ಮೇಲ್ಮನೆ ಚುನಾವಣೆ; ಉಪನ್ಯಾಸಕರ ಸಂಘಗಳಿಂದ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ

Team Udayavani, Oct 13, 2020, 4:41 PM IST

ಮೇಲ್ಮನೆ ಚುನಾವಣೆ; ಉಪನ್ಯಾಸಕರ ಸಂಘಗಳಿಂದ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ

ಬೆಂಗಳೂರು: ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನಪರಿಷತ್ʼಗೆ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಉಪನ್ಯಾಸಕರ ಸಂಘಗಳ ಪದಾಧಿಕಾರಿಗಳು ಒಟ್ಟಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ವಿವಿಧ ಸಂಘಗಳ ಪ್ರತಿನಿಧಿಗಳು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಚಿದಾನಂದಗೌಡ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶಿಲ್ ನಮೋಶಿ, ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಎಸ್.ವಿ.ಸಂಕನೂರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪುಟ್ಟಣ್ಣ ಅವರುಗಳು ಬಿಜೆಪಿ ಅಭ್ಯರ್ಥಿಗಳಾಗಿ ಕಣದಲ್ಲಿದ್ದು ಇವರೆಲ್ಲರಿಗೂ ಬೆಂಬಲ ನೀಡುವುದಾಗಿ ಉಪನ್ಯಾಸಕರ ಸಂಘಗಳ ಪ್ರತಿನಿಧಿಗಳೆಲ್ಲರೂ ಉಪ ಮುಖ್ಯಮಂತ್ರಿಗೆ ಭರವಸೆ ನೀಡಿದರು.

ಇದನ್ನೂ ಓದಿ :ಆರ್.ಆರ್.ನಗರ ಉಪಚುನಾವಣೆ: ವಿ.ಕೃಷ್ಣಮೂರ್ತಿಗೆ ಜೆಡಿಎಸ್ ಟಿಕೆಟ್, ನಾಳೆ ನಾಮಪತ್ರ ಸಲ್ಲಿಕೆ

ಸುಧಾರಣೆಗಳ ಮಾಹಿತಿ ವಿನಿಮಯ:
ಕಳೆದ ಒಂದು ವರ್ಷದಿಂದ ಶಿಕ್ಷಕ ಸಮುದಾಯಕ್ಕೆ ಸರಕಾರ ಮಾಡಿರುವ ಕೆಲಸಗಳು ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಗಮನದಲ್ಲಿಟ್ಟುಕೊಂಡು ಬೆಂಬಲ ನೀಡುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಜತೆಗೆ, ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸರಕಾರ ನಡೆಸುತ್ತಿರುವ ಎಲ್ಲ ಪ್ರಯತ್ನಗಳು ನಮಗೆ ಇಷ್ಟವಾಗಿವೆ. ಡಿಸಿಎಂ ಕೂಡ ಉಪನ್ಯಾಸಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ನಾವೆಲ್ಲರೂ ನಿರ್ಧರಿಸಿರುವುದಾಗಿ ಅವರು ಹೇಳಿದರು.

ಇದಕ್ಕೆ ಪೂರಕವಾಗಿ, ಒಂದು ವರ್ಷದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜಾರಿಗೆ ತಂದಿರುವ ಎಲ್ಲ ಸುಧಾರಣೆಗಳ ಸಮಗ್ರ ಮಾಹಿತಿಯನ್ನು ಉಪ ಮುಖ್ಯಮಂತ್ರಿಗಳು ಎಲ್ಲ ಶಿಕ್ಷಕರ ಪ್ರತಿನಿಧಿಗಳ ಜತೆ ಹಂಚಿಕೊಂಡರು. ಆ ಪೈಕಿ, ಬಾಕಿ ವೇತನ ಪಾವತಿ, ಹೊಸ ವೇತನ ಆಯೋಗದ ಶಿಫಾರಸುಗಳ ಜಾರಿ, ವರ್ಗಾವಣೆಯಲ್ಲಿ ಪಾರದರ್ಶಕತೆ; ಅದಕ್ಕಾಗಿ ಹೊಸ ನೀತಿ ಜಾರಿ ಮುಂತಾದ ಅಂಶಗಳ ಬಗ್ಗೆ ವಿವರಣೆ ನೀಡಿದರು.

