾನಂದ ಕಟಗಿ ತಿಳಿಸುತ್ತಾರೆ.

ಪೊಲೀಸ್‌ ಎಂದರೆ ಭಯ ಅಲ್ಲ, ಗೌರವ ಮನೋಭಾವ ಎಲ್ಲರಲ್ಲಿ ಮೂಡಬೇಕು. ಕರ್ತವ್ಯದೊಂದಿಗೆ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಬೇಕು.  ಶಿವಾನಂದ ಕಟಗಿ, ಡಿವೈಎಸ್ಪಿ, ಬೈಲಹೊಂಗಲ

„ಸಿ.ವೈ. ಮೆಣಶಿನಕಾಯಿ

ಟಾಪ್ ನ್ಯೂಸ್

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Tejasvi-surya

Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್‌ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ

Belagavi-SDA-Suside

Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್‌ ಪತ್ತೆ: ಪೊಲೀಸರಿಂದ ತನಿಖೆ ಚುರುಕು

lakshmi hebbalkar

Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.