Lok Sabha Polls; ಬ್ರಹ್ಮ ಬಂದು ಹೇಳಿದರೂ ಹಿಂದೆ ಸರಿಯಲಾರೆ: ಈಶ್ವರಪ್ಪ
Team Udayavani, Mar 24, 2024, 12:20 AM IST
ಶಿವಮೊಗ್ಗ ಬ್ರಹ್ಮ ಬಂದು ಹೇಳಿದರೂ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಪ್ರೀತಿ, ವಿಶ್ವಾಸವನ್ನು ಕಂಡಾಗ ಹಾಲಿ ಸಂಸದರ ಬಗ್ಗೆ ಎಷ್ಟು ಅಸಮಾಧಾನವಿದೆ ಎಂಬುದು ತಿಳಿಯುತ್ತಿದೆ. ನನಗಾದ ಅನ್ಯಾಯದ ಬಗ್ಗೆ ಜನ ಬೆಂಬಲ ನೀಡುತ್ತಿ
ದ್ದಾರೆ. ನಾನು ಗೆಲ್ಲುತ್ತೇನೆ. ಜನರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.
ಮೋದಿ ಒಂದು ಕುಟುಂಬಕ್ಕೆ ಒಂದೇ ಅವಕಾಶ ಎಂದು ಹೇಳಿದ್ದರೂ ಅದನ್ನು ಗಾಳಿಗೆ ತೂರಲಾಗಿದೆ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿದ ಮೇಲೆ ನನ್ನ ಮಗನಿಗೆ ಟಿಕೆಟ್ ಕೇಳಿದದೆ ಎಂದರು.
ಮಾ. 26ರಂದು ಸಮಾವೇಶ ನನ್ನ ಚುನಾವಣ ಜಿಲ್ಲಾ ಕಾರ್ಯಾಲಯವನ್ನು ಮನೆಯಲ್ಲೇ ಉದ್ಘಾಟಿಸುತ್ತಿದ್ದೇನೆ. ಮಾ.26ರಂದು ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಪ್ರತಿ ಬೂತ್‌ನಿಂದ ಇಬ್ಬರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ನನ್ನ ಜತೆ ಬರುವ ಕಾರ್ಯಕರ್ತರಿಗೆ ಒತ್ತಡ, ಬೆದರಿಕೆ ಹಾಕಿದರೆ ಉಪಯೋಗವಿಲ್ಲ. ಆ ರೀತಿ ಮಾಡಿದರೆ ಅವರು ಅವರಿಗೆ ಮತ ಹಾಕುವುದಿಲ್ಲ. ಬಹುತೇಕ ಜನ ಬಹಿರಂಗವಾಗಿಯೇ ಬೆಂಬಲ ಕೊಡುತ್ತಿದ್ದಾರೆ. ಈ ರಕ್ತವೇ ಬಿಜೆಪಿಯದ್ದು. ನನ್ನನ್ನು ತಾಯಿಯಿಂದ ದೂರ ಮಾಡಲು ಆಗುವುದಿಲ್ಲ. ನನ್ನ ತಾಯಿ ಭಾರತೀಯ ಜನತಾ ಪಾರ್ಟಿ.
-ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ಈಶ್ವರಪ್ಪ ಮನವೊಲಿಕೆ ಕಗ್ಗಂಟು: ರವಿಕುಮಾರ್
ಹೊಸಪೇಟೆ: ಮಾಜಿ ಸಚಿವ ಮಾಧುಸ್ವಾಮಿ ಹಾಗೂ ಸಂಸದ ಕರಡಿ ಸಂಗಣ್ಣ ಅವರ ಮನವೊಲಿಸಲಾಗಿದ್ದು, ಈಶ್ವರಪ್ಪ ಅವರದ್ದೇ ನಮಗೆ ಕಗ್ಗಂಟಾಗಿದೆ ಎಂದು ವಿಧಾನ ಪರಿಷತ್ ಸಚೇತಕ ಎನ್. ರವಿಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಯಡಿಯೂರಪ್ಪನವರೇ ಮಾಧುಸ್ವಾಮಿ ಮನೆಗೆ ತೆರಳಿ ಮನವೊಲಿಸಿದ್ದಾರೆ. ಸಂಧಾನದ ಬಳಿಕ ಮಾಧುಸ್ವಾಮಿ ಮತ್ತು ಸಂಗಣ್ಣ ಕರಡಿ ಅವರು ಬಿಜೆಪಿಯನ್ನೇ ಬೆಂಬಲಿಸುವುದಾಗಿ ಹೇಳಿದ್ದಾರೆ. ಈಶ್ವರಪ್ಪನವರ ಮನವೊಲಿಸುವ ಪ್ರಯತ್ನ ಮುಂದುವರಿದಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಗುಬ್ಬಿ ಶಾಸಕ ಶ್ರೀನಿವಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. 136 ಸ್ಥಾನ ಗೆದ್ದಾಗಿನಿಂದ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿ ಆಗಿದೆ ಎಂದರು.
ರೆಡ್ಡಿ ಬಂದರೆ ಪಕ್ಷಕ್ಕೆ ಬಲ
ಶಾಸಕ ಜನಾರ್ದನ ರೆಡ್ಡಿ ಯಾವತ್ತೂ ಬಿಜೆಪಿ ಪರ ಇದ್ದಾರೆ. ಅಖಂಡ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಅವರು ಬಿಜೆಪಿಗೆ ಬಂದರೆ ಇನ್ನಷ್ಟು ಬಲ ಬರುವುದು ಸಹಜ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫಸಲು ಏರಿಳಿತ
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.