AI ನಿಯಂತ್ರಣ ಕಾನೂನಿಗೆ ಐರೋಪ್ಯ ಒಕ್ಕೂಟ ಅಸ್ತು
ಇಂಥ ತೀರ್ಮಾನ ಕೈಗೊಂಡ ಜಗತ್ತಿನ ಮೊದಲ ಒಕ್ಕೂಟ
Team Udayavani, Dec 10, 2023, 9:42 PM IST
ಸ್ಟಾಕ್‌ಹೋಮ್: ಚಾಟ್‌ಜಿಪಿಟಿ, ಬೆರಳಚ್ಚು ಕಣ್ಗಾವಲು ತಂತ್ರಜ್ಞಾನ ಸೇರಿದಂತೆ ಕೃತಕ ಬುದ್ಧಿಮತ್ತೆ ಚಾಲಿತ ತಂತ್ರಜ್ಞಾನಗಳ ಬಳಕೆ ನಿಯಂತ್ರಿಸುವ ಹಾಗೂ ಈ ಕುರಿತು ನಿಯಮಗಳನ್ನು ರೂಪಿಸುವ ವಿಶ್ವದ ಮೊಟ್ಟ ಮೊದಲ ಎಐ ನಿಯಂತ್ರಣ ಕಾನೂನು ಜಾರಿಗೊಳಿಸಲು ಐರೋಪ್ಯ ಒಕ್ಕೂಟ ಸಮ್ಮತಿಸಿದೆ.
15 ಗಂಟೆಗಳ ಚರ್ಚೆಗಳ ಬಳಿಕ ಯುರೋಪಿಯನ್ ರಾಷ್ಟ್ರಗಳು ಹಾಗೂ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ ನಡುವೆ ಈ ಕಾನೂನು ಜಾರಿಗೆ ಒಪ್ಪಂದ ನಡೆಸಲಾಗಿದೆ. ರಾಷ್ಟ್ರಗಳಲ್ಲಿ ಯಾವುದೇ ಎಐ ಆಧಾರಿತ ತಂತ್ರಜ್ಞಾನ ಬಳಕೆಗೆ ಬರುವುದಾದರೆ ಅದಕ್ಕೂ ಮುನ್ನ ಆ ತಂತ್ರಜ್ಞಾನದ ಪಾರದರ್ಶಕತೆಯನ್ನು ಪರಮಾರ್ಶಿಸುವುದು ಅಗತ್ಯ. ಈ ನಿಟ್ಟಿನಲ್ಲಿ ತಾಂತ್ರಿಕ ದಾಖಲಾತಿಗಳನ್ನು ರಚಿಸುವುದು, ತಂತ್ರಜ್ಞಾನದಲ್ಲಿ ಬಳಕೆಯಾಗಿರುವ ವಿಷಯಗಳ ಬಗ್ಗೆ ವಿವರವಾದ ಸಾರಂಶ ಪ್ರಕಟಿಸುವುದು, ಎಐನಿಂದ ಎದುರಾಗುವ ಅಪಾಯಗಳನ್ನು ನಿಯಂತ್ರಿಸುವ ಕ್ರಮಗಳು ಸೇರಿದಂತೆ ವಿವಿಧ ರೀತಿಯ ನಿಯಂತ್ರಣ ಕ್ರಮಗಳನ್ನು ಪರಿಚಯಿಸುವ ಹಾಗೂ ಅವುಗಳನ್ನು ಉಲ್ಲಂ ಸಿದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾನೂನು ಜಾರಿಗೊಳಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ ಎಂದು ಒಕ್ಕೂಟದ ಪಾರ್ಲಿಮೆಂಟ್‌ನ ಮಹಾ ನಿರ್ದೇಶಕ ಸೆಸಿಲಾ ಬೋನೆಫಿಲ್ಸ್ ಧಾಲ್ ಹೇಳಿದ್ದಾರೆ.
ಓಪನ್‌ಎಐ ಕೋಡ್‌ಬೇಸ್ ಬಳಕೆ- ಚಾಟ್ ಜಿಪಿಟಿಗೆ ಮಸ್ಕ್ ಪ್ರತಿಕ್ರಿಯೆ
ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎಕ್ಸ್‌ನಲ್ಲಿ ಇತ್ತೀಚೆಗೆ ಬಳಸಲಾದ ಗ್ರೋಕ್ ಚಾಟ್‌ಬಾಟ್ ಚಾಟ್‌ಜಿಪಿಟಿಯ ನಿರ್ಮಾತೃ ಓಪನ್‌ಎಐನ ಕೋಡ್‌ಬೇಸ್ ಬಳಸಿದೆ ಎನ್ನುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆ ಮಸ್ಕ್ ಪ್ರತಿಕ್ರಿಯೆ ನೀಡಿ, ಓಪನ್‌ಎಐ ಅಭಿವೃದ್ಧಿಗೆ ತಾವು ಅನುದಾನ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಬಳಕೆದಾರರೊಬ್ಬರು ಮಾಲ್ವೇರ್ ಸೃಷ್ಟಿಸಲು ಗ್ರೋಕ್‌ನ ಸಹಾಯ ಕೇಳಿದಾಗ ಅದು ಸಾಧ್ಯವಿಲ್ಲ, ಇದು ಓಪನ್ ಎಐ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಗ್ರೋಕ್ ಹೇಳಿತ್ತು. ಚಾಟ್ ಜಿಪಿಟಿ ಇದೇ ವಿಚಾರ ಹಂಚಿಕೊಂಡು ನಮ್ಮಲ್ಲಿ ಬಹಳ ಸಾಮ್ಯತೆ ಇದೆ ಎಂದು ಪರೋಕ್ಷವಾಗಿ ಮಸ್ಕ್ ಸಂಸ್ಥೆಗೆ ಟಾಂಗ್ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.