ಗ್ರಾಮದ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಒತ್ತು ಅಗತ್ಯ

ರಸ್ತೆ, ನೀರು ಸರಬರಾಜು; ಶಾಲೆಗೆ ಮೂಲಸೌಲಭ್ಯ ಒದಗಿಸಬೇಕಿದೆ

Team Udayavani, Sep 4, 2021, 6:59 AM IST

ಗ್ರಾಮದ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಒತ್ತು ಅಗತ್ಯ

ಪಡುಪಣಂಬೂರು ಗ್ರಾಮದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಬೇಕಿದೆ. ಶಾಲೆಗೆ ಮೂಲಸೌಲಭ್ಯಗಳನ್ನು ಒದಗಿಸುವ ಜತೆಗೆ ಗ್ರಾಮದಲ್ಲಿ ರಸ್ತೆ, ನೀರು ಸರಬರಾಜು ಸಮರ್ಪಕವಾಗಿ ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

ಪಡುಪಣಂಬೂರು: ಮೂಲ್ಕಿಯ ಒಂಬತ್ತು ಮಾಗಣೆ ಪಾರಂಪರಿಕ ಜೈನ ಮನೆತನದ ಮೂಲ್ಕಿ ಅರಮನೆ ಸಹಿತ ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆಯ ಅರಸು ಕಂಬಳ ಹಾಗೂ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಪಡುಪಣಂಬೂರು ಗ್ರಾಮದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷವಾದ, ವಿಪುಲವಾದ ಅವಕಾಶಗಳಿವೆ. ಜನಪ್ರತಿನಿ ಧಿಗಳು ಸರಕಾರದ ಮೂಲಕ ಅನುಷ್ಠಾನ ತರುವ ಕಾರ್ಯ ಮಾಡಬೇಕಿದೆ.

ಪಡುಪಣಂಬೂರು ಕೃಷಿ ಮತ್ತು ಹೈನುಗಾರಿಕೆಗ ವಿಶೇಷ ಆದ್ಯತೆ ನೀಡಿರುವ ಪ್ರದೇಶ, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಕೇವಲ 100 ಮೀ. ದೂರವಿರುವ ಮೂಲ್ಕಿ ಅರಮನೆಯ ಸೊಬಗು ಅದರ ಮುಂಭಾಗದಲ್ಲಿರುವ ಬಾಕಿಮಾರು ಗದ್ದೆಯಲ್ಲಿ ಹಸುರಿನ ಹೊದಿಕೆಯ ನಡುವೆ ಇರುವ ಜೋಡುಕರೆ ಕಂಬಳದ ಪ್ರದೇಶವೇ ಆಕರ್ಷಿಣೀಯವಾಗಿದೆ. ಅದಕ್ಕೆ ಪೂರಕವಾಗಿ ಜೈನ ಬಸದಿ, ಅನಂತೇಶ್ವರ ಸಾನ್ನಿಧ್ಯ, ಜಾರಂದಾಯ ದೈವಸ್ಥಾನಗಳು, ಶನಿ ಮಂದಿರ, ಹೊಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನ, ಶ್ರೀ ಗೌರೀ ಶಂಕರ ದೇವಸ್ಥಾನ, ಕಲ್ಲಾಪು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನ, ಸಂತೆಕಟ್ಟೆ ಕದಿಕೆ ಮಸೀದಿ, ಇವೆಲ್ಲವು ಪ್ರೇಕ್ಷಣೀಯ ಸ್ಥಳಗಳಾಗಿವೆ. ನಂದಿನಿ ನದಿ ಬಳಿಯ ಹೊಗೆಗುಡ್ಡೆ ದೇವಸ್ಥಾನದ ಬಳಿ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯು ಸಹ ಹಾದು ಹೋಗಿದೆ. ಈ ಭಾಗದಲ್ಲಿ ಕುದ್ರು ಪ್ರದೇಶವಿದ್ದು ದೋಣಿ ವಿಹಾರ, ಇನ್ನಿತರ ಜಲ ಕ್ರೀಡೆಗಳ ಸಂಘಟನೆಗೆ ಮುಕ್ತ ಅವಕಾಶ ಇದೆ. ಗಾಳ ಹಾಕಿ ಮೀನು ಹಿಡಿಯುವವರ ಸಾಲುಗಳನ್ನು ಈ ಭಾಗದಲ್ಲಿ ಕಾಣಬಹುದು. ಒಂದು ಭಾಗದಲ್ಲಿ ನಂದಿನಿ ನದಿ ಕಡಲಿಗೆ ಸೇರುವ ಪ್ರದೇಶವಾದ ಬಾಂದ ಕೆರೆ, ಶಾಲೆ ಕೆರೆ, ಹೊಗೆಗುಡ್ಡೆ ಕೆರೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ನೀರಿನಾಶ್ರಯ ಇನ್ನಷ್ಟು ಹೆಚ್ಚುತ್ತದೆ.

