ನೈಋತ್ಯ ರೈಲ್ವೆ : ಮುಂದಿನ ನಾಲ್ಕು ವರ್ಷದಲ್ಲಿ ಎಲ್ಲಾ ಮಾರ್ಗದಲ್ಲಿ ವಿದ್ಯುತ್‌ ರೈಲು!

Team Udayavani, Oct 19, 2020, 12:52 PM IST

ಮುಂದಿನ ನಾಲ್ಕು ವರ್ಷದಲ್ಲಿ ಎಲ್ಲ ಮಾರ್ಗದಲ್ಲಿ ವಿದ್ಯುತ್‌ ರೈಲು!

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಮಾರ್ಗಗಳಲ್ಲಿ ವಿದ್ಯುದೀಕರಣಕ್ಕೆ ಮುಂದಾಗಿದ್ದು, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 322 ಕಿಮೀ ವಿದ್ಯುದೀಕರಣ ಮಾಡುವ ಗುರಿ ಹಾಕಿಕೊಂಡಿದೆ. ಮುಂದಿನ ನಾಲ್ಕು ವರ್ಷದಲ್ಲಿ ಮಂಜೂರಾಗಿರುವ ಎಲ್ಲಾ ಮಾರ್ಗಗಳಲ್ಲಿ ವಿದ್ಯುತ್‌ ರೈಲುಗಳನ್ನು ಓಡಿಸುವ ಯೋಜನೆ ರೂಪಿಸಿದ್ದಾರೆ.
ಡೀಸೆಲ್‌ ಎಂಜಿನ್‌ ರೈಲುಗಳನ್ನು ಓಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುವುದರ ಜತೆಗೆ ವೆಚ್ಚದಾಯಕವಾಗಿರುವ ಡೀಸೆಲ್‌ ಕೂಡ ಉಳಿತಾಯವಾಗಲಿದೆ. ಇದಕ್ಕೆ ಪರ್ಯಾಯವಾಗಿ ಭಾರತೀಯ ರೈಲ್ವೆ ಇಲಾಖೆ ವಿದ್ಯುತ್‌ ಎಂಜಿನ್‌ಗಳ ಬಳಕೆಗೆ ಮುಂದಾಗಿದ್ದು, ಇದಕ್ಕೆ ಬೇಕಾಗುವ ವಿದ್ಯುತ್‌ ದೇಶದಲ್ಲೇ ಉತ್ಪಾದಿಸಬಹುದಾಗಿದ್ದು, ಆಗ ಡೀಸೆಲ್‌ಗಾಗಿ ಅನ್ಯ ದೇಶಗಳ ಮೇಲೆ ಅವಲಂಬನೆ ಆಗುವುದನ್ನು ತಡೆಗಟ್ಟಬಹುದಾಗಿದೆ. ಅದಕ್ಕಾಗಿ ರೈಲ್ವೆ ಇಲಾಖೆ ತನ್ನ ಮಾರ್ಗಗಳಲ್ಲಿ ವಿದ್ಯುದೀಕರಣ ಕಾಮಗಾರಿ ಕೈಗೊಳ್ಳುತ್ತಿದೆ.

ನೈಋತ್ಯ ರೈಲ್ವೆಯು 2019-20ನೇ ಸಾಲಿನಲ್ಲಿ ಹುಬ್ಬಳ್ಳಿ ವಿಭಾಗದ ತೋರಣಗಲ್ಲು-ರಂಜಿತಪುರ (ಸಿಂಗಲ್‌ ಲೈನ್‌) ನಡುವೆ ಮಂಜೂರಾದ 34 ಟ್ರಾಕ್‌ ಕಿಮೀನಲ್ಲಿ 22.93 ರೂಟ್‌ ಕಿಮೀ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಳ್ಳಾರಿ – ರಾಯದುರ್ಗ (ಸಿಂಗಲ್‌ ಲೈನ್‌) ನಡುವಿನ 58.66 ಟ್ರಾಕ್‌ ಕಿಮೀನಲ್ಲಿ 52.64 ರೂಟ್‌ ಕಿಮೀ ಹಾಗೂ ತೋರಣಗಲ್ಲು-ಹೊಸಪೇಟೆ ನಡುವಿನ
34 ಟ್ರಾಕ್‌ ಕಿಮೀನಲ್ಲಿ 32ರೂಟ್‌ ಕಿಮೀ ಹಾಗೂ ಬೈಯ್ಯಪ್ಪನಹಳ್ಳಿ-ಆನೆಕಲ್ಲ ರಸ್ತೆಯ 37.4 ಟ್ರಾಕ್‌ ಕಿ.ಮೀ.ನಲ್ಲಿ 34.5ರೂಟ್‌ ಕಿ.ಮೀ. ಹಾಗೂ ಮೈಸೂರು ವಿಭಾಗದ ರಾಯದುರ್ಗ-ಥಳಕು ನಡುವಿನ 53 ಟ್ರಾಕ್‌ ಕಿ.ಮೀ.ನಲ್ಲಿ 48ರೂಟ್‌ ಕಿ.ಮೀ. ಕಾಮಗಾರಿ ಪೂರ್ಣಗೊಳಿಸಿದೆ.

