ಈಕ್ವೆಡಾರ್‌: ತಂದೆಯ ಪಾರ್ಥಿವ ಶರೀರಕ್ಕಾಗಿ ಹುಡುಕಾಟ


Team Udayavani, Apr 21, 2020, 10:24 AM IST

ಈಕ್ವೆಡಾರ್‌: ತಂದೆಯ ಪಾರ್ಥಿವ ಶರೀರಕ್ಕಾಗಿ ಹುಡುಕಾಟ

ಮಣಿಪಾಲ: ತನ್ನ ತಂದೆಯ ಪಾರ್ಥಿವ ಶರೀರಕ್ಕಾಗಿ ಎರಡು ವಾರದಿಂದ ಆಸ್ಪತ್ರೆಯನ್ನು ಅಲೆಯುತ್ತಿರುವ ಮಗನ ಕಥೆ ಇದು.
ಈಕ್ವೆಡಾರ್‌ನ ಆರೋಗ್ಯ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿರುವ ಕೋವಿಡ್‌-19 ಸೋಂಕಿತರ ಜತೆಗೆ ಇತರೆ ರೋಗಿಗಳು ಮತ್ತು ಅವರ ಕುಟುಂಬದವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಗುವಾಕ್ವಿಲ್‌ ನಗರದ ನಿವಾಸಿ ಡಾರ್ವಿನ್‌ ಕ್ಯಾಸ್ಟಿಲ್ಲೊ ಅವರ ತಂದೆ ಇಳಿವಯಸ್ಸಿನ ಕಾಯಿಲೆಯಿಂದ ನಿಧನರಾಗಿದ್ದರು. ಕೋವಿಡ್‌-19 ಅವಾಂತರದಿಂದ ನಿಧನ ವಾರ್ತೆ ತಿಳಿದು 2 ದಿನ ತಡವಾಗಿ ತೆರಳಿದ್ದರೂ ಅಪ್ಪನ ಶವ ಸಿಗದೇ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.

ಸೋಂಕಿತರ ಶವಗಳ ಮಧ್ಯೆ ಹುಡುಕುವುದೇಗೆ ?
ಬಳಿಕ ತನಗೆ ದೊರೆತ ಪಾರ್ಥಿವ ಶರೀರ ತನ್ನ ತಂದೆಯದಲ್ಲ ಎಂಬ ಮಾಹಿತಿಯನ್ನು ವೈದ್ಯಕೀಯ ಸಿಬಂದಿಗೆ ಕ್ಯಾಸ್ಟಿಲ್ಲೊ ತಿಳಿಸಿದರು. ಆಗ ಸಿಬಂದಿಯಿಂದ ಸಿಕ್ಕ ಉತ್ತರವೆಂದರೆ, ಹಾಗಾದರೆ ನೀವೆ ನಿಮ್ಮ ತಂದೆ ದೇಹವನ್ನು ಪತ್ತೆ ಮಾಡಿ ತೆಗೆದುಕೊಂಡು ಹೋಗಿ ಎಂಬುದು. ಆದರೆ ಅದೇ ಸ್ಥಳದಲ್ಲಿ ಸುಮಾರು 170 ಸೋಂಕಿತರ ಶವಗಳನ್ನು ಇಡಲಾಗಿದ್ದು, ಅದರ ನಡುವೆ ತಂದೆಯ ಶವವನ್ನು ಪತ್ತೆಹಚ್ಚುವುದು ಹೇಗೆ ಎಂಬುದೇ ತಿಳಿಯದೇ ಕ್ಯಾಸ್ಟಿಲ್ಲೊ ಕಂಗಾಲಾಗಿದ್ದರು.

2 ವಾರಗಳಿಂದ ಪತ್ತೆಯಲ್ಲಿ ನಿರತ
ಕಳೆದ 2 ವಾರಗಳಿಂದ ಕ್ಯಾಸ್ಟಿಲ್ಲೊ ತಂದೆಯ ಪಾರ್ಥಿವ ಶರೀರದ ಪತ್ತೆಯ ಕಾರ್ಯದಲ್ಲಿಯೇ ನಿರತರಗಿದ್ದು, ಸದ್ಯ ತಂದೆಯ ಸಂಸ್ಕಾರ ಕಾರ್ಯಕ್ಕೆಂದು ಖರೀದಿಸಿದ ಶವ ಪೆಟ್ಟಿಗೆಯನ್ನು ಹಿಂದಿರುಗಿಸಿ ಅಂತ್ಯಸಂಸ್ಕಾರ ವಿಧಿ ವಿಧಾನಗಳನ್ನು ಮುಂದೂಡಿದ್ದಾರೆ.

ಮಗನ ಅಳಲು
ಈ ಘಟನೆಯಲ್ಲಿ ಯಾರನ್ನೂ ನಾನು ದೂರುವುದಿಲ್ಲ. ಏಕೆಂದರೆ ಜಾಗತಿಕ ಸಮಸ್ಯೆಯಾಗಿ ಕೋವಿಡ್‌-19 ವಿಶ್ವವನ್ನು ಪೀಡಿಸುತ್ತಿದ್ದು, ಈಕ್ವೆಡಾರ್‌ನ ಅತಿದೊಡ್ಡ ನಗರವಾದ ಗುವಾಕ್ವಿಲ್‌ ಪ್ರಾಂತ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಪ್ರತಿದಿನ ಸಾವಿರಾರು ಮಂದಿ ಬಲಿಯಾಗುತ್ತಿದ್ದು, ನನ್ನ ನಗರವೂ ಇದಕ್ಕೆ ಹೊರತಾಗಿಲ್ಲ. ಹಾಗಾಗಿ “ನಾನು ಆಸ್ಪತ್ರೆಯ ಅಥವಾ ಶವಾಗಾರ ಸಿಬಂದಿಯನ್ನು ದೂಷಿಸುವುದಿಲ್ಲ. ನನ್ನ ಆಸೆ ಇಷ್ಟೇ, “ನನ್ನ ತಂದೆಗೆ ನಮ್ಮ ಧರ್ಮದ ಅಂತ್ಯಸಂಸ್ಕಾರ ವಿಧಿ ವಿಧಾನದಂತೆ ವಿದಾಯ ಹೇಳಬೇಕು. ಅವರಿಗೆ ಹೂ ಗುತ್ಛವನ್ನು ಸಮರ್ಪಿಸುವ ಮೂಲಕ ನನ್ನ ಅಂತಿಮ ನಮನ ಸಲ್ಲಿಸಬೇಕು ಎಂದು ಕ್ಯಾಸ್ಟಿಲ್ಲೊ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.