ಮನಸ್ಸಿನ ಭಾವನೆಗಳ ನಡುವೆ ಕಾಣದ ಬದುಕು
Team Udayavani, Jun 7, 2020, 1:06 PM IST
ಮನಸ್ಸು ಎಂದಿಗೂ ಗೊಂದಲ, ಬದಲಾವಣೆ, ಚಿಂತೆ, ಖುಷಿ, ದುಖಗಳೊಂದಿಗೆ ಸಿಕ್ಕಿಹಾಕಿಕೊಂಡಿರುತ್ತವೆ. ಒಲವು ಮಾತ್ರ ಹಿಂದಿನ ಜೀವಿತಾವಧಿಯಿಂದ ನಮ್ಮೊಂದಿಗೆ ಇದೆ. ಮನಸ್ಸನ್ನು ಸಂತೋಷಪಡಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ. ಮನಸ್ಸು ಏನು ಹೇಳುತ್ತದೆಯೋ ಅದನ್ನು ನಾವು ಮಾಡ ಬಯಸುತ್ತೇವೆ. ನಾವು ಇಷ್ಟಪಡುತೇವೊ ಇಲ್ಲವೊ ನಮ್ಮ ಮನಸ್ಸು ಮಾತ್ರ ಜೀವನದ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಅನೇಕ ಬಾರಿ ನಾವು ಮನಸ್ಸು ಮತ್ತು ಅದರ ಆಸೆಗಳಿಗೆ ಶರಣಾಗಿ ಹೋಗುವುದಿದೆ. ಮತ್ತೇ ಪರಿತಪಿಸಿಕೊಳ್ಳುವುದೂ ಕೂಡ ಇದೇ.
ವಿಚಲಿತ ಮನಸ್ಸು ಭಾವನೆಯನ್ನು ಅರಿಯದೆ ದೂರಿದೆ , ಆದರೆ ಮನಸ್ಸು ಯೋಚಿಸು ಅಂದರೂ ಲೆಕ್ಕಿಸದೇ ದುಗುಡವನ್ನು ತಾಳಿದೆ, ಇದರಿಂದ ಕನಸು ಕೈ ಜಾರಿದೆ. ಬುದ್ದಿ ಮಾತನ್ನು ಕೇಳುವಷ್ಟರಲ್ಲಿ ಮನಸ್ಸು ತಾಳ್ಮೆಯನು ಕೆಡಿಸಿದೆ, ಆದರೆ ಒಂದು ಮಾತು ಸ್ವಂತಿಕೆಗೆ ಬರಡು ಹಿಡಿದಿತ್ತೇ ಇಲ್ಲವಲ್ಲ. ಮತ್ಯಾಕೆ ಈ ದುಗುಡ ಎಂದು ಪ್ರಶ್ನಿಸಿದೆ ಆದರೆ ಉತ್ತರ ಬಿಳಿ ಹಾಲೆಯಂತಿರುವ ಖಾಲಿ ಪುಸ್ತಕವಾಗಿದೆ. ಬದುಕು ಭಾವನೆಗಳ ನಡುವೆ ಹಲವಾರು ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಪ್ರವೇಶವಿದ್ದರೂ ಕೂಡ ಕೇವಲ ಒಂದು ಪಾತ್ರ ಅಂದರೆ ಒಂದು ವ್ಯಕ್ತಿತ್ವ ಮಾತ್ರ ಕಡೆವರೆಗೂ ಜತೆಯಲ್ಲಿರುತ್ತದೆ.ಆದರೆ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಹಾದಿಯಲ್ಲಿ ಬರುವ ಎಲ್ಲ ಪಾತ್ರವು ಬೆಳಕು ನೀಡುವುದಕ್ಕಿಂತ ಹೆಚ್ಚಾಗಿ ಕತ್ತಲಾಗಿಸುವುದು ಹೆಚ್ಚು.