ಇದನ್ನೂ ಓದಿ:ಚಿಕ್ಕೋಡಿ ಪುರಸಭೆ: ಬಿಜೆಪಿ ಮಡಿಲಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ

2019-20ನೇ ಸಾಲಿನಲ್ಲಿ ಒಟ್ಟು 217 ಟ್ರಾಕ್‌ ಕಿ.ಮೀ.ನಲ್ಲಿ 191ರೂಟ್‌ ಕಿ.ಮೀ.ನಷ್ಟು ಕಾಮಗಾರಿ ಮುಗಿಸಿದೆ.
2020-21ನೇ ಸಾಲಿನಲ್ಲಿ ಹೊಸಪೇಟೆ – ಹುಬ್ಬಳ್ಳಿ-ವಾಸ್ಕೋ (346 ಕಿ.ಮೀ.) ಮಾರ್ಗದ 193 ಕಿ.ಮೀ. ಗುರಿಯಲ್ಲಿ 161ಕಿ.ಮೀ. ರೂಟ್‌
ಕಾಮಗಾರಿ ಪೂರ್ಣಗೊಂಡಿದೆ. ಹೊಸೂರು ಮಾರ್ಗವಾಗಿ ಬೆಂಗಳೂರು-ಒಮಲೂರ (196 ಕಿ.ಮೀ.) ಮಾರ್ಗದ 85 ಕಿ.ಮೀ. ಗುರಿಯಲ್ಲಿ 38ಕಿ. ಮೀ. ರೂಟ್‌ ಹಾಗೂ ಚಿಕ್ಕಬಾಣಾವರ-ಹುಬ್ಬಳ್ಳಿ  (455 ಕಿ.ಮೀ.) ಮಾರ್ಗದ 105 ಕಿ.ಮೀ. ಗುರಿಯಲ್ಲಿ
72 ಕಿ.ಮೀ. ರೂಟ್‌ ಹಾಗೂ ಬಳ್ಳಾರಿ-ಚಿಕ್ಕಜಾಜೂರ (184ಕಿಮೀ) ಮಾರ್ಗದಲ್ಲಿನ 50 ಕಿ.ಮೀ. ಗುರಿ ಪೂರ್ಣಗೊಳಿಸಿದೆ.

ಗದಗ-ಹೂಟಗಿ (284ಕಿಮೀ) ಇದರಲ್ಲಿ 128 ಕಿ.ಮೀ.ವರೆಗೆ ಹೂಟಗಿ ಮಾರ್ಗದಲ್ಲಿ ಟಿಎಸ್‌ಎಸ್‌ನ ಅವಶ್ಯಕತೆಯಿದೆ ಹಾಗೂ
ಯಲಹಂಕ-ಬಂಗಾರಪೇಟೆ (149ಕಿಮೀ), ಲೋಂಡಾ-ಮಿರಜ್‌(189ಕಿಮೀ) ನಡುವೆ ಕೈಗೊಳ್ಳಬೇಕಿದ್ದ ಕಾಮಗಾರಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಹಾಗೂ ಕೋವಿಡ್‌-19 ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಹೀಗಾಗಿ ಈ ಮಾರ್ಗಗಳಲ್ಲಿ ಕೈಗೊಳ್ಳಬೇಕಿದ್ದ ವಿದ್ಯುದೀಕರಣ ಕಾಮಗಾರಿ ಗುರಿ ತಲುಪಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:ಕೆಕೆಆರ್ ತಂಡದಿಂದ ಅಲಿ ಖಾನ್ ಔಟ್: ಕಿವೀಸ್ ಕೀಪರ್ ಸೀಫರ್ಟ್ ಸೇರ್ಪಡೆ

