ಕುಂದಾಪುರದಲ್ಲಿ ಸಾಧಕರಿಗೆ ಗಜರಾಜನಿಂದ ಗೌರವ : ಅಮರಾವತಿಯ ಅಮರ ವೈಭವಕ್ಕೆ ಕಳೆ ತಂದ ಐರಾವತ

ನಾನು ಉಡುಪಿಯ ಮಗಳು: ಮಂಜಮ್ಮ ಜೋಗತಿ

Team Udayavani, Mar 7, 2022, 11:29 AM IST

ಕುಂದಾಪುರದಲ್ಲಿ ಸಾಧಕರಿಗೆ ಗಜರಾಜನಿಂದ ಗೌರವ : ಅಮರಾವತಿಯ ಅಮರ ವೈಭವಕ್ಕೆ ಕಳೆ ತಂದ ಐರಾವತ

ಕುಂದಾಪುರ : ಯಕ್ಷಕಾಶಿ ಕುಂದಾಪುರದ ನೆಹರೂ ಮೈದಾನದಲ್ಲಿ ಉದ್ಯಮಿ ಮಂಜುನಾಥ್‌ ಪೂಜಾರಿ ಬೆಳ್ಳಾಡಿ ಸಾರಥ್ಯದಲ್ಲಿ ಶನಿವಾರ ಪ್ರದರ್ಶನಗೊಂಡ ಅಮರಾವತಿಯ ಅಮರ ವೈಭವವು ಗಜರಾಜನ ಆಗಮನ ಸಹಿತ ಹತ್ತಾರು ಹೊಸತನಕ್ಕೆ ಸಾಕ್ಷಿಯಾಯಿತು.

ಯಕ್ಷಗಾನಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ, ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ, ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉಡುಪಿ ಫುಡ್‌ ಹಬ್‌ನ ಡಾ| ಅಶೋಕ್‌ ಶೆಟ್ಟಿ ಬೆಳ್ಳಾಡಿ ಅವರನ್ನು ದೂರದ ಹರಿಹರ ಮಠದಿಂದ ಆಗಮಿಸಿದ ನಿಜ ಗಜರಾಜನೇ ಸಮ್ಮಾನಿಸಿದ್ದು ವಿಶೇಷವಾಗಿತ್ತು.

ಉಡುಪಿ ತವರು ಮನೆ
ಸಮ್ಮಾನ ಸ್ವೀಕರಿಸಿ ಮಾತನಾಡಿದ ಮಂಜಮ್ಮ ಜೋಗತಿ, ನಾನು ಒಂದು ರೀತಿಯಲ್ಲಿ ಉಡುಪಿಯ ಮಗಳಿದ್ದ ಹಾಗೇ. ರಾಜ್ಯದಲ್ಲಿ ಈ ಜಿಲ್ಲೆಗೆ ಬಂದಷ್ಟು ಬೇರೆ ಯಾವ ಜಿಲ್ಲೆಗೂ ಹೋಗಿಲ್ಲ. ಬಳ್ಳಾರಿಯಿಂದ ಉಡುಪಿಯ ಕುಂದಾಪುರ, ಕೋಟ, ಹೆಬ್ರಿ ಸಹಿತ ಅನೇಕ ಬಾರಿ ಕಾರ್ಯಕ್ರಮಗಳಿಗೆ ಬಂದಿದ್ದೇನೆ. ಇದು ನನ್ನ ತವರೂರು. ಊರಲ್ಲಿ ಇಲ್ಲಿಗೆ ಕೆಲವು ದಿನ ಬರದಿದ್ದರೆ ಕೇಳುತ್ತಾರೆ ನಿನ್ನ ತವರು ಉಡುಪಿಗೆ ಈ ಸಲ ಹೋಗಲ್ವಾ ಎಂದವರು ಇಲ್ಲಿನ ನಂಟಿನ ಬಗ್ಗೆ ಹೇಳಿಕೊಂಡರು.

ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಮುಂಬಯಿನ ಆದರ್ಶ್‌ ಶೆಟ್ಟಿ ಹಾಲಾಡಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ಉದ್ಯಮಿಗಳಾದ ಡಾ| ವಿಜಯಕೃಷ್ಣ ಪಡುಕೋಣೆ ಬೆಂಗಳೂರು, ಶರತ್‌ ಶೆಟ್ಟಿ ಬೆಳ್ಳಾಡಿ, ಜಗದೀಶ್‌ ಶೆಟ್ಟಿ ಕುದ್ರುಕೋಡ್‌, ಅರವಿಂದ್‌ ಪೂಜಾರಿ, ಸದಾಶಿವ ಪೂಜಾರಿ, ಸಂಘಟಕ ಮಂಜುನಾಥ್‌ ಪೂಜಾರಿ ಬೆಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.

ಯಕ್ಷ ಕವಿ ಪವನ್‌ ಕಿರಣ್ಕೆರೆ ಪ್ರಸ್ತಾವಿಸಿ, ಅವಿನಾಶ್‌ ಕಾಮತ್‌ ಸಮ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಮಹೇಶ್‌ ವಕ್ವಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ : ಹೃದಯಗಳನ್ನು ಗೆದ್ದ ಫೋಟೋ : ಪಾಕ್ ನಾಯಕಿಯ ಮಗುವಿನೊಂದಿಗೆ ಭಾರತೀಯ ತಂಡ

ಮನೆಯಿಂದ ಹೊರಹಾಕದೆ ಶಿಕ್ಷಣ ಕೊಡಿ
ಇದು ನನಗೆ ಸಿಕ್ಕ ಗೌರವವಲ್ಲ. ನನ್ನಂತೆ ಸಾಕಷ್ಟು ಮಂದಿ ಅನೇಕ ಮನೆಗಳಲ್ಲಿ ಜನಿಸಿ, ಸಂಕಷ್ಟ ಅನುಭವಿಸಿದ್ದಾರೆ. ಅವರೆಲ್ಲರ ಪ್ರತಿನಿಧಿಯಾಗಿ ನಾನು ಈ ಗೌರವ ಸ್ವೀಕರಿಸಿದ್ದೇನೆ. ದಯವಿಟ್ಟು ನಿಮ್ಮ ಮನೆಗಳಲ್ಲಿ ನನ್ನಂತೆ ಯಾರಾದರೂ ಜನಿಸಿದರೆ ಮನೆಯಿಂದ ಹೊರಹಾಕಬೇಡಿ. ಆಗ ಅವರು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಲೇಬೇಕಾಗುತ್ತದೆ. ಅದಕ್ಕಿಂತ ಶಿಕ್ಷಣ ಕೊಡಿಸಿ. ಅವರನ್ನು ವಿದ್ಯಾವಂತರನ್ನಾಗಿಸಿ, ಬದುಕು ಕಟ್ಟಿಕೊಳ್ಳಲು ನೆರವಾಗಿ ಎಂದು ಮಂಜಮ್ಮ ಜೋಗತಿ ಅವರು ತೃತೀಯ ಲಿಂಗಿಗಳ ಶೋಷನೀಯ ಬದುಕಿನ ಬಗ್ಗೆ ಗದ್ಗದಿತರಾಗಿ ನುಡಿದರು.

ವಿಶೇಷತೆಗೆ ಸಾಕ್ಷಿ
ಅಮರಾವತಿಯ ಅಮರ ಚರಿತೆ ಯಕ್ಷಗಾನ ಪ್ರದರ್ಶನವು ಹೊಸಬಗೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಅಮರಾವತಿಯ ಮೆರುಗಿಗೆ ನಿಜ ಗಜರಾಜನೇ ಆಗಮಿಸಿದ್ದು ವಿಶೇಷವಾಗಿತ್ತು. ತೆರೆದ ರಂಗಮಂಟಪದಲ್ಲಿ ಅಮರಾವತಿಯ ಅದ್ದೂರಿ ರಂಗಸಜ್ಜಿಕೆ, ಇಂದ್ರನ ಆಸನ, ಕಿನ್ನರ, ಗಂಧರ್ವರ ಆಸನಗಳು ನೋಡುಗರನ್ನು ಆಕರ್ಷಿಸಿತು. ಪ್ರಮುಖ ಒಂದೇ ದ್ವಾರವಿದ್ದು, ಅದರಲ್ಲಿ ಈಟಿ ಹಿಡಿದು ಇಬ್ಬರು ಸೈನಿಕರು ನಿಂತಿದ್ದರು. ಇನ್ನು ನಾಯಕವಾಡಿಯ ಚೆನ್ನಬಸವೇಶ್ವರ ಯುವಕ ಮಂಡಲದ ಕಂಗಿಲು ಜಾನಪದ ನೃತ್ಯ ನರ್ತನ ಗಮನಸೆಳೆಯಿತು. ಗಾನ ವೈಭವವು ರಂಗು ತಂದಿತ್ತು.

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.