Education: ಮಹಾಭಾರತ-ರಾಮಾಯಣ ಶಾಲಾ ಪಠ್ಯಕ್ರಮದಲ್ಲಿರಲಿ- NCERT ಉನ್ನತ ಸಮಿತಿ ಶಿಫಾರಸು
Team Udayavani, Nov 22, 2023, 12:59 AM IST
ಹೊಸದಿಲ್ಲಿ: ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಸಮಾಜ -ವಿಜ್ಞಾನ ವಿಷಯದ ಪಠ್ಯಗಳಾಗಿ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಸೇರ್ಪಡೆಗೊಳಿಸುವಂತೆ ಹಾಗೂ ತರಗತಿಗಳ ಗೋಡೆಯ ಮೇಲೆ ಸಂವಿಧಾನದ ಪ್ರಸ್ತಾವನೆಯನ್ನು ಬರೆಯುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸ್ಥಾಪಿಸಿರುವ ಉನ್ನತ ಸಮಿತಿಯು ಶಿಫಾರಸು ಮಾಡಿದೆ.
ಸಮಿತಿಯ ಅಧ್ಯಕ್ಷರಾದ ಸಿ.ಐ.ಇಸಾಕ್ ಈ ಕುರಿತು ಮಂಗಳವಾರ ಮಾಹಿತಿ ನೀಡಿದ್ದು, 7 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಮಹಾಕಾವ್ಯಗಳನ್ನು ಕಲಿಸುವುದು ಮಹತ್ವದ್ದಾಗಿದೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಹದಿಹರೆಯದಲ್ಲೇ ಸ್ವಾಭಿಮಾನ, ದೇಶಭಕ್ತಿ, ರಾಷ್ಟ್ರಹಿತ ಚಿಂತನೆಗಳನ್ನು ಬೆಳಸಿಕೊಳ್ಳುತ್ತಾರೆ. ಪ್ರತೀವರ್ಷ ಸಾವಿರಾರು ವಿದ್ಯಾರ್ಥಿಗಳು ದೇಶ ತೊರೆದು, ಬೇರೆ ರಾಷ್ಟ್ರಗಳ ಪೌರತ್ವ ಬಯಸುತ್ತಾರೆ. ಏಕೆಂದರೆ ಅವರಲ್ಲಿ ದೇಶಭಕ್ತಿಯ ಕೊರತೆಯಿದೆ. ಆ ಕೊರತೆಯನ್ನು ನಿವಾರಿಸಲು ನಮ್ಮ ಬೇರುಗಳನ್ನು, ಮೂಲಗಳನ್ನು ಅರಿಯುವುದು ಮುಖ್ಯ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಬೆಳೆಯಲು ಈ ಕಲಿಕೆ ಅಗತ್ಯವೆಂದು ಸಮಿತಿ ಭಾವಿಸಿದೆ ಎಂದು ಇಸಾಕ್ ತಿಳಿಸಿದ್ದಾರೆ.
ಎನ್‌ಸಿಇಆರ್‌ಟಿ ಕಳೆದ ವರ್ಷ ರಚಿಸಿರುವ ಈ 7 ಸದ್ಯಸರ ಸಮಿತಿಯು ಸಮಾಜ ವಿಜ್ಞಾನ ವಿಷಯದ ಪಠ್ಯ ಪರಿಷ್ಕರಣೆಗೆ ಈಗಾಗಲೇ ಹಲವಾರು ಶಿಫಾರಸುಗಳನ್ನು ನೀಡಿದೆ. ಬಹುಶಃ ಮುಂದಿನ ವರ್ಷ ಜುಲೈಯಲ್ಲಿ ಈ ಶಿಫಾರಸುಗಳನ್ನು 19 ಸದಸ್ಯರು ಇರುವ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ (ಎನ್‌ಎಸ್‌ಟಿಸಿ) ಪರಿಗಣಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.