2020-21ನೇ ಸಾಲಿನಲ್ಲಿ ಹೊಂದಲಾಗಿದ್ದ 630  ಕಿ.ಮೀ. ಗುರಿಯಲ್ಲಿ ನಿರೀಕ್ಷಿಸಲಾಗಿದ್ದ 322 ಕಿ.ಮೀ. ರೂಟ್‌ ಕಾಮಗಾರಿ ಪೂರ್ಣಗೊಂಡಿದೆ. ಜೋಡು ಮಾರ್ಗ ಕಾಮಗಾರಿ ಜತೆ ಜತೆಯಲ್ಲಿಯೇ ವಿದ್ಯುದೀಕರಣ ಕಾಮಗಾರಿಯನ್ನು ನೈಋತ್ಯ ರೈಲ್ವೆ
ಕೈಗೊಳ್ಳುತ್ತಿದೆ. ಈಗಾಗಲೇ ಬಳ್ಳಾರಿ-ಕಾರಿಗನೂರು ಮತ್ತು ತೋರಣಗಲ್ಲು-ರಂಜಿತಪುರ ನಡುವಿನ 89.5 ಕಿ.ಮೀ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ತೋರಣಗಲ್ಲುವರೆಗೆ ರೈಲುಗಳು ಸಂಚರಿಸುತ್ತಿವೆ. ಆಣೆಕಲ್ಲು- ಹೊಸೂರು-ಪೆರಿಯಾನಗಥುನೈ ವಿಭಾಗದಲ್ಲಿ 38 ಕಿ.ಮೀ. ರೂಟ್‌ ಇಲೆಕ್ಟ್ರಿಫೈಡ್‌ ಕಾಮಗಾರಿ ಕೈಗೊಳ್ಳಲು ಕೇಂದ್ರ ರೈಲ್ವೆ ವಿಭಾಗವು (ಸಿಆರ್‌ಎಸ್‌) ಯೋಜಿಸಿ
ಸೆಪ್ಟೆಂಬರ್‌ನಲ್ಲಿ ಪರಿಶೀಲನೆ ಮಾಡಿದೆ.

ಈ ಯೋಜನೆಯ ಭಾಗವಾಗಿ ಈ ವರ್ಷ ಹೂಟಗಿ-ಕಲಗುರ್ಕಿ (128 ಕಿಮೀ), ಘಟಪ್ರಭಾ-ಕುಡಚಿ (47 ಕಿಮೀ), ಚಿಕ್ಕಬಾಣಾವರ-ಬಾಣಸಂದ್ರ (105ಕಿಮೀ), ಹುಬ್ಬಳ್ಳಿ-ಲೋಂಡಾ (90ಕಿಮೀ), ಕಾರಿಗನೂರು-ಹುಲಕೋಟಿ (102 ಕಿಮೀ), ಕಾರಿಗನೂರು-ಹರ್ಲಾಪುರ (71ಕಿಮೀ) ಯೋಜನೆಯನ್ನು ಸಿಆರ್‌ಎಸ್‌ ಪರಿಶೀಲಿಸಿದೆ. ಥಳಕು-ಚಿತ್ರದುರ್ಗ (50ಕಿಮೀ), ಪೆರಿಯಾನಗಥುನೈ-ಪಾಲಕ್ಕೋಡ (50ಕಿಮೀ), ಯಲಹಂಕ-ದೇವನಹಳ್ಳಿ (23ಕಿಮೀ) ನಡುವೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ.
ಕೋವಿಡ್‌-19 ಲಾಕ್‌ಡೌನ್‌ ಘೋಷಣೆ ಆಗುವುದಕ್ಕಿಂತಲೂ ಮೊದಲು ನೈಋತ್ಯ ರೈಲ್ವೆಯು ವಿಜಯವಾಡ-ಹುಬ್ಬಳ್ಳಿ-ವಿಜಯವಾಡ ಹಾಗೂ ತಿರುಪತಿ-ಹುಬ್ಬಳ್ಳಿ-ತಿರುಪತಿ ಈ ಎರಡು ರೈಲುಗಳನ್ನು ಬಳ್ಳಾರಿ-ಗುಂತಕಲ್ಲ ನಡುವೆ ವಿದ್ಯುದೀಕರಣ ಎಂಜಿನ್‌ ರೈಲು ಓಡಿಸುತ್ತಿತ್ತು. ನಂತರ ಕೋವಿಡ್‌-19 ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದ ಹಿನ್ನೆಲೆಯಲ್ಲಿ ವಿದ್ಯುದ್ದೀಕರಣ ಇಂಜಿನ್‌ ರೈಲುಗಳ ಓಡಾಟ
ಸ್ಥಗಿತಗೊಳಿಸಿದೆ. ಮುಂದಿನ ದಿನಗಳಲ್ಲಿ ಮತ್ತೆ ಇವುಗಳನ್ನು ಆರಂಭಿಸುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿವೆ.

– ಶಿವಶಂಕರ ಕಂಠಿ

ಟಾಪ್ ನ್ಯೂಸ್

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.