ಅಂಕದೊಂದಿಗೆ ಅಂತಃಕರಣದ ಉನ್ನತಿಯೂ ಅಗತ್ಯ: ಸುರೇಶ್ ಕುಮಾರ್
Team Udayavani, Feb 27, 2021, 10:46 PM IST
ಮಹಾನಗರ: ಶಿಕ್ಷಣದಲ್ಲಿ ಕೇವಲ ಅಂಕ ಗಳಿಕೆಯೇ ಪ್ರಧಾನವಾಗಿ ರಬಾರದು. ಮಕ್ಕಳಲ್ಲಿ ಒಳ್ಳೆಯ ಅಂತಃಕರಣವನ್ನು ಬೆಳೆಸಬೇಕು. ಆಗ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ನಗರದ ಶಕ್ತಿ ನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಮುಂದಿನ ಸಮಾಜದ ನೇತಾರರು. ಅದುದರಿಂದ ಉತ್ತಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯ. ಇದೊಂದು ಸವಾಲಿನ ವರ್ಷ. ಕೊರೊನಾ ಎಲ್ಲ ಕ್ಷೇತ್ರಕ್ಕೂ ಹೊಡೆತ ನೀಡಿರುವಂತೆ ಶಿಕ್ಷಣ ಕ್ಷೇತ್ರದಲ್ಲೂ ದೂರ ಗಾಮಿ ಪರಿಣಾಮ ಬೀರಿದೆ. ಹಾಗಿದ್ದರೂ ಶಿಕ್ಷಣ ಸಂಸ್ಥೆಗಳು ಅನೇಕ ಸವಾಲುಗಳನ್ನು ಎದುರಿಸಿಕೊಂಡು ಮಕ್ಕಳಿಗೆ ಶಿಕ್ಷಣ ಕಡಿತ ಆಗದಂತೆ ಉತ್ತಮ ಪ್ರಯತ್ನಗಳನ್ನು ನಡೆಸುತ್ತಿವೆ ಎಂದರು.
ಶಕ್ತಿ ವಿದ್ಯಾಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಅನನ್ಯ ಸಾಧನೆ ಶ್ಲಾಘ ನೀಯವಾದುದು. ಸಂಸ್ಥೆಯ ಸಂಸ್ಥಾಪಕ, ಆಡಳಿತಾಧಿಕಾರಿ ಡಾ| ಕೆ.ಸಿ.ನಾೖಕ್ ಅವರ ದಕ್ಷ ಮಾರ್ಗದರ್ಶನ ಮತ್ತು ಸಮಾಜ ಮುಖೀ ಚಿಂತನೆಯೊಂದಿಗೆ ಮಾದರಿ ಶಿಕ್ಷಣ ಸಂಸ್ಥೆಯಾಗಿ ಮುನ್ನಡೆಯುತ್ತಿದೆ ಎಂದವರು ಅಭಿನಂದಿಸಿದರು. ಸರೋಶ್ ಮೆಮೋರಿಯಲ್ ಈಜು ಕೊಳವನ್ನು ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ್ ಹೊಸೂರು ಉದ್ಘಾಟಿಸಿ ಕ್ರಿಯಾಶೀಲ ವ್ಯಕ್ತಿತ್ವ ಮತ್ತು ವಿನೂತನ ಚಿಂತನೆಗಳ ಡಾ| ಕೆ.ಸಿ. ನಾೖಕ್ ಅವರ ಮಾರ್ಗದರ್ಶನದಲ್ಲಿ ಈಜುಕೊಳ, ಆಡಿಟೋರಿಯಂ ಸೊಗಸಾಗಿ ಮೂಡಿಬಂದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಶಕ್ತಿ ವಿದ್ಯಾಸಂಸ್ಥೆ ಗುಣಮಟ್ಟದ, ಮೌಲ್ಯಾ ಧಾರಿತ ಶಿಕ್ಷಣದೊಂದಿಗೆ ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು. ಎಮ್ಮೆಕೆರೆಯಲ್ಲಿ 17 ಕೋ.ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಜತೆಗೆ ನಗರದಲ್ಲಿ ಮಹಿಳೆಯರಿಗಾಗಿ 4 ಕೋ. ರೂ. ವೆಚ್ಚದಲ್ಲಿ ಇನ್ನೊಂದು ಈಜುಕೊಳವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ನಿರ್ದಿಷ್ಟ ಗುರಿ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, ವಿದ್ಯಾರ್ಥಿ, ಅಧ್ಯಾಪಕ ವೃಂದ, ಆಡಳಿತ ವೃಂದ ಮತ್ತು ಪಾಲಕರು ವಿದ್ಯಾಸಂಸ್ಥೆಯ ಆಧಾರ ಸ್ತಂಭಗಳು. ಇವುಗಳಲ್ಲಿ ಯಾವುದಾದರೂ ಒಂದು ದುರ್ಬಲವಾದರೂ ವಿದ್ಯಾಸಂಸ್ಥೆ ಶಿಥಿಲಗೊಳ್ಳುತ್ತದೆ ಎಂದರು. ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಛಲ ಮತ್ತು ಶ್ರದ್ಧೆಯಿಂದ ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾಭಾರತಿ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಜಿ.ಆರ್. ಜಗದೀಶ್ ಮಾತನಾಡಿ, ಶಕ್ತಿ ವಿದ್ಯಾಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು. ಸ್ಥಳೀಯ ಕಾರ್ಪೋರೆಟರ್ ವನಿತಾ ಪ್ರಸಾದ್ ಅತಿಥಿಯಾಗಿದ್ದರು. ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ| ಕೆ.ಸಿ. ನಾೖಕ್‌ಅತಿಥಿಗಳಿಗೆ ಗೌರವಾರ್ಪಣೆಗೈದರು.
ಆಡಿಟೋರಿಯಂನ ಆರ್ಕಿಟೆಕ್ಟ್ ದೀಪಕ್ ಡಿ’ಸೋಜಾ ಅವರನ್ನು ಸಮ್ಮಾನಿಸ ಲಾಯಿತು. ಕಾರ್ಯದರ್ಶಿ ಸಂಜಿತ್ ನಾೖಕ್ ಸ್ವಾಗತಿಸಿದರು. ಮುಖ್ಯ ಸಲಹೆಗಾರ ರಮೇಶ್ ಕೆ. ದಿಕ್ಸೂಚಿ ಭಾಷಣ ಮಾಡಿದರು. ಕೋಶಾಧಿಕಾರಿ ಮುರಳೀಧರ್ ನಾೖಕ್, ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ (ಪ್ರಭಾರ) ಸುಧೀರ್ ಎಂ.ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪ್ರಿಸ್ಕೂಲ್ ಸಂಯೋಜಕಿ ನೀಮಾ ಸಕ್ಸೇನಾ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ ರೈ, ಪ್ರೊ| ಎಂ.ಬಿ. ಪುರಾಣಿಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಎಂಎಲ್‌ಸಿ ಬಾಲಕೃಷ್ಣ ಭಟ್‌ಉಪಸ್ಥಿತರಿದ್ದರು. ಶ್ರೀವರ ವಂದಿಸಿದರು.
ಆಡಿಟೋರಿಯಂ- ಈಜುಕೊಳದ ವಿಶೇಷತೆ
ಆಕರ್ಷಕ ವಿನ್ಯಾಸದ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂ 1,000 ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಲಾಗುತ್ತದೆ.ಯೋಗ ತರಬೇತಿಯನ್ನು ನಡೆಸಲು ಸಹಕಾರಿಯಾಗಿದೆ. ಸರೋಜ್ ಮೆಮೊರಿಯಲ್ ಈಜುಕೊಳ ಸುಮಾರು 25 ಮೀಟರ್ ಉದ್ದ, 6 ಅಡಿ ಆಳ ಹೊಂದಿದೆ. ಈಜು ತಜ್ಞರು ತರಬೇತಿ ನೀಡಲಿರುವರು. ಸಣ್ಣ ಮಕ್ಕಳಿಗೆ ಸಣ್ಣ ಈಜುಕೊಳವನ್ನು ನಿರ್ಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.