ರಣಹದ್ದುಗಳಿಗೆ ಕಂಟಕವಾಗುತ್ತಿವೆ ಜಾನುವಾರು ಔಷಧಿಗಳು
ಜಾನುವಾರುಗಳಿಗೆ ಬಳಸುವ ಡೈಕ್ಲೋಪೈನಾಕ್ ಔಷಧ ಬಳಕೆಯಿಂದ ರಣಹದ್ದುಗಳಿಗೆ ಕಂಟಕ
Team Udayavani, Oct 3, 2020, 7:12 PM IST
ಶಿರಸಿ: ಜೀವ ವೈವಿಧ್ಯ ಸರಪಳಿಯ ಪ್ರಮುಖ ಪಕ್ಷಿಗಳಲ್ಲಿ ಒಂದಾದ ರಣಹದ್ದುಗಳಿಗೆ ಜಾನುವಾರುಗಳಿಗೆ ಬಳಕೆ ಮಾಡಲಾಗುತ್ತಿರುವ ನೋವು ನಿವಾರಕ ಔಷಧವೇ ಮುಳುವಾಗಿದ್ದು, ಇವುಗಳ ಅತಿಯಾದ ಬಳಕೆಯಿಂದ ಕಳೆದ ಎರಡು ದಶಕಗಳಿಂದೀಚೆಗೆ ಈ ಪಕ್ಷಿ ಸಂಕುಲವೇ ವಿನಾಶದ ಅಂಚಿನಲ್ಲಿದೆ. ಇದೇ ಕಾರಣಕ್ಕೆ ಅ.2ರಿಂದ ಆರಂಭಗೊಂಡ ವನ್ಯಜೀವಿ ಸಪ್ತಾಹದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಈ ಬಾರಿ ಭವಿಷ್ಯಕ್ಕಾಗಿ ರಣಹದ್ದುಗಳು ಹಾಗೂ ಆನೆ ಕಾರಿಡಾರ್ ಸಂರಕ್ಷಣೆ ಜಾಗೃತಿ ಅಭಿಯಾನವನ್ನು ಕೋವಿಡ್ ಕಷ್ಟದ ಮಧ್ಯೆಯೂ ಹಮ್ಮಿಕೊಂಡಿದೆ.
ರಣಹದ್ದುಗಳ ಸಂರಕ್ಷಷಣೆಯಂತೇ ಆನೆ ಕಾರಿಡಾರ್ ಸಂರಕ್ಷಣೆ ಕೂಡ ಸವಾಲಿನ ಪ್ರಶ್ನೆಯೇ ಆಗಿದೆ.
ಏಕೆ ಮಹತ್ವ?: ಭಾರತದಲ್ಲಿ ಕನಿಷ್ಟ ಒಂಬತ್ತು ಜಾತಿಯ ರಣಹದ್ದುಗಳಿವೆ. ಇವು ದೇಶದೆಲ್ಲೆಡೆ ವಾಸ ಮಾಡಲು ಯೋಗ್ಯ ವಾತಾವರಣ ಇದ್ದರೂ ಈಚೆಗಿನ ದಶಕದಲ್ಲಿ ಅಭಯಾರಣ್ಯ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ ಪ್ರದೇಶದಲ್ಲಿ ಮಾತ್ರ ಕಾಣಿಸಿಕೊಂಡಿವೆ ಎನ್ನುತ್ತಾರೆ ವನ್ಯಜೀವಿ ತಜ್ಞರು. ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ಸ್ವತ್ಛ ಭಾರತ್ ಅಭಿಯಾನಕ್ಕೆ ಪ್ರೇರಕವೆಂಬಂತೆ ಪ್ರಕೃತಿ ಸ್ವತ್ಛವಾಗಿಡಲು ಶ್ರಮಿಸುತ್ತಲಿವೆ. ಸತ್ತು ಹೋದ ಪ್ರಾಣಿ, ಪಕ್ಷಿ ಹಾಗೂ ಇತರ ಜೀವಿಗಳ ಮಾಂಸ ತಿನ್ನುವ ಮೂಲಕ ಸ್ವತ್ಛ ವಾತಾವರಣ ನಿರ್ಮಾಣ ಮಾಡುತ್ತವೆ. ಕಳೆದ ಮೂರು ದಶಕಗಳಿಂದ ವಿನಾಶದಂಚಿನಲ್ಲಿದ್ದರಿಂದ ಪ್ರಕೃತಿಯ ಅಸಮತೋಲನ ಉಂಟಾಗಿದೆ.
