ಪ್ರಾಥಮಿಕ ಶಾಲೆ ವಿದ್ಯಾರ್ಥಿಯ ಪರಿಸರ ಕಾಳಜಿ
Team Udayavani, Jan 26, 2021, 4:54 PM IST
ಲೋಕಾಪುರ: ಪರಿಸರ ರಕ್ಷಣೆ ಜವಾಬ್ದಾರಿಯನ್ನು ಪಟ್ಟಣದ ವೆಂಕಟೇಶನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದರ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.
ಉತ್ತಮ ಪರಿಸರವಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ಪರಿಸರ ಉಳಿಸಿ-ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ 5ನೇ ತರಗತಿ ವಿದ್ಯಾರ್ಥಿ ಸುಜಿತ್ ಶ್ರೀಶೈಲ ಮಣ್ಣೂರ ಗಮನಸೆಳೆಯುವಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.
ವಿದ್ಯಾಗಮ ಯೋಜನೆ ಆರಂಭಗೊಂಡ ಬಳಿಕ ಸುಜಿತ್ ಪಠ್ಯದ ಜತೆಗೆ ಪರಿಸರ ಕಾಳಜಿ ಬೆಳೆಸಿಕೊಂಡು ಶಾಲಾ ಆವರಣದಲ್ಲಿ ಅಶೋಕ, ಬಾದಾಮ, ದಾಸವಾಳ, ಪೇಪರ್ ಪ್ಲಾವರ್, ಕಣಗಲಿ, ಮಲ್ಲಿಗೆ ಕಂಟಿ ಸೇರಿದಂತೆ 50 ಗಿಡಗಳ ಪಾಲನೆ ಮಾಡುತ್ತಿದ್ದಾನೆ. ಅನಗತ್ಯ ಕಾಲಹರಣ ಮಾಡುತ್ತಿರುವ ಇತರೆ ವಿದ್ಯಾರ್ಥಿಗಳಿಗೆ ಸುಜಿತ್‌ನ ಪರಿಸರ ಕಾಳಜಿ ಮಾದರಿಯಾಗಿದೆ. ಕಳೆದ ಒಂದು ವಾರದಿಂದ ಸುಜಿತ್ ಕಟ್ಟಿಗೆಯ ಎಳೆಯುವ ಗಾಡಿಯನ್ನು ತಯಾರಿಸಿ ಅದರಲ್ಲಿ ಮಣ್ಣಿನ ಚೀಲಗಳನ್ನು ಇಟ್ಟುಕೊಂಡು ಶಾಲೆ ಆವರಣದಲ್ಲಿರುವ ಸಸಿಗಳಿಗೆ ಮಣ್ಣು ಮತ್ತು ನೀರು ಹಾಕಿ ಸಸಿಗಳ ಪಾಲನೆ -ಪೋಷಣೆ ಮಾಡುತ್ತಿರುವುದು ವಿಶೇಷತೆಯಾಗಿದೆ.
ಶಾಲಾ ರಜೆ ಅವಧಿಯಲ್ಲಿ ಪಾಠದ ಅಭ್ಯಾಸದ ಜತೆ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆ ಆವರಣ ಸುತ್ತಲು ಸಸಿ ಬೆಳೆಸಿ ರಕ್ಷಣೆ
ಮಾಡುವುದರಲ್ಲಿ ಶಿಕ್ಷಕರ ಮೆಚ್ಚುಗೆ ಪಡೆದು ಸೈ ಎನಿಸಿಕೊಂಡಿದ್ದಾನೆ. ಶಾಲೆಯ ಸುತ್ತಲು ಉತ್ತಮ ಪರಿಸರ ನಿರ್ಮಾಣ ಮಾಡಲು ಪಣ ತೊಟ್ಟಿರುವ ಸುಜಿತ್‌ನ ಜಾಣತನದ ದಿಟ್ಟ ಹೆಜ್ಜೆಯ ಕೆಲಸ ಕಾರ್ಯಗಳಿಗೆ ಶಿಕ್ಷಕ ಬಿ.ಜಿ. ಜೋಶಿ, ವೆಂಕಟೇಶ ನಗರದ ನಿವಾಸಿಗಳು ಹಾಗೂ ಶಿಕ್ಷಕವೃಂದ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
– ಸಲೀಮ ಐ. ಕೊಪ್ಪದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.