ಇದನ್ನೂ ಓದಿ:ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ಹೋರಾಟವನ್ನು ಸದ್ಯಕ್ಕೆ ಮಾಡುವುದಿಲ್ಲ

ಶತಮಾನ ಕಂಡ ಶಾಲೆ
ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಪ್ರಾಥ ಮಿಕ ಶಾಲೆಯು ಸ್ಥಳೀಯವಾಗಿ ಅಕ್ಷರಜ್ಞಾನವನ್ನು ಪಸರಿಸಿ ಶತಮಾನ ವರ್ಷವನ್ನು ಕಂಡಿದ್ದು ಹೆದ್ದಾರಿ ವಿಸ್ತರಣೆಗಾಗಿ ನೀರಿನ ಟ್ಯಾಂಕ್‌ನ ಅವಘಡದಿಂದಾಗಿ ಶಾಲೆಯ ಕಟ್ಟಡವನ್ನು ಕೆಡವಲಾಗಿದ್ದು, ನೂತನ ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಸಮಿತಿಯು ಸಜ್ಜಾಗಿದ್ದು, ಇದು ವೇಗವನ್ನು ಪಡೆದುಕೊಳ್ಳಬೇಕಿದೆ.

ಇತರ ಸಮಸ್ಯೆಗಳೇನು?
– ಪಡುಪಣಂಬೂರು-ಸಸಿಹಿತ್ಲು ಸಂಪರ್ಕಿಸುವ ರಸ್ತೆ ವಿಸ್ತರಣೆಯಲ್ಲಿನ ಗೊಂದಲ ನಿವಾರಣೆ.
– ಸಂತೆಕಟ್ಟೆ ಪ್ರದೇಶಕ್ಕೆ ನೀರಿನ ನಿರ್ವಹಣೆಗೆ ಶಾಶ್ವತ ಯೋಜನೆ.
– ಹಳೆಯಂಗಡಿ-ಹೆದ್ದಾರಿ ತಲುಪುವ ಒಳ ರಸ್ತೆಯಲ್ಲಿ ಚರಂಡಿ ನಿರ್ಮಾಣ.
– ಪಂಚಾಯತ್‌ ಹಾಗೂ ಕಲ್ಲಾಪುವಿನ ನಡುವೆ ಇರುವ ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ.
– ನದಿ ತೀರದ ಪ್ರದೇಶದ ಕೃಷಿಕರಿಗೆ ವಿಶೇಷ ಪ್ರೋತ್ಸಾಹ.
– ಸಸಿಹಿತ್ಲು-ಹೊಗೆಗುಡ್ಡೆ ರಸ್ತೆಯ ನದಿ ಬಳಿಯ ಕುಸಿತಕ್ಕೆ ಶಾಶ್ವತ ಪರಿಹಾರ, ಸುರಕ್ಷೆ ಕ್ರಮ.
– ಗ್ರಾ.ಪಂ. ಪ್ರವೇಶಿಸುವಲ್ಲಿ ಮುಕ್ತ ಸಂಚಾರ, ಬಸ್‌ ನಿಲ್ದಾಣದ ಸ್ಥಳಾಂತರ.
– ಶಿಥಿಲಾವಸ್ಥೆಯಲ್ಲಿರುವ ಗ್ರಾಮ ಕರಣಿಕರ, ಗ್ರಂಥಾಲಯದ ಕಟ್ಟಡಕ್ಕೆ ಕಾಯಕಲ್ಪ.

 

– ನರೇಂದ್ರ ಕೆರೆಕಾಡು

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.