ಐರೋಪ್ಯ ಒಕ್ಕೂಟ ಆರ್ಥಿಕ ಪುನಶ್ಚೇತನಕ್ಕೆ ನಿಧಿ
Team Udayavani, Apr 26, 2020, 6:40 PM IST
ಮಣಿಪಾಲ: ಕೋವಿಡ್-19 ವಿಶ್ವದ ಬಲಿಷ್ಠ ರಾಷ್ಟ್ರಗಳ ಆರ್ಥಿಕತೆಯನ್ನೇ ಅಲುಗಾಡಿಸಿದ್ದು, ಯುರೋಪ್ ಒಕ್ಕೂಟವು ಈಗ ಆರ್ಥಿಕತೆ ಪುನಶ್ಚೇತನಕ್ಕೆ ಹೊಸ ಯೋಜನೆಯನ್ನು ರೂಪಿಸುತ್ತಿದೆ.
1930ರ ಮಹಾ ಆರ್ಥಿಕ ಬಿಕ್ಕಟ್ಟಿನ ಬಳಿಕ ಎದುರಿಸುತ್ತಿರುವ ದೊಡ್ಡ ಸಂಕಷ್ಟವನ್ನು ಎದುರಿಸಲು ಹಾಗೂ ಪ್ರಾದೇಶಿಕ ಆರ್ಥಿಕತೆಯನ್ನು ಮರಳಿ ಕಟ್ಟಲು ಯರೋಪ್ ಒಕ್ಕೂಟ ಒಂದು ಟ್ರಿಲಿಯನ್ ಯುರೋ ನಿಧಿಯನ್ನು ಸ್ಥಾಪಿಸಲು ಮುಂದಾಗಿದೆ.
ಇದಕ್ಕೆ ಒಕ್ಕೂಟದಲ್ಲಿರುವ ಎಲ್ಲ ರಾಷ್ಟ್ರಗಳು ತಾತ್ವಿಕವಾಗಿ ಒಪ್ಪಿಕೊಂಡಿದ್ದು, ಅನಂತರ ವ್ಯವಹಾರಿಕವಾಗಿ ಅಗಾಧ ಪ್ರಮಾಣದ
ನಷ್ಟವನ್ನು ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದಲ್ಲಿರುವ 27 ರಾಷ್ಟ್ರಗಳು ಸಹಿ ಮಾಡಿರುವ ಹೇಳಿಕೆಯನ್ನು ಬಿಡುಗಡೆ
ಮಾಡಿದ್ದು, ಈ ನಿಧಿ ಪ್ರಸ್ತುತ ಸ್ಥಿತಿಯನ್ನು ಎದುರಿಸಲು ಅತ್ಯವಶ್ಯ ಹಾಗೂ ಅಗತ್ಯವಾದುದು ಎಂದು ಹೇಳಿವೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯೂ ಈ ವರ್ಷ ಇಯು ದೇಶದ ಜಿಡಿಪಿ ಶೇ.7 ರಷ್ಟು ಕುಸಿಯುತ್ತದೆ ಎಂದು ಅಂದಾಜಿಸಿದ್ದು, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿನ ಆರ್ಥಿಕ ಚಟುವಟಿಕೆಯು ಶೇ.20 ರಿಂದ 30 ರಷ್ಟು ಕುಸಿಯಲಿದೆ ಎಂದು ಹೇಳಿದೆ.
ವೇತನ ಸಬ್ಸಿಡಿ ವಿತರಣೆ
ಜತೆಗೆ ಇಯು ಸರಕಾರ ಈಗಾಗಲೇ ಹಣಕಾಸು ಮಂತ್ರಿ ರೂಪಿಸಿರುವ 500 ಬಿಲಿಯನ್ ಯುರೋ ಮೊತ್ತದ ಪರಿಹಾರ ನಿಧಿ ಯೋಜನೆಗೆ ಅನುಮೋದನೆ ನೀಡಿದ್ದು, ನಿರುದ್ಯೋಗ ಸಮಸ್ಯೆಯನ್ನು , ಉದ್ಯೋಗಿಗಳನ್ನು ವಜಾಗೊಳಿಸದಂತೆ ನೋಡಿಕೊಳ್ಳಲು ಈ ಹಣ ವಿನಿಯೋಗ ಮಾಡಲಾಗುತ್ತದೆ ಎಂದು ತಿಳಿಸಿದೆ.
ಇದರೊಂದಿಗೆ ಸುಮಾರು 100 ಬಿಲಿಯನ್ ಮೊತ್ತವನ್ನು ವೇತನ ಸಬ್ಸಿಡಿ ಸೇರಿದಂತೆ ವ್ಯವಹಾರ ಚಟುವಟಿಕೆಗಳ ಪುನರಾರಂಭಕ್ಕೆ ನೆರವು ನೀಡಲು ಬಳಸುವುದಾಗಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.