ಗುರಿಕಾರ ಗೆಲುವು ಶತಸಿದ್ಧ: ಸಲೀಂ
ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಕಾಲ ಸನ್ನಿಹಿತ
Team Udayavani, Jun 12, 2022, 9:50 AM IST
ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಶಿಕ್ಷಕರಿಗೆ ಇಷ್ಟು ವರ್ಷಗಳವರೆಗೆ ಆಗಿರುವ ಅನ್ಯಾಯ ಸರಿಪಡಿಸಲು ಬಸವರಾಜ ಗುರಿಕಾರ ಅರ್ಹ-ಸಮರ್ಥ ವ್ಯಕ್ತಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಹೇಳಿದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಇಷ್ಟು ವರ್ಷಗಳವರೆಗೆ ನನೆಗುದಿಗೆ ಬಿದ್ದಿರುವ ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಕಾಲ ಈಗ ಸನ್ನಿಹಿತವಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಸವರಾಜ ಗುರಿಕಾರ ಗೆಲುವು ಸಾಧಿಸುವುದರೊಂದಿಗೆ ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಎಂದರು.
ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ, ದಶಕಗಳಿಂದ ಬಗೆಹರಿಯ ದೇ ಇರುವ ಶಿಕ್ಷಕರ ಬೇಕು- ಬೇಡಿಕೆಗಳನ್ನು ಈಡೇರಿಸಲು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕಾಲ್ಪನಿಕ ವೇತನ ಸಮಸ್ಯೆ 1995ರಿಂದ ಇದೆ. ಆರೋಗ್ಯ ಯೋಜನೆ ಜ್ಯೋತಿ ಸಂಜೀವಿನಿ ಸೌಲಭ್ಯ ಅನುದಾನಿತ, ಅನುದಾನರಹಿತ ಶಿಕ್ಷಕರಿಗೆ ದೊರಕಿಲ್ಲ. ವೇತನ ತಾರತಮ್ಯ ನಿವಾರಣೆಯಾಗಿಲ್ಲ. ಈ ರೀತಿ ಹಲವಾರು ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಈ ಕ್ಷೇತ್ರದ ಪ್ರತಿನಿಧಿಗಳಿಂದ ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಈ ಬೇಡಿಕೆಗಳ ಈಡೇರಿಸಲು ಸಮರ್ಥನಾಗಿದ್ದು, ಶಿಕ್ಷಕರ ಒಲವು ನನ್ನ ಕಡೆಗಿದೆ ಎಂದರು.
ವಿವಿಧೆಡೆ ಪ್ರಚಾರ: ಇಲ್ಲಿಯ ಅಂಜುಮನ್ ಸಂಸ್ಥೆ, ಯುಪಿಎಸ್ ಪಬ್ಲಿಕ್ ಶಾಲೆ, ಬಾಸೆಲ್ ಮಿಷನ್ ಪ್ರೌಢಶಾಲೆ, ಸಿಎಸ್‌ಐ ಕಾಲೇಜು, ಕಿಟೆಲ್ ಕಾಲೇಜು, ಭಾರತ ಪ್ರೌಢಶಾಲೆ, ಕೃಷಿ ವಿಶ್ವವಿದ್ಯಾಲಯ, ಪವನ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾ ಹಂಚಿನಮನಿ ಪಿಯು ಕಾಲೇಜು ಸೇರಿದಂತೆ ವಿವಿಧೆಡೆ ಪ್ರಚಾರ ಕೈಗೊಳ್ಳಲಾಯಿತು. ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಅಧ್ಯಕ್ಷ ಅನಿಲಕುಮಾರ ಪಾಟೀಲ, ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಪಿ.ಎಚ್. ನೀರಲಕೇರಿ, ಸತೀಶ ತುರಮರಿ, ಬಸವರಾಜ ಕಿತ್ತೂರ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ, ಕವಿತಾ ಕಬ್ಬೇರ ಸೇರಿದಂತೆ ಹಲವರು ಇದ್ದರು.
ಮುಲ್ಲಾ ನೇತೃತ್ವದಲ್ಲಿ ಮತಯಾಚನೆ: ಹುಬ್ಬಳ್ಳಿಯ ಗೋಕುಲ್ ರಸ್ತೆಯ ವಿಘ್ನೇಶ್ವರ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ವಿವಿಧೆಡೆ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ ನೇತೃತ್ವದಲ್ಲಿ ಮತಯಾಚಿಸಲಾಯಿತು.
ಮುಖಂಡರಾದ ಸಿದ್ಧೇಶ್ವರ ಕಾರದಕಟ್ಟಿ, ರಫೀಕ ಚವ್ಹಾಣ, ಬಸವರಾಜ್ ಬೆಣಕಲ್, ಜಗದೀಶ ಗಾಣದಾಳ, ಮುನ್ನಾ ಮುದಗಲ್, ಹಿದಾಯತ್ ಮುಜಾವರ್, ಸಂಗಮೇಶ ಗೌರಕ್ಕನವರ, ಪ್ರಶೀಲಾ ಕೊಠಾರಕರ, ವರ್ಷಾ ಕಲಾಲ್, ಲಕ್ಷ್ಮೀ ಕುಲಕರ್ಣಿ, ಆಶಿಕಾ ಬಳ್ಳಾರಿ, ವಾಣಿಶ್ರೀ ಅರಗಿಕರ್, ಮೇಘನಾ ಕುಲಕರ್ಣಿ, ರೇಣುಕಸ್ವಾಮಿ ಸೊಪ್ಪಿಮಠ, ಶ್ರೀನಿವಾಸ ಲೋಕಾಪೂರ ಇದ್ದರು.
ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ನ ಜೆಂಟ್ಸ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ಎಸ್.ಆರ್. ಬೊಮ್ಮಾಯಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಡಾ|ಬಿ.ಆರ್. ಪಾಟೀಲ್ ಮಹೇಶ್ ಪಿ.ಯು ಕಾಲೇಜ್, ಓರಿಯಂಟಲ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ಓರಿಯಂಟಲ್ ಪಿ.ಯು.ಕಾಲೇಜು, ಆರ್.ಎನ್. ಶೆಟ್ಟಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ಹೆಗ್ಗೇರಿಯ ಪವನ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ನೇಕಾರ ನಗರದ ಅಮರಜ್ಯೋತಿ ಪ್ರೌಢಶಾಲೆ, ಸಮರ್ತಿನ ಇಂಗ್ಲಿಷ್ ಮಿಡಿಯಂ ಪ್ರೌಢಶಾಲೆಯಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು. ಡಾ|ಆನಂದ ಕುಮಾರ ಬಿ.ಜಿ., ಎಸ್.ಎಂ. ರೋಣ, ಅಬಿದ್ ಜೋಡಗೆರಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.