ಕ್ಷೀರ ಕ್ರಾಂತಿ ಮುಳುವಾಯ್ತು: 1970ರ ದಶಕದ ಬಳಿಕ ದೇಶದಲ್ಲಿ ಉಂಟಾದ ಕ್ಷೀರ ಕ್ರಾಂತಿ ರಣಹದ್ದುಗಳಿಗೆ ಮಾರಕವಾಯಿತು. ಡೈಕ್ಲೋಪೈನಾಕ್ ಎಂಬ ಔಷಧ ಪಶುಗಳ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ. ಇದು ಜಾನುವಾರುಗಳ ಕೊಬ್ಬಿನಲ್ಲಿ ಸೇರಿ ಸತ್ತ ಬಳಿಕವೂ ಇರುತ್ತೆ. ಇದನ್ನು ತಿಂದ ರಣಹದ್ದುಗಳ ನರಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತವೆ. ರಣಹದ್ದುಗಳ ಮೇಲೆ ರಕ್ತ ಹೀನತೆ, ಮೂತ್ರಪಿಂಡಗಳ ವೈಫಲ್ಯ ಆಗಲಿವೆ. ಈ ಮಾರಕ ಔಷಧವನ್ನು ಭಾರತದಲ್ಲಿ ನಿರ್ಬಧಿಂ ಸಲಾಗಿದೆ. ರಣಹದ್ದುಗಳನ್ನು ಉಳಿಸಲು ರಾಮನಗರದಲ್ಲಿ ವಿಶೇಷ ಸಂರಕ್ಷಣಾ ಕೇಂದ್ರ ಕೂಡ ಆರಂಭಿಸಲಾಗುತ್ತಿದೆ.
ಕೃತಕ ಸಂತಾನೋತ್ಪತ್ತಿಗೂ ಅಸ್ಸಾಂ, ಪಶ್ಚಿಮ ಬಂಗಾಳದಲ್ಲೂ ಆಸಕ್ತಿ ವಹಿಸಲಾಗಿದೆ. ಆದರೂ ನಿರೀಕ್ಷೆಯಷ್ಟು ಏರಿಕೆ ಆಗುತ್ತಿಲ್ಲ ಎಂಬ ಆತಂಕ ಕೂಡ ಖಗಮೃಗ ಪ್ರಿಯರಲ್ಲಿ ಕೇಳಿ ಬಂದಿದೆ.
ವಿರಳವಾಗಿದೆ ಹದ್ದುಗಳು: 1970ರ ದಶಕದಲ್ಲಿ ಒಂದು ಜಾನುವಾರು ಸತ್ತು ಬಿದ್ದಿದ್ದರೆ ಅಲ್ಲಿ ಮುನ್ನೂರಕ್ಕೂ ಅ ಧಿಕ ರಣಹದ್ದುಗಳನ್ನು ನೋಡಿದ್ದಾಗಿ ಹಿರಿಯ ಪಕ್ಷಿತಜ್ಞರಾಗಿದ್ದ ಪಿ.ಡಿ. ಸುದರ್ಶನ್ ಹೇಳುತ್ತಿದ್ದರು. 1989ರ ಸುಮಾರಿಗೆ ಸುಮಾರು 50ರಷ್ಟು ಜಾನುವಾರು ಸತ್ತಲ್ಲಿ ಲೆಕ್ಕ ಮಾಡಿದ್ದೆ ಎಂದು ವನ್ಯಜೀವಿ ತಜ್ಞ ಡಾ| ಶ್ರೀಧರ ಭಟ್ಟ ನೆನಪಿಸಿಕೊಳ್ಳುತ್ತಾರೆ. ಉತ್ತರ ಕನ್ನಡದ ಜೋಯಿಡಾದ ದಟ್ಟಾರಣ್ಯದ ನಡುವೆ ಇದೆ ಎಂದು ಕೇಳಿದ್ದೇವೆ. ಈ ಬಗ್ಗೆ ಸಮೀಕ್ಷೆ ಆದದ್ದು ಗೊತ್ತಿಲ್ಲ. ಈ ಪಕ್ಷಿ ಸಂತತಿ ಉಳಿಸಿಕೊಳ್ಳಬೇಕಿದೆ ಎನ್ನುತ್ತಾರೆ ಪರಿಸರ ತಜ್ಞ ಡಾ| ಆರ್. ವಾಸುದೇವ. ಅರಣ್ಯ ಇಲಾಖೆ ರಣಹದ್ದುಗಳ ರಕ್ಷಣೆಗೆ ಜಾಗೃತಿಯನ್ನು ವನ್ಯಜೀವಿ ಸಪ್ತಾಹದ ಭಾಗವಾಗಿ ಹಮ್ಮಿಕೊಂಡಿದೆ ಎನ್ನುತ್ತಾರೆ
– ಸಹಾಯಕ ಅರಣ್ಯಾಧಿಕಾರಿ ಆರ್. ರಘು.
– ರಾಘವೇಂದ್ರ ಬೆಟ್ಟಕೊಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.