Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
ದಂಡತೀರ್ಥ ಪ.ಪೂ. ಕಾಲೇಜಿನ ರಜತ ವರ್ಷಾಚರಣೆ ಉದ್ಘಾಟನೆ
Team Udayavani, Nov 9, 2024, 12:01 AM IST
ಕಾಪು: ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯದ ಜತೆಗೆ ಶಿಕ್ಷಣಕ್ಕೆ ಒತ್ತು ನೀಡುವ ಆವಶ್ಯಕತೆಯಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದರೂ ಹೆತ್ತವರು, ತಾವು ಕಲಿತ ಶಾಲೆಗೆ ಗೌರವ ನೀಡುವ ಕೆಲಸ ಮಾಡುವಂತಾಗಬೇಕು ಎಂದು ಎಂಆರ್‌ಜಿ ಗ್ರೂಫ್‌ನ ಚೇರ್ಮನ್ ಡಾ| ಕೆ. ಪ್ರಕಾಶ್ ಶೆಟ್ಟಿ ಬಂಜಾರ ಹೇಳಿದರು.
ನ. 8ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಂಭ್ರಮಾಚರಣೆ, ಕಾಲೇಜಿನ ಸಂಸ್ಥಾಪಕ ದಿ| ಡಾ| ಕೆ. ಪ್ರಭಾಕರ ಶೆಟ್ಟಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ| ಪ್ರಭಾಕರ್ ಶೆಟ್ಟಿ ಅವರು ತಮ್ಮ ಮಾದರಿ ಕೆಲಸದ ಮೂಲಕ ಮನೆ ಮಾತಾಗಿದ್ದರು. ಅವರ ಸ್ಮರಣೆಯಲ್ಲಿ ಅವರು ಬಿಟ್ಟು ಹೋದ ಕನಸುಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ನಿಟ್ಟೆ ವಿ.ವಿ. ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಪುಟ್ಟ ಊರಿನಲ್ಲಿ ದೊಡ್ಡ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಡಾ| ಪ್ರಭಾಕರ ಶೆಟ್ಟಿ ಅವರು ವಿಶೇಷ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಅವರ ಸಾಧನೆ ಎಲ್ಲರಿಗೂ ಮಾದರಿ ಎಂದರು.
ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಮಾತನಾಡಿ, 2047ರ ಅಭಿವೃದ್ಧಿಶೀಲ ಭಾರತದ ಕಲ್ಪನೆಯೊಂದಿಗೆ ನಾವು ಮುನ್ನಡೆಯಬೇಕಿದೆ. ಇಂದಿನ ಯುವಜನರನ್ನು ಕೂಡ ಆ ದಿಸೆಯಲ್ಲಿ ಬೆಳೆಸಬೇಕಿದೆ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ದಿವಾಕರ ಶೆಟ್ಟಿ ಅವರು ರಜತ ಪ್ರಭ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಆರ್‌ಜಿಯುಎಚ್‌ಎಸ್‌ನ ಮಾಜಿ ಉಪಕುಲಪತಿ ಡಾ| ಚಂದ್ರಶೇಖರ ಶೆಟ್ಟಿ, ಎ.ಜೆ. ಮೆಡಿಕಲ್ ಸೈನ್ಸ್ ನ ಡೀನ್ ಡಾ| ಅಶೋಕ್ ಹೆಗ್ಡೆ, ವಿದ್ಯಾಂಗ ಉಪ ನಿರ್ದೇಶಕ ಮಾರುತಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಉದ್ಯಮಿಗಳಾದ ಕೆ. ವಾಸುದೇವ ಶೆಟ್ಟಿ, ಮನೋàಹರ ಎಸ್. ಶೆಟ್ಟಿ ಭಾಗವಹಿಸಿದ್ದರು.
ಎಸ್‌ಕೆಜಿಎಸ್‌ಎಂ ಟ್ರಸ್ಟ್‌ನ ಅಧ್ಯಕ್ಷೆ ಶೋಭಾ ಪಿ. ಶೆಟ್ಟಿ, ಟ್ರಸ್ಟಿಗಳಾದ ಡಾ| ಪನ್ನಾ ಪಿ. ಶೆಟ್ಟಿ, ಡಾ| ಯು. ಮಾಧವ ಶೆಟ್ಟಿ, ಪ್ರಿಶಾ ಪಿ. ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಮಂಜುಳಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಸಮ್ಮಾನ, ಗೌರವಾರ್ಪಣೆ
ರಜತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ 25 ವರ್ಷಗಳಿಂದ ಸೇವೆ ಸಲ್ಲಿಸಿದ ಸಿಬಂದಿ, ಶಾಲಾ ಹಳೆ ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಡಾ| ಕೆ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ಪ್ರಸ್ತಾವನೆಗೈದರು. ಪ್ರಾಂಶುಪಾಲ ನೀಲಾನಂದ ನಾಯ್ಕ ವರದಿ ವಾಚಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಉಷಾ ಮಾಬೆನ್ ನಿರೂಪಿಸಿದರು. ರೋಶಲ್ ಡಿ’ಸೋಜಾ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.