![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Oct 28, 2023, 11:18 PM IST
ಕಲಬುರಗಿ, ಅ. 28: ಪಂಚ ರಾಜ್ಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿರುವ ಹೊತ್ತಿನಲ್ಲಿ ಕೇಂದ್ರ ಸರಕಾರವು ಜಾರಿ ನಿರ್ದೇಶನಾಲಯ (ಇಡಿ)ವನ್ನು ದುರ್ಬಳಕೆ ಮಾಡಿಕೊ ಳ್ಳುತ್ತಿದ್ದು, ಅದಕ್ಕೆ ಚುನಾವಣೆ ಫಲಿತಾಂಶವೇ ಉತ್ತರ ನೀಡಲಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗ ರ ದಲ್ಲಿ ಶನಿ ವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವ ರು, ಕಾಂಗ್ರೆಸ್ ಸಹಿತ ವಿಪಕ್ಷ ನಾಯಕರ ವಿರುದ್ಧ ಇ.ಡಿ. ದಾಳಿಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಫಲಿತಾಂಶದ ಬಳಿಕ ತನ್ನ ತಪ್ಪಿನ ಅರಿವಾಗಲಿದೆ ಎಂದರು.
ಕಾಂಗ್ರೆಸ್ ಇ.ಡಿ.-ಐ.ಟಿ. ಸಹಿತ ಇತರ ಯಾವುದೇ ದಾಳಿಗಳಿಗೂ ಹೆದರುವುದಿಲ್ಲ. ಪಕ್ಷ ಪ್ರಜಾಪ್ರಭುತ್ವದ ನೆಲೆಗಟ್ಟು ಹಾಗೂ ನೈತಿಕ ಮೌಲ್ಯಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತದೆ ಹಾಗೂ ಅದೇ ರೀತಿಯಲ್ಲಿ ಚುನಾವಣೆಯನ್ನೂ ಎದುರಿಸಲಿದೆ. ಯಾವುದೇ ದಾಳಿ ಮತ್ತು ಅಸ್ತ್ರಗಳಿಗೆ ಹೆದರುವುದಿಲ್ಲ ಎಂದರು.
ಪಂಚರಾಜ್ಯಗಳಲ್ಲೂ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಈಗಾಗಲೇ ಒಂದು ಹಂತದ ಪ್ರಚಾರ ಕೈಗೊಳ್ಳಲಾಗಿದೆ. ಎಲ್ಲೆಡೆ ಉತ್ತಮ ವಾತಾವರಣವಿದೆ. ಅನೇಕ ಸವಾಲಿನ ನಡುವೆ ಈ ಹಿಂದೆ ಅನೇಕ ಚುನಾವಣೆಯಲ್ಲಿ ಗೆಲುವು ಸಾ ಧಿಸಲಾಗಿದೆ. ಈಗಲೂ ಅಂತಹ ಸಾಧನೆ ತೋರುವ ವಿಶ್ವಾಸವಿದೆ ಎಂದರು.
ಎಐಸಿಸಿ ಅಧ್ಯಕ್ಷರಾಗಿ ಸವಾಲಿನ ನಡುವೆಯೂ ಒಂದು ವರ್ಷ ಯಶಸ್ವಿಯಾಗಿ ಕಾರ್ಯನಿರ್ವ ಹಿ ಸಿ ರು ವು ದಾ ಗಿ ಮಾಧ್ಯಮಗಳೇ ವರದಿ ಮಾಡಿವೆ. ರಾಜಕೀಯ ಜೀವನದುದ್ದಕ್ಕೂ ವಹಿಸಿಕೊಟ್ಟ ಸಚಿವ ಸ್ಥಾನ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕ ಸಹಿತ ಹಲವು ಜವಾಬ್ದಾರಿಗಳನ್ನು ಸವಾಲು ಎದುರಿಸಿಯೇ ನಿಭಾಯಿಸಿದ್ದೇನೆ ಎಂದು ಹೇಳಿದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.