ಇ-ನಕ್ಷೆ ಮಂಜೂರಾತಿ, ಖಾತಾ ನೋಂದಣಿ: ಕಾಯ್ದೆಗೆ ತಿದ್ದುಪಡಿ
Team Udayavani, Mar 18, 2020, 3:07 AM IST
ವಿಧಾನಸಭೆ: ರಾಜ್ಯದ ನಗರ ಪ್ರದೇಶಗಳಲ್ಲಿ ಇ-ನಕ್ಷೆ ಮಂಜೂರಾತಿ, ಖಾತಾ ನೋಂದಣಿ ಹಾಗೂ ನಿವೇಶ ನಗಳ ಖಾತೆ ದಾಖಲು, ಖಾತಾ ವರ್ಗಾವಣೆಯಲ್ಲಿನ ಸಮಸ್ಯೆ ನಿವಾರಣೆ ಸಂಬಂಧ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.
ಹರತಾಳು ಹಾಲಪ್ಪ, ಸಿದ್ದು ಸವದಿ, ಸುಭಾಷ್ ಗುತ್ತೇ ದಾರ್ ಹಾಗೂ ಕಳಕಪ್ಪ ಬಂಡಿ ಅವರು ನಗರ ಪ್ರದೇಶ ಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಯಾಗದೇ ಇರುವ ನಿವೇಶನಗಳ ಖಾತಾ ದಾಖಲು/ ವರ್ಗಾವಣೆ ಸ್ಥಗಿತಗೊಳಿಸಿರುವುದರಿಂದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ವಿಚಾರಕ್ಕೆ ಅವರು ಉತ್ತರ ನೀಡಿದರು.
ಇತ್ತೀಚೆಗೆ ಸಿಎಂ ಅಧ್ಯಕ್ಷತೆ ಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಹಳೆಯ ಪುರಸಭೆ ವ್ಯಾಪ್ತಿ ಯ ಲ್ಲಿದ್ದ ನಿವೇಶನಗಳಿಗೆ ಇದೀಗ ನಗರ ಯೋಜನೆ ವಿಭಾಗದಡಿ ಇ- ನಕ್ಷೆ ಸಿಗದಿರುವುದು. ಈ ಹಿಂದೆ ನಗರ ಸಭೆ, ಪುರಸಭೆ ವ್ಯಾಪ್ತಿಗೆ ಹಳ್ಳಿಗಳನ್ನು ಸೇರಿಸಿ ನೋಟಿಫೈ ಮಾಡಿದ್ದರೂ ಅಂತಹ ನಿವೇಶನಗಳಿಗೆ ಇದೀಗ ನಗರ ಯೋಜನೆ ಅಡಿ ಇ-ನಕ್ಷೆ ಸಿಗದಿರುವುದು.
ಬಗರ್ ಹುಕುಂ ಅಡಿ ಹಂಚಿಕೆಯಾದ ಭೂಮಿ ಹಾಗೂ ಮಲೆನಾಡಿನ ಭಾಗದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಸಂಬಂಧ 94ಸಿ ಹಾಗೂ 94ಸಿಸಿ ವ್ಯಾಪ್ತಿಗೆ ಬರದ ಭೂಮಿಗೆ ಸಂಬಂಧಪಟ್ಟಂತೆಯೂ ಕೆಲ ಸಮಸ್ಯೆಗಳಿವೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.