ಇದನ್ನೂ ಓದಿ :ಐಪಿಎಲ್‌ ಆಟಗಾರರಿಗೆ ತಮ್ಮ ಫ್ರಾಂಚೈಸ್‌ ಬದಲಿಸಲು ಅವಕಾಶ; 90 ಆಟಗಾರರು ಪಟ್ಟಿಯಲ್ಲಿ

ಇವೆಲ್ಲ ಕ್ರಮಗಳ ಹಿನ್ನೆಲೆಯಲ್ಲಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಶಿಕ್ಷಕರು, “ಕಳೆದ ಒಂದು ವರ್ಷದಿಂದ ಶಿಕ್ಷಣ ಕ್ಷೇತ್ರವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ರಾಜ್ಯಕ್ಕೆ ಇದರಿಂದ ತುಂಬಾ ಒಳ್ಳೆಯದಾಗುತ್ತದೆ. ಎಸ್ಸೆಸೆಲ್ಸಿ, ಪಿಯುಸಿ, ಸಿಇಟಿ ಮತ್ತು ಪದವಿ ಪರೀಕ್ಷೆಗಳನ್ನು ಕೋವಿಡ್ ನಡುವೆಯೇ ಸಮರ್ಥವಾಗಿ ನಡೆಸಿದ್ದು ಉತ್ತಮ ಕೆಲಸ. ಇದರಿಂದ ಪೋಷಕರು- ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗಿದೆ. ಅವರ ಭವಿಷ್ಯಕ್ಕೆ ಧಕ್ಕೆ ಉಂಟಾಗುವುದು ತಪ್ಪಿದೆ. ಹೀಗಾಗಿ ನಾವೇ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದಿದ್ದೆವು. ಕೋವಿಡ್ ಕಾರಣದಿಂದ ಆ ಕಾರ್ಯಕ್ರಮವನ್ನು ನಡೆಸಲಾಗಲಿಲ್ಲ” ಎಂದು ಶಿಕ್ಷಕರು ಡಿಸಿಎಂ ಅವರಿಗೆ ತಿಳಿಸಿದರು.

ಶಿಕ್ಷಣಕ್ಕೆ ಹೆಚ್ಚು ಒತ್ತು:
ಎಲ್ಲ ಹಂತಗಳ ಶಿಕ್ಷಣಕ್ಕೆ ಅಗ್ರಆದ್ಯತೆ ನೀಡಬೇಕು ಎಂಬುದು ಸರಕಾರ ಬದ್ಧತೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈಗಾಗಲೇ ಆಗಿರುವ ಎಲ್ಲ ಸುಧಾರಣಾ ಕ್ರಮಗಳು ಕಣ್ಣಿಗೆ ಕಾಣುತ್ತಿವೆ. ಇನ್ನು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯ ಸ್ವರೂಪವೇ ಬದಲಾಗಿಬಿಡುತ್ತದೆ. ಇಡೀ ದೇಶದಲ್ಲಿ ಈ ನೀತಿಯನ್ನು ಮೊದಲು ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ. ಈ ದಿಕ್ಕಿನಲ್ಲಿ ಸರಕಾರ ಕಾರ್ಯಪಡೆಯನ್ನು ರಚಿಸಿ ಗಂಬೀರವಾಗಿ ಕೆಲಸ ಮಾಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಬಿ.ಜಿ. ಭಾಸ್ಕರ್, ಸರಕಾರಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಟಿ.ಎಂ. ಮಂಜುನಾಥ್, ರಾಜ್ಯ ಸರಕಾರಿ ಪರಿಶಿಷ್ಟ ಜಾತಿ-ವರ್ಗದ ಶಿಕ್ಷಕರ ಸಂಘದ ಅಧ್ಯಕ್ಷ ವೈ.ರಮೇಶ್, ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಮುರಳೀಧರ್ ಮುಂತಾದವರು ಉಪ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಮುಖರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ, ಎಬಿವಿಪಿ ವಲಯ ಪ್ರಭಾರಿ ಸ್ವಾಮಿ ಮಳ್ಳಾಪುರ ಮತ್ತಿತರರು ಇದ್ದರು.

ಟಾಪ್ ನ್ಯೂಸ್

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್‌ ಮುದ್ರಣ ಭರಾಟೆ; ಕ್ಯಾಲೆಂಡರ್‌-ತೂಗು ಪಂಚಾಂಗಗಳಿಗೆ ಖ್ಯಾತಿ

ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್‌ ಮುದ್ರಣ ಭರಾಟೆ; ಕ್ಯಾಲೆಂಡರ್‌-ತೂಗು ಪಂಚಾಂಗಗಳಿಗೆ ಖ್ಯಾತಿ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್‌ ಮುದ್ರಣ ಭರಾಟೆ; ಕ್ಯಾಲೆಂಡರ್‌-ತೂಗು ಪಂಚಾಂಗಗಳಿಗೆ ಖ್ಯಾತಿ

ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್‌ ಮುದ್ರಣ ಭರಾಟೆ; ಕ್ಯಾಲೆಂಡರ್‌-ತೂಗು ಪಂಚಾಂಗಗಳಿಗೆ ಖ್ಯಾತಿ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.