ಹೈಕೋರ್ಟ್‌ನಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ
ಮುಖ್ಯ ನ್ಯಾಯಾಧೀಶರ ನಕಲಿ ಸಹಿ ಮಾಡಿ ವಂಚನೆ
Team Udayavani, May 5, 2022, 2:44 PM IST
ಹುಬ್ಬಳ್ಳಿ: ಹೈಕೋರ್ಟ್ ಧಾರವಾಡ ಸಂಚಾರಿ ಪೀಠದಲ್ಲಿ ಮೇಲ್ದರ್ಜೆಯ ಸಹಾಯಕ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದಲ್ಲದೆ, ಸಂಚಾರಿ ಹೈಕೋರ್ಟ್ ನ್ಯಾಯಪೀಠ ವಿಭಾಗದ ಹೆಸರಿನಲ್ಲಿ ಖೊಟ್ಟಿ ಆದೇಶ ಪತ್ರ ತಯಾರಿಸಿ ಮುಖ್ಯ ನ್ಯಾಯಾಧೀಶರ ನಕಲಿ ಸಹಿ ಮಾಡಿ ವಂಚಿಸಿದ್ದ ಓರ್ವನಿಗೆ ಸ್ಥಳೀಯ 2ನೇ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ಬುಧವಾರ ಆದೇಶಿಸಿದೆ.
ನಗರದ ಶಂಕರಗೌಡ ಎಫ್. ಪಾಟೀಲ ಎಂಬಾತನೇ ಶಿಕ್ಷೆಗೊಳಗಾದವ. ಈತನು ಕಳ್ಳೆಪ್ಪ ಬಿ. ಮದಪ್ಪನವರ ಹಾಗೂ ರಾಮಪ್ಪ ಕೆ. ಹೊರಟ್ಟಿ ಎಂಬುವರಿಗೆ ಟಿವಿ ನ್ಯೂಸ್ ಚಾನಲ್‌ದಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಹೈಕೋರ್ಟ್ ಧಾರವಾಡ ಸಂಚಾರಿ ಪೀಠದ ಮುಖ್ಯ ನ್ಯಾಯಾಧೀಶರು ಪರಿಚಯ ಇದ್ದಾರೆ. ಅವರಿಂದ ಧಾರವಾಡ ಹೈಕೋರ್ಟ್‌ದಲ್ಲಿ ಮೇಲ್ದರ್ಜೆಯ ಸಹಾಯಕ ನೌಕರಿ ಕೊಡಿಸುವುದಾಗಿ ನಂಬಿಸಿ, 1,13,500ರೂ. ಗಳನ್ನು ಶಿಗ್ಗಾವಿಯ ತನ್ನ ಬ್ಯಾಂಕ್ ಶಾಖೆಯ ಖಾತೆ ಮೂಲಕ ಪಡೆದಿದ್ದ.
ನಂತರ ಸಂಚಾರಿ ಹೈಕೋರ್ಟ್ ನ್ಯಾಯಪೀಠ ವಿಭಾಗ ಧಾರವಾಡರವರ ಹೆಸರಿನಲ್ಲಿ ಖೊಟ್ಟಿ ಆದೇಶ ಪತ್ರ ತಯಾರಿಸಿ ಮುಖ್ಯ ನ್ಯಾಯಾಧೀಶರ ನಕಲಿ ಸಹಿ ಮಾಡಿ ಇಬ್ಬರಿಗೂ ಕೊಟ್ಟು ವಂಚಿಸಿದ್ದ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ಥಳೀಯ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕರ್ನ ಸಿಂಗ ಆರ್.ಯು. ಅವರು ಆಪಾದಿತನ ಮೇಲಿನ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ, ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಈದಾ ಗೋವಿಂದಮ್ಮಾ ಬಾಲಯ್ಯ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.