ಭಾವನೆಗಳಿಲ್ಲದ ಭವನದಲ್ಲಿ ಸಿಗುವ ಸಣ್ಣ ಗಮನ ಹೇಗೆ ಬದುಕಿಗೆ ಸ್ಪೂರ್ತಿಯೋ ಹಾಗೆಯೇ ಆ ಗಮನದ ಆಗಮನ ಮತ್ತು ನಿರ್ಗಮನದ ಆಂಶಿಕ ಅಂಶಗಳು ಗೊಂದಲದೊಂದಿಗೆ ಭರವಸೆಯನ್ನು ನೀಡುತ್ತದೆ ಆದರೆ ಗೊಂದಲ ಸರಿಸಿ ಬದುಕು ಕಟ್ಟಿಕೊಳ್ಳುವ ಉತ್ಸಾಹಿ ನೀನಾಗಬೇಕಿದೆ. ಒಂದೊಂದು ಭಾವನೆಯೂ ಹೇಳುತಿದೆ ಮರೆಯಲಾಗದ ಕತೆಯನು, ಕಳೆದ ದಿನಗಳು ಮರಳಿ ಬಾರದೆ, ಇರೋ ದಿನಗಳು ಖಾಲಿಯಾದಂತೆ, ನಿಶ್ಶಬ್ದ ಆವರಿಸಿ ಮನಸ್ಸು ಮತ್ತೇ ಮೌನವ ತಾಳಿದೆ. ಸಾಧನೆಗೆ ಹೊಸ ಪಥವನ್ನು ಹುಡುಕುತಿದೆ.
ಅಲೆಗಳ ನಡುವೆ ಸಿಲುಕಿದ ಬರವಣಿಗೆಯು ಹೇಳಿತು ಅಂದು ಬದುಕ ಪಯಣದಿ ಕಲಿಯೋ ಪಾಠ ಅಳಿಸಿ ಹೋಗೋ ನೆನಪುಗಳಂತೆ. ಹೊಸ ನೆನಪುಗಳು ಹೊಸ ಆಸೆಗಳ ಸೃಷ್ಟಿಗೆ ಬುನಾದಿಯೆಂದು. ಕಳೆದು ಹೋದ ಸಮಯ ಕ್ಷಣವನ್ನು ಮರೆತು ನೂತನ ದಾರಿಯೊಂದಿಗೆ ಬದುಕಿನ ಎಲ್ಲೆಗಳ ಚಿಗುರಿಸು ಎಂದು.
ನಿಮ್ಮ ವಯಸ್ಸಿನಲ್ಲಿ ಆಧ್ಯಾತ್ಮಿಕ ಅಭ್ಯಾಸವು ಸಕಾರಾತ್ಮಕ ಫಲಿತಾಂಶಗಳನ್ನು ತ್ವರಿತವಾಗಿ ನೀಡುತ್ತದೆ. ನಿಮ್ಮ ಕೆಲಸ ಕೇವಲ ಆ ಸಕಾರಾತ್ಮಕತೆಯನ್ನು ಕೇಂದ್ರೀಕರಿಸುವುದಾಗಿದೆ. ನೀವು ದಿನಕ್ಕೆ ಎರಡು ಬಾರಿ ಧ್ಯಾನವನ್ನು ಅಭ್ಯಾಸ ಮಾಡಿದರೆ ಮನಸ್ಸಿನ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ. ಪದೇ ಪದೇ ಚಂಚಲಗೊಂಡು ಚದುರಿಹೋಗುತ್ತಿರುವ ಮನಸ್ಸು, ಲೌಕಿಕ ಅನ್ವೇಷಣೆಗಳಲ್ಲಿ ಮಗ್ನವಾಗುತ್ತದೆ. ಅರ್ಥೈಸುವ ಗುಣ ಮತ್ತು ಹೊಂದಾಣಿಕೆ ಇವೆರಡು ಜೀವನದಲ್ಲಿದ್ದರೆ ಮನಸ್ಸಿನ ಭಾವನೆಗಳ ನಡುವೆ ಕಾಣದ ಬದುಕು ಹೊಸ ಜೀವವ ಪಡೆದು ಸಾಧನೆಯ ಉತ್ತುಂಗಕ್ಕೇರುತ್ತದೆ.
– ವಿಜಿತ.ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devotee: ಟೆಂಪಲ್ ರನ್ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್
Jai Hanuman: ರಿಷಬ್ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು
Threat: ಹೆಬ್ಬಾಳ್ಕರ್ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ
Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ
Naxal Surrender: ‘ಶರಣಾಗುವಾಗ ಬಂದೂಕು ಹಿಡಿದುಕೊಂಡು ಬರುತ್ತಾರಾ?’: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
Devotee: ಟೆಂಪಲ್ ರನ್ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್
Jai Hanuman: ರಿಷಬ್ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು
Threat: ಹೆಬ್ಬಾಳ್ಕರ್ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ
Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ
Naxal Surrender: ‘ಶರಣಾಗುವಾಗ ಬಂದೂಕು ಹಿಡಿದುಕೊಂಡು ಬರುತ್ತಾರಾ?’: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.