ಎಜುಟೆಕ್ “ವಿದೇಶಿ ವಿವಿ ಪ್ರಮಾಣಪತ್ರ”ಕ್ಕಿಲ್ಲ ಮಾನ್ಯತೆ- ವಿದ್ಯಾರ್ಥಿಗಳಿಗೆ UGC ಎಚ್ಚರಿಕೆ
ಮೇಡ್ ಇನ್ ಇಂಡಿಯಾ ವಿದೇಶಿ ಪದವಿಗಳ ಬಗ್ಗೆ ಎಚ್ಚರ
Team Udayavani, Dec 16, 2023, 9:16 PM IST
ನವದೆಹಲಿ: “ಭಾರತದಲ್ಲೇ ವ್ಯಾಸಂಗ ಮಾಡಿ, ವಿದೇಶಿ ವಿವಿಗಳ ಪದವಿ ಪಡೆಯಿರಿ” ಎಂದು ಹೇಳಿಕೊಂಡು ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ವಂಚಿಸುವ ಎಜುಟೆಕ್ ಕಂಪನಿಗಳು ಹಾಗೂ ಕಾಲೇಜುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಸೂಚಿಸಿದೆ. ಜತೆಗೆ, ಇಂತಹ ಕಾಲೇಜುಗಳು ನೀಡುವ ವಿದೇಶಿ ಪದವಿ ಪ್ರಮಾಣಪತ್ರಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
“ಮೇಡ್ ಇನ್ ಇಂಡಿಯಾ” ವಿದೇಶಿ ಪದವಿ ಹೆಸರಿನಲ್ಲಿ ಹಲವಾರು ವಿದ್ಯಾರ್ಥಿಗಳು ನಕಲಿ ಪದವಿಗಳನ್ನು ಪಡೆಯುತ್ತಿರುವುದರ ಬಗ್ಗೆ ಯುಜಿಸಿ ಕಳವಳ ವ್ಯಕ್ತಪಡಿಸಿದೆ. ಒಂದು ಬಾರಿಯೂ ವಿಮಾನ ಹತ್ತದೇ, ಮನೆಯಿಂದಲೂ ಹೊರಬರದೇ, ವಿದೇಶಿ ಉಪನ್ಯಾಸಕರ ಪಾಠಗಳನ್ನೂ ಆಲಿಸದೇ, ಪ್ರಾಜೆಕ್ಟ್ಗಳನ್ನು ಸಲ್ಲಿಸದೇ ಈ ವಿದ್ಯಾರ್ಥಿಗಳಿಗೆ “ವಿದೇಶಿ ವಿವಿಗಳ ಪದವಿ ಪ್ರಮಾಣಪತ್ರ’ ಲಭ್ಯವಾಗುತ್ತಿವೆ.
ಬೆಂಗಳೂರಿನ ಕೆಲವು ಕಾಲೇಜುಗಳೂ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಪದವಿ ಪ್ರಮಾಣಪತ್ರ ಕಲ್ಪಿಸಿಕೊಡುವ ಭರವಸೆ ನೀಡಿರುವ ಸಂಗತಿಗಳೂ ಬೆಳಕಿಗೆ ಬಂದಿವೆ. ವಿದ್ಯಾರ್ಥಿಗಳು ಇದನ್ನು ನಿಜವೆಂದೇ ನಂಬಿ ಮೋಸ ಹೋಗುತ್ತಿದ್ದಾರೆ. ಅವರು ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹೋಗುವಾಗಲೇ ಅವರಿಗೆ ಈ ನಕಲಿ ಪ್ರಮಾಣಪತ್ರಗಳ ಸತ್ಯ ಅರಿವಾಗುವುದು. ಭಾರತೀಯ ವಿದ್ಯಾರ್ಥಿಗಳು ಮಾತ್ರವಲ್ಲದೇ, ಭಾರತದಲ್ಲಿ ವ್ಯಾಸಂಗ ಮಾಡಿದ ನೇಪಾಳ, ಪೋಲೆಂಡ್ ಸೇರಿದಂತೆ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಕೂಡ ಈ ರೀತಿಯ ಮೋಸಕ್ಕೆ ಬಲಿಯಾಗಿದ್ದಾರೆ.
ಈಗ ಈ ಕುರಿತು ಸ್ಪಷ್ಟನೆ ನೀಡಿರುವ ಯುಜಿಸಿ, ತನ್ನಿಂದ ಗುರುತಿಸಲ್ಪಡದೇ ಇರುವ ಸಂಸ್ಥೆಗಳು ವಿತರಿಸುವಂಥ ಪ್ರಮಾಣಪತ್ರಗಳು ಹಾಗೂ ಪದವಿಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.