ಶಾಲಾ ಹಂತದಲ್ಲಿಯೇ ಹಾಕಿಗೆ ಪ್ರೋತ್ಸಾಹ
ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಅಣಿ
Team Udayavani, May 24, 2022, 9:21 AM IST
ಹುಬ್ಬಳ್ಳಿ: ರಾಷ್ಟ್ರೀಯ ಕ್ರೀಡೆಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ ಎನ್ನುವ ವಿಷಾದದ ನಡುವೆಯೂ ಇಲ್ಲೊಂದು ಸ್ಪೋರ್ಟ್ಸ್ ಕ್ಲಬ್ ಶಾಲೆ ಹಂತದಿಂದಲೇ ಹಾಕಿ ಬೆಳೆಸಬೇಕು ಎನ್ನುವ ಪಣ ತೊಟ್ಟಿದೆ.
ಹಲವು ವರ್ಷಗಳ ನಂತರ ಹಾಕಿ ಟೂರ್ನಿ ಆಯೋಜಿಸುವ ಮೂಲಕ ಈ ಕ್ರೀಡೆಗೆ ಇನ್ನೂ ಆಟಗಾರರ ಒಲವಿದೆ ಎಂಬುದನ್ನು ಮನಗಂಡಿದ್ದು, ಆಸಕ್ತ ಶಾಲೆ ಮಕ್ಕಳನ್ನು ಹಾಕಿಗೆ ಪ್ರೇರೇಪಿಸಿ ಶಾಲಾ ಹಂತದಲ್ಲಿ ಹಾಕಿ ಪ್ರೀತಿ ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಒಂದು ಕಾಲದಲ್ಲಿ ಹಾಕಿ ಟೂರ್ನಿಗೆ ಹೆಸರು ಮಾಡಿತ್ತು. ಕಾಲ ಬದಲಾದಂತೆ ಕ್ರಿಕೆಟ್‌ಗೆ ಮಾರು ಹೋಗುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ಕ್ರೀಡೆ ಹಾಕಿಗೆ ಸೂಕ್ತ ಪ್ರೋತ್ಸಾಹದ ಕೊರತೆಯಿಂದಾಗಿ ಆಟಗಾರರು ಕೂಡ ವಿಮುಖರಾಗುತ್ತಿದ್ದಾರೆ. ಆದರೆ ಇಲ್ಲಿನ ಗಂಗಾಧರ ನಗರ (ಸೆಟ್ಲಮೆಂಟ್)ದಲ್ಲಿ ಹಾಕಿಯೇ ಪ್ರಮುಖ ಕ್ರೀಡೆಯಾಗಿ ಉಳಿದಿದೆ. ಇಲ್ಲಿರುವ ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಈ ಭಾಗದಲ್ಲಿ ಹಾಕಿಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ. ಇತ್ತೀಚೆಗೆ ನಡೆದ ಹಾಕಿ ಟೂರ್ನಿ ಈ ಕ್ರೀಡೆಯ ಪೋಷಣೆಯಲ್ಲಿರುವ ಕ್ಲಬ್‌ಗ ದೊಡ್ಡ ಗೆಲುವು ನೀಡಿದೆ. ಇಂದಿನ ಪರಿಸ್ಥಿತಿಯಲ್ಲಿ ಹಾಕಿ ಕ್ರೀಡೆಗೆ ಯುವಕರು ಮನಸ್ಸು ಮಾಡುತ್ತಿಲ್ಲ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಹಾಕಿಗೆ ಆಟಗಾರರು ಇರಲ್ಲ ಎನ್ನುವ ಕಾರಣದಿಂದ ಶಾಲಾ ಹಂತದಲ್ಲಿ ಹಾಕಿಯನ್ನು ಬೆಳೆಸಬೇಕು ಎನ್ನುವ ಚಿಂತನೆ ಮುಂದಾಗಿದೆ.
ಎಂಟು ತಂಡಗಳ ಯೋಜನೆ: ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ಹಾಕಿ ಪಂದ್ಯಾವಳಿಗಳು ಕ್ಷೀಣಿಸುತ್ತಿವೆ. ಇದರಿಂದಾಗಿ ಹಾಕಿ ಕ್ರೀಡೆ ಕ್ಷೀಣಿಸುತ್ತಿದೆ. ಪಂದ್ಯಾವಳಿಗಾಗಿ ಬೆಂಗಳೂರು ಸೇರಿದಂತೆ ಇತರೆ ಭಾಗಗಳಿಗೆ ತೆರಳುವಂತಾಗಿದೆ. ಹೀಗಾಗಿ ನಗರದ ಎಂಟು ಶಾಲೆಗಳನ್ನು ಗುರುತಿಸಿ ಪ್ರತಿಯೊಂದು ಶಾಲೆಯಲ್ಲಿ ಒಂದು ತಂಡ ಕಟ್ಟುವುದು. ಹಾಕಿ ಕ್ರೀಡೆ ಬಯಸುವ ಹಾಗೂ ಆಸಕ್ತ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರಂಭಿಕ ತರಬೇತಿ ನೀಡುವುದು. ನಂತರದಲ್ಲಿ ಮುಂದುವರಿಯುವ ವಿದ್ಯಾರ್ಥಿಗಳಿಗೆ ಸಮರ್ಪಕ ತರಬೇತಿ ದೊರೆಯಲಿದೆ. ಎಂಟು ಶಾಲೆಗಳ ತಂಡಗಳು ರಚನೆಯಾದ ನಂತರ ಅಂತರ ಶಾಲಾ ಹಾಕಿ ಟೂರ್ನಿ ಮೂಲಕ ಮತ್ತಷ್ಟು ಜನಪ್ರಿಯಗೊಳಿಸುವುದು, ಇದರ ಮೂಲಕ ಇನ್ನಷ್ಟು ಶಾಲೆಗಳ ಮಕ್ಕಳನ್ನು ಸೆಳೆಯುವ ಯೋಚನೆಯಿದೆ. ಇದರಿಂದ ಭವಿಷ್ಯದ ಹಾಕಿ ಪಟುಗಳನ್ನು ಹುಟ್ಟಾಕುವ ಕೆಲಸವಾಗಿದೆ. ಕ್ಲಬ್‌ನ ಹಿರಿಯ ಆಟಗಾರರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಿದ್ಧರಿದ್ದಾರೆ. ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವಿಲ್ಲದೆ ತರಬೇತಿ ನೀಡುವುದು ವಿಶೇಷವಾಗಿದೆ. ಗುರುತಿಸಿದ ಶಾಲೆಯಲ್ಲಿ ಮೈದಾನವಿದ್ದರೆ ಅಲ್ಲಿಯೇ ತರಬೇತಿ ನಡೆಯಲಿದೆ. ಒಂದು ವೇಳೆ ಮೈದಾನದ ಕೊರತೆಯಿದ್ದರೆ ಕ್ಲಬ್‌ನ ಮೈದಾನದಲ್ಲಿ ತರಬೇತಿ ನೀಡಲಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ತರಬೇತಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಕಿಟ್ ಖರೀದಿಸಲು ಸಾಧ್ಯವಾಗದಿದ್ದರೆ ಕ್ಲಬ್‌ನಲ್ಲಿರುವ ಕಿಟ್ ಬಳಕೆ ಮಾಡಬಹುದು. ಇದಕ್ಕಾಗಿ ಒಂದಿಷ್ಟು ಕಿಟ್ ಖರೀದಿಗೂ ಚಿಂತನೆ ಮಾಡಿದ್ದಾರೆ. ಇನ್ನು ತರಬೇತಿ ನೀಡುವ ಕೋಚ್‌ಗಳಿಗೆ ಆಯಾ ಶಾಲೆಗಳಿಂದ ಕನಿಷ್ಟ ಗೌರವಧನ ಕೊಡಿಸುವ ಯೋಚನೆಯಿದೆ. ಒಂದು ವೇಳೆ ಶಾಲೆಯಿಂದ ಆಗದಿದ್ದರೆ ಕ್ಲಬ್ ಮೂಲಕ ದಾನಿಗಳ ನೆರವು ಪಡೆಯಲಾಗುವುದು. ರಾಷ್ಟ್ರೀಯ ಕ್ರೀಡೆ ಹಾಕಿಗೆ ಪ್ರೋತ್ಸಹ ನೀಡಲು ದಾನಿಗಳ ಕೊರತೆಯಿಲ್ಲ. ಅಂತಹವರ ನೆರವು ಪಡೆದು ಸಾಧ್ಯವಾದರೆ ವಿದ್ಯಾರ್ಥಿಗಳಿಗೆ ಕಿಟ್ ಇನ್ನಿತರೆ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ.
ರಾಷ್ಟ್ರ, ರಾಜ್ಯದ ಪಟುಗಳಿದ್ದಾರೆ: ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಈಗಾಗಲೇ ಎಲ್ಲಾ ವಯೋಮಾನದ ತಂಡಗಳನ್ನು ಮಾಡಿ ತರಬೇತಿ ನೀಡಲಾಗುತ್ತಿದೆ. ಇದೇ ಆಧಾರವಾಗಿಟ್ಟುಕೊಂಡು ಸೆಟ್ಲಮೆಂಟ್ ಹೊರತಾಗಿಯೂ ಇತರೆ ಶಾಲೆಗಳಲ್ಲಿ ತಂಡಗಳನ್ನು ಕಟ್ಟುವ ಸಾಹಸವಾಗಿದೆ. ಬ್ರಿಟೀಷರ ಕಾಲದಿಂದಲೂ ಈ ಭಾಗದಲ್ಲಿ ಹಾಕಿ ಮೈಗೂಡಿಸಿಕೊಂಡು ಇದರಲ್ಲಿ ರಾಷ್ಟ್ರ, ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಕೊಡುಗೆ ದೊಡ್ಡದು. ಇತ್ತೀಚೆಗೆ ನಡೆದ ಐಪಿಎಲ್‌ನಲ್ಲಿ ವಿನಾಯಕ ಬಿಜವಾಡ, ನವೀನ, ಇನ್ನೂ ರಾಜ್ಯ ತಂಡದಲ್ಲಿ ಮಣಿಕಂಠ ಭಜಂತ್ರಿ, ದೀಪಕ ಬಿಜವಾಡ, ಬಿಜು ಹೆರಕಲ್ಲ, ಸಹಾದೇವ ಹೆರಕಲ್ಲ ಆಡಿದ್ದಾರೆ. ಪುಂಡಲಿಕ ಬಳ್ಳಾರಿ ಇದೇ ಮೈದಾನದಿಂದ ಬೆಳೆದು ರಾಷ್ಟ್ರ ತಂಡ ಪ್ರತಿನಿಧಿಸಿದ್ದರು. ಮಂಜು ಬಳ್ಳಾರಿ, ಶ್ರೀಕಾಂತ ಗೋಕಾಕ, ಶಶಿಧರ ಕೊರವರ ಹಾಕಿ ಕೋಚ್‌ಗಳಾಗಿ ಹೆಸರು ಮಾಡಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಹಾಕಿ ಪಟುಗಳು ಈ ಭಾಗದಿಂದ ರಾಜ್ಯ ಸೇರಿದಂತೆ ಇನ್ನಿತರೆ ಟೂರ್ನಿಗಳಲ್ಲಿ ಆಡಿದ ಕೀರ್ತಿ ಹೊಂದಿದ್ದಾರೆ. ಇಷ್ಟೊಂದು ದೊಡ್ಡ ಹಾಕಿ ಬಳಗವನ್ನು ಸದ್ಬಳಕೆ ಮಾಡಿಕೊಂಡು ಇವರ ಮೂಲಕ ಹಾಕಿಗೆ ಒಂದಿಷ್ಟು ಜೀವ ತುಂಬುವ ಹಾಗೂ ಹೊಸ ಚೈತನ್ಯ ಮೂಡಿಸುವ ಕಾರ್ಯ ಕ್ಲಬ್‌ನಿಂದ ಆಗಲಿದೆ.
ಮಕ್ಕಳ ಹಾಗೂ ಶಾಲೆ ಆಸಕ್ತಿ ಗಮನಿಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಯಂಗ್ ಸ್ಟಾರ್ಸ್ ಕ್ಲಬ್ ಮೂಲಕ ಸಾಕಷ್ಟು ಪಟುಗಳು ರಾಷ್ಟ್ರ, ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರೆಲ್ಲರ ಆಸಕ್ತಿ ಹಾಕಿಯನ್ನು ಮತ್ತಷ್ಟು ಬೆಳೆಸಬೇಕು ಎಂಬುದಾಗಿದೆ. ಅವರ ಅನುಭವ ಸದ್ಬಳಕೆ ಮಾಡಿಕೊಂಡು ಶಾಲೆ ಹಂತದಲ್ಲೇ ಹಾಕಿ ಬೆಳೆಸುವ ಕೆಲಸ ಆಗಲಿದೆ. ಮಕ್ಕಳಲ್ಲಿ ಆಸಕ್ತಿಯಿದ್ದರೆ ಸಾಕು ಬೇಕಾಗುವ ಕಿಟ್ ಬಳಕೆಯನ್ನು ಕ್ಲಬ್ ಒದಗಿಸಲಿದೆ. ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ತರಬೇತಿ ನೀಡಬೇಕು ಎಂಬುದು ಕ್ಲಬ್ ಉದ್ದೇಶವಾಗಿದೆ. ಹಾಕಿ ಕ್ರೀಡೆಗೆ ಸಹಾಯ, ನೆರವು ನೀಡಲು ಕ್ರೀಡಾಸಕ್ತರಿಗೆ ಕೊರತೆಯಿಲ್ಲ. –ಚಂದ್ರಶೇಖರ ಗೋಕಾಕ, ಪ್ರಧಾನ ಕಾರ್ಯದರ್ಶಿ, ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್